ರಾಜ್ಯಮಟ್ಟದ ಅಧ್ಯಯನ ಶಿಬಿರ

0
16

ಹರಿಹರ :

        ದೇಶದಲ್ಲಿ ಅಂಬೇಡ್ಕರ್ ಅವರು ಕೊಟ್ಟಂತಹ ತತ್ವಸಿದ್ಧಾಂತಗಳನ್ನು ಇಟ್ಟುಕೊಂಡು ಮುಂದು ಹೋದರೆ ನಾವು ಸದೃಢ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಚೇತನ್ ಹೇಳಿದರು.

      ನಗರದ ಹೊರವಲಯದ  ಬಿ ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಡಿಎಸ್ 4 ಸಮಿತಿ ಆಯೋಜಿಸಿದ ರಾಜ್ಯಮಟ್ಟದ ಅಧ್ಯಯನ ಶಿಬಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಾಗೂ ಪ್ರೊಫೆಸರ್ ಬಿ ಕೃಷ್ಣಪ್ಪ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

        ಈ ದೇಶಕ್ಕೆ ಒಂದು ಅದ್ಭುತವಾದ ಸಂವಿಧಾನವನ್ನು ಕೊಟ್ಟಂತ ಡಾ. ಬಿಆರ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಸ್ಮರಿಸಬೇಕು ಹಾಗೂ ನಮಗೆ ಅದರ ಬಗ್ಗೆ ಸಂಪೂರ್ಣವಾಗಿ ನಂಬಿಕೆ ಇರಬೇಕು .ಅಂಬೇಡ್ಕರ್ ಅವರು ಕೊಟ್ಟಂತಹ ತತ್ವಸಿದ್ಧಾಂತಗಳನ್ನು ಇಟ್ಟುಕೊಂಡು ಮುಂದು ಹೋದರೆ ನಾವು ಸದೃಢ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಬಹುದು ಎಂದರು.

      ಈ ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆಯ ಅವಕಾಶವಿದೆ ಶಿಕ್ಷಣದ ಅವಕಾಶವಿದೆ ಇದನ್ನು ಸರಿಯಾಗಿ ಬಳಸಿಕೊಂಡರೆ ಅಂಬೇಡ್ಕರ್ ಕಂಡಂಥ ಕನಸಿನ ಭಾರತವನ್ನು ನಿರ್ಮಾಣ ಮಾಡಬಹುದು ಎಂದರು. ಹಾಗೂ ಡಿಎಸ್ ಪೋರ್ನ್ ಸಮಿತಿಯವರು ರಾಜ್ಯದಲ್ಲಿನ ದಲಿತ ಶೋಷಿತ ವರ್ಗದವರಿಗೆ ನ್ಯಾಯವನ್ನು ಕೊಡಿಸುವಲ್ಲಿ ಮುಂದಾಗಲಿ ಹಾಗೂ ಇನ್ನೂ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂದು ತಿಳಿಸಿದರು.

     ಸಮಾಜದಲ್ಲಿ ಒಂದು ಒಳ್ಳೆಯ ಬದಲಾವಣೆ ತರಬೇಕಾದರೆ ಅದಕ್ಕೆ ಬೇಕಾದಂಥ ಜ್ಞಾನದ ಸಂಪತ್ತನ್ನು ತಿಳಿದು ಕೊಂಡಿರಬೇಕಾಗುತ್ತದೆ. ಈ ರೀತಿಯಾಗಿ ಡಿಎಸ್ ಪೋರ್ನ್ ಸಮಿತಿಯವರು ಆ ಜ್ಞಾನವನ್ನು ಕೊಡಲಿಕ್ಕೆ ಶಿಬಿರವನ್ನು ಆಯೋಜನೆ ಮಾಡಿರುವುದು ತುಂಬಾ ಸಂತೋಷದ ನೀಡಿದೆ ಈ ಎರಡು ದಿನದಲ್ಲಿ ನಡೆಯುವ ಗೋಷ್ಠಿಯಲ್ಲಿ ಹಲವು ಮಹತ್ವದ ವಿಚಾರಗಳನ್ನು ಇಟ್ಟುಕೊಂಡಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದರು.

     ಶೋಷಿತ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಶೋಷಿತರನು,ದಲಿತರನ್ನು ಯಾವ ರೀತಿ ಮೇಲೆತ್ತಬೇಕು ಅವರಿಗೆ ಯಾವ ರೀತಿ ನ್ಯಾಯ ಕೊಡಿಸಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕು. ಹಾಗೂ ಅವರನ್ನು ಹೇಗೆ ಸರಿದಾರಿಯಲ್ಲಿ ತೆಗೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ಈ ಸಮಿತಿಯವರು ಮುಂದಿನ ದಿನಗಳಲ್ಲಿ ಶಿಬಿರಗಳನ್ನು ಮಾಡುವುದರ ಮುಖಾಂತರ ಸಮಾಜದ ಮುಖ್ಯವಾಹಿಗೆ ತರಬೇಕು ಎಂದರು .

      ನಂತರ ಡಾಕ್ಟರ್ ಎಚ್ ವಿಶ್ವನಾಥ್ ಮಾತನಡಿ ಈ ದೇಶ ಶಾಂತಿಯುತವಾಗಿ ರುವುದು ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಈ ದೇಶದಲ್ಲಿ ಜಾತ್ಯತೀತವಾಗಿ ಸಮಾನತೆಗಾಗಿ ಹೋರಾಡಿದ ಏಕೈಕ ವ್ಯಕ್ತಿ ಅಂಬೇಡ್ಕರ್ ಅವರು ಅವರ ತತ್ವ ಸಿದ್ಧಾಂತಗಳನ್ನು ನಾವು ಪಾಲಿಸಬೇಕು ಎಂದರು.

       1932ರಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಡಾ ಬಿಆರ್ ಅಂಬೇಡ್ಕರ್ ಅವರು ಹೋರಾಟ ಮಾಡಿ ಮತದಾನದ ಹಕ್ಕನ್ನು ಕೊಡಿಸದಿದ್ದರೆ ಇಂದು ಯಾರೂ ನಾವು ಮತಗಳನ್ನು ಚಲಾಯಿಸುವಂತೆ ಇರುತ್ತಿರಲಿಲ್ಲ. ಅಂಬೇಡ್ಕರ್ ಕೇವಲ ಒಂದು ಸಮುದಾಯಕ್ಕೆ ಹೋರಾಡಿದವರಲ್ಲ ಸಮಾನತೆಗಾಗಿ ಹೋರಾಡಿದವರು ಎಂಬುದನ್ನು ನಾವೆಲ್ಲರೂ ಮರೆಯುವಂತಿಲ್ಲ ಎಂದರು .

       ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವೆಲ ವೆಂಕಟಗಿರಿಯಯ್ಯ ಅವರು ಮಾತನಾಡಿ ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ ಮುಂಚೆಯೇ ಪ್ರಪಂಚದ ಹಲವಾರು ದೇಶಗಳ ಸಂವಿಧಾನ ರಚನೆ ಮಾಡಿಕೊಂಡಿದ್ದವು ಆದರೆ ದೇಶದ ಸಂವಿಧಾನ ರಚನೆ ಆದ ಮೇಲೆ ಹಲವು ದೇಶದವರು ನಮ್ಮ ದೇಶದ ಸಂವಿಧಾನವನ್ನು ಅನುಸರಿಸತೊಡಗಿದರು ಎಂದು ತಿಳಿಸಿದರು.

      ಪ್ರಪಂಚದ ಯಾವ ದೇಶದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಿಗಾಗಿ ಮಹತ್ವ ನೀಡಿರಲಿಲ್ಲ .ಅದಕ್ಕಾಗಿಯೇ ನಮ್ಮ ದೇಶದ ಸಂವಿಧಾನವನ್ನು ಪ್ರಪಂಚದ ಹಲವು ದೇಶಗಳು ಅನುಕರಣೆ ಮಾಡುತ್ತಿರುವುದು ಮಹತ್ವದ ವಿಷಯವಾಗಿದೆ ಎಂದರು.

       ಆದರೆ ನಮ್ಮ ದೇಶದ ಕೆಲ ಮನುವಾದಿ ರಾಜಕಾರಣಿಗಳು ಅವರ ವೈಯಕ್ತಿಕ ಲಾಭಕ್ಕಾಗಿ ಕೊಲೆ ಅತ್ಯಾಚಾರದಂಥ ಕ್ರೂರ ಕೃತ್ಯಗಳನ್ನು ಮಾಡಿಸಿ ದಲಿತರು ಹೋರಾಟ ಮಾಡಿಕೊಂಡು ಕಾಲಹರಣ ಮಾಡಲಿ ಎಂದು ಹಾಗೂ ಶೈಕ್ಷಣಿಕವಾಗಿ ರಾಜಕೀಯವಾಗಿ ದಲಿತರು ಮುಂದೆ ಬರಬಾರದೆಂದು ಹಲವು ರೀತಿಯ ಕೃತ್ಯಗಳನ್ನು ನಡೆಸಿ ದಲಿತರನ್ನು ತುಳಿಯುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು .
ಅದಕ್ಕಾಗಿ ನಾವು ಮೊದಲು ಶೈಕ್ಷಣಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.

        ಈ ಕಾರ್ಯಕ್ರಮದ ವೇದಿಕೆಯಲ್ಲಿ ನೂರಾರು ಜನರ ಸಮ್ಮುಖದಲ್ಲಿ ಒಂದು ಅಂತರ್ಜಾತಿ ವಿವಾಹವನ್ನು ನೇರವೇರಿಸಲಾಯಿತ್ತು,
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಹೆಗ್ಗೇರಿ ರಂಗಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಕೆಸಿ ಮೂರ್ತಿ ಬೆಳ್ಳಿಗನೂಡು,ನಗರಸಭಾ ಸದಸ್ಯರಾದ ಸೈಯದ್ ಏಜಾಜ್, ಟಿ ಬಸವರಾಜ್, ಕೃಷ್ಣಪ್ಪ, ಕೆ ಬಾಬುರಾವ್, ಡಿ ವೆಂಕಟೇಶ್, ಗಣೇಶ್ ಪೂಜಾರ್, ನಿರಂಜನ ಮೂರ್ತಿ, ಎಬಿ ರಾಮಚಂದ್ರಪ್ಪ, ಸಂತೋಷ್ ನೋಟದ, ವರ್ಕ್ ತಾಲೂಕಾಧ್ಯಕ್ಷ ರಾದ ಮಂಜುನಾಥ್, ವಿನಾಯಕ್, ಮಾಲತೇಶ್ , ಪೊಲೀಸ್ ವೃತ್ತ ನಿರೀಕ್ಷಕರಾದ ಗುರುನಾಥ್, ಗ್ರಾಮಾಂತರ ಠಾಣೆಯ ಪಿಎಸ್‍ಐ ರಾದ ಸಿದ್ದೇಗೌಡರು, ಪಿಎಸ್‍ಐ ಮೇಘರಾಜ್, .ಹಾಗೂ ಹಲವು ದಲಿತ ಮುಖಂಡರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here