ಕುವೆಂಪು ನಗರದಲ್ಲಿ ಬೀದಿ ನಾಯಿಗಳ ಹಾವಳಿ

0
38

ತುಮಕೂರು 

       ತುಮಕೂರು ನಗರದಲ್ಲಿ ಬೀದಿನಾಯಿ ಹಾವಳಿ ಇರುದು ಎಲ್ಲರಿಗೂ ಗೊತ್ತಿರುವ ಸತ್ಯ ಆದರೆ ಪ್ರತಿಷ್ಟಿತರ ಏರಿಯಾ ಆದ ಕುವೆಂಪು ನಗರದ 2ನೇ ಬ್ಲಾಕ್ 3ನೇ ಕ್ರಾಸಿನಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನರು ಭಯ ಪಡುವ ಸ್ಥಿತಿ ಬಂದೊದಗಿದೆ.

       ಕುವೆಂಪು ನಗರದಲ್ಲಿ ಸುಮಾರು 18-20 ಬೀದಿ ನಾಯಿಗಳಿದ್ದು ಅವು ದಿನಾ ಬೆಳಿಗ್ಗೆ ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗುವ ಸಂದರ್ಭದಲ್ಲಿ ಬೀದಿ ನಾಯಿಗಳು ಮಕ್ಕಳಿರುವಲ್ಲಿಗೆ ಬಂದು ಮತ್ತಿಕೊಳ್ಳುತ್ತವೆ ಮತ್ತು ಮಕ್ಕಳ ಬೀದಿನಾಯಿಯ ಕಾರಣದಿಂದಾಗಿ ಆಟವಾಡಲು ಸಹ ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ, ನಮ್ಮ ವಾರ್ಡಿನ ಪಾಲಿಕೆ ಸದಸ್ಯರಿಗೆ ದೂರು ಕೊಟ್ಟರೆ ಅವರು ಬೀದಿ ನಾಯಿ ಹಿಡಿಯಲು ಪಾಲಿಕೆಯಲ್ಲಿ ದುಡ್ಡು ಇಲ್ಲವೆಂದು ಸಬೂಬು ಹೇಳುತ್ತಾರೆ ಎಂದು ಸಾರ್ವಜನಿಕರು ಪ್ರಜಾಪ್ರಗತಿಗೆ ಕರೆ ಮಾಡಿ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.    

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here