ಟಿಪ್ಪು ಜಯಂತಿ ಆಚರಣೆ ರದ್ಧತಿಗೆ ಆಗ್ರಹ

0
8

ದಾವಣಗೆರೆ:

     ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸಲು ಕೈಗೊಂಡಿರುವ ನಿರ್ಧಾರವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 

     ಸಮಿತಿಯ ಮುಖಂಡರಾದ ಎಸ್.ಟಿ.ವೀರೇಶ್ ನೇತೃತ್ವದಲ್ಲಿ ಎಸಿ ಕಚೇರಿಗೆ ನಿಯೋಗದಲ್ಲಿ ತೆರಳಿದ ಸಮಿತಿಯ ಪದಾಧಿಕಾರಿಗಳು, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ರಾಜ್ಯ ಸರ್ಕಾರ ತಕ್ಷಣವೇ ಟಿಪ್ಪು ಜಯಂತಿಯನ್ನು ಆಚರಿಸಿರುವ ನಿರ್ಧಾರವನ್ನು ರದ್ದು ಮಾಡಿ, ಹಿಂದುಗಳಿಗೆ ಮಾಡಲು ಹೊರಟಿರುವ ಆಘಾತವನ್ನು ತಡೆಯಬೇಕೆಂದು ಆಗ್ರಹಿಸಿದರು.

      ದೇಶದ ಇತಿಹಾಸದಲ್ಲಿಯೇ ಟಿಪ್ಪು ಸುಲ್ತಾನನಷ್ಟುಯ ಹಿಂದುಗಳ ಹತ್ಯೆ ನಡೆಸಿದ, ದೇವಾಲಯಗಳನ್ನು ಭಗ್ನಗೊಳಿಸಿದ, ಮತಾಂತರಿಸಿದ ರಾಜ ಮತ್ತೊಬ್ಬರಿಲ್ಲ. ಹೀಗಿದ್ದರೂ ಟಿಪ್ಪು ಒಬ್ಬ ರಾಷ್ಟ್ರೀಯವಾದಿ, ಸ್ವಾತಂತ್ರ್ಯ ಹೋರಾಟಗಾರ ಎಂಬುದಾಗಿ ಬಿಂಬಿಸುತ್ತಿರುವುದು ಹಾಸ್ಯಸ್ಪದವಾಗಿದೆ. ಕೇರಳದ ಇತಿಹಾಸಕಾರ ಕೆ.ಎಂ.ಫಣಿಕ್ಕರ್, ಟಿಪ್ಪು ತನ್ನ ಸೇನಾಪತಿಗಳಿಗೆ ಮತ್ತು ಇತರರಿಗೆ ಬರೆದಿರುವ ಅನೇಕ ಪತ್ರಗಳನ್ನು ಅನುವಾದಿಸಿ ಪ್ರಕಟಿಸಿದ್ದು, ಟಿಪ್ಪು ತಾನು ಬರೆದಿರುವ ಪತ್ರಗಳಲ್ಲಿ ಅಮಾನುಷವಾಗಿ ನಡೆಸಿರುವ ಹತ್ಯೆಗಳ ಬಗ್ಗೆ.

          ಸಾವಿರಾರು ಸಂಖ್ಯೆಯ ಹಿಂದುಗಳು ಮತ್ತು ಕ್ರೈಸ್ತರನ್ನು ಕೊಂದು ಮತಾಂತರಿಸಿರುವ ಬಗ್ಗೆ ವಿವರಿಸಿದ್ದಾನೆ. ಅಲ್ಲದೆ, ಫ್ರೆಂಚ್‍ನ ನೆಪೋಲಿಯನ್‍ನನ್ನು ಭಾರತದ ಮೇಲೆ ದಂಡೆತ್ತಿ ಬರಲು ಕೋರಿದ್ದ, ಮುಸ್ಲಿಂ ರಾಷ್ಟ್ರಗಳ ರಾಜರುಗಳಿಗೆ ಪತ್ರ ಬರೆದು ಭಾರತದ ಮೇಲೆ ದಂಡೆತ್ತಿ, ಬಂದು ಭಾರತವನ್ನು ಮುಸ್ಲಿಂ ರಾಜ್ಯವನ್ನಾಗಿ ಪರಿವರ್ತಿಸುವಂತೆ ಕೋರಿದ್ದ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಕರ್ನಾಟಕ ಮತ್ತು ಕೇರಳ ರಾಜ್ಯಗಳ ಸುಮಾರು 8 ಸಾವಿರ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದ ಟಿಪ್ಪು ಸುಲ್ತಾನ್, ಮಲಬಾರ್ ಮತ್ತು ಪರಂಬು ಹತ್ಯಾಕಾಂಡಗಳ ಮೂಲಕ ಇತಿಹಾಸದಲ್ಲಿಯೇ ಯಾರೂ ನಡೆಸದಷ್ಟು ಪ್ರಮಾಣದಲ್ಲಿ ನರಮೇಧ ನಡೆಸಿದ್ದ.

         ಅಲ್ಲೆದೆ, ಈತನ ಆಡಳಿತದಲ್ಲಿ ದಿವಾನ್ ಪೂರ್ಣಯ್ಯ ಅವರ ಮಗಳು ಸೇರಿದಂತೆ ಹಲವು ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆದಿವೆ. ರಾಣಿ ಲಕ್ಷ್ಮೀ ಅಮ್ಮಣ್ಣಿ ಸೇರಿದಂತೆ ಮೈಸೂರು ರಾಜಮನೆತನವನ್ನು ಗೃಹ ಬಂಧನದಲ್ಲಿ ಇಟ್ಟಿರುವ ಬಗ್ಗೆ ಹಲವು ಪುರಾವೆಗಳಿವೆ. ಟಿಪ್ಪು ಸುಲ್ತಾನನ ಕರಾಳ ಕೃತ್ಯಗಳಿಗೂ ಹಾಗೂ ನರಕ ಚತುರ್ದಶಿಗೂ ಅವಿನಾಭಾವ ನಂಟಿದೆ. 700 ಮಂಡಯಂ ಅಯ್ಯಂಗಾರಿ ಕುಟುಂಬಗಳನ್ನು 1970ರ ನರಕ ಚತುರ್ದಶಿಯ ದಿನದಂದು ನಿದ್ಯವಾಗಿ ಕೊಂದು ಹಾಕಿದ್ದ. ಈ ಕಾರಣಕ್ಕೆ ಇಂದಿಗೂ ಮಂಡಯಂ ಅಯ್ಯಂಗರ್ ಕುಟುಂಬಗಳು ನರಕ ಚತುರ್ದಶಿ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಿವೆ. ಈ ಎಲ್ಲಾ ಕಾರಣಗಳಿಂದ ಟಿಪ್ಪು ಸುಲ್ತಾನ್ ಹಿಂದೂ ವಿರೋದಿ ಹಾಗೂ ಮತಾಂಧನಾಗಿದ್ದಾನೆ. ಆದ್ದರಿಂದ ತಕ್ಷಣವೇ ಟಿಪ್ಪು ಜಯಂತಿ ಆಚರಿಸುವ ನಿರ್ಧಾರವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

         ನಿಯೋಗದಲ್ಲಿ ಸಮಿತಿಯ ಮಂಜುನಾಥ್ ಎಸ್.ಆರ್, ರಾಕೇಶ್, ಮಲ್ಲಿಕಾರ್ಜುನ್, ಮೋಹನ್, ಆನಂದ್, ಕಿರಣ್, ಮಹೇಶ್, ಪುಲೈ, ಪ್ರಕಾಶ್, ಮಂಜು ಪೈ, ಸಂದೀಪ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here