ಭ್ರಷ್ಟಾಚಾರ ತಡೆ ಸಪ್ತಾಹದ ಅಂಗವಾಗಿ ಬೀದಿ ನಾಟಕ

0
9

ಹಾನಗಲ್ಲ :

      ಭ್ರಷ್ಟಾಚಾರ ನಿಗ್ರಹ ದಳ ಇದೀಗ ಎಸಿಬಿಯಾಗಿ ಪರಿವರ್ತನೆಯಾಗಿದ್ದು, ಸಾರ್ವಜನಿಕರಿಂದ ಅಧಿಕಾರಿಗಳು ಲಂಚಕ್ಕಾಗಿ ಆಮಿಷ ಒಡ್ಡಿದರೆ ಅಥವಾ ಕಾರ್ಯ ವಿಳಂಬ ತೋರಿದ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ನಿರೀಕ್ಷಕ ಬಸವರಾಜ ಹಳೆಗೊಣ್ಣನವರ ಕರೆ ನೀಡಿದರು.

       ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರು ಹಾಗೂ ಕುಮಾರೇಶ್ವರ ಬಿಇಡಿ ಕಾಲೇಜ್ ಆವರಣದಲ್ಲಿ ಭ್ರಷ್ಟಾಚಾರ ತಡೆ ಸಪ್ತಾಹದ ಅಂಗವಾಗಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ಬೀದಿನಾಟಕ ಪ್ರದರ್ಶನ ನಡೆಸಿ ಅವರು ಮಾತನಾಡಿದರು. ಯಾವುದೇ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ಹಣ ಕೇಳಿದರೆ, ಅನವಶ್ಯಕವಾಗಿ ಕಾಲಹರಣ, ಸತಾಯಿಸುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳ ಗಮನ ಸೆಳೆದು ದೂರು ಸಲ್ಲಿಸಬಹುದಾಗಿದೆ.

       ಸರ್ಕಾರದ ಯೋಜನೆ-ಸೌಲಭ್ಯಗಳು, ಸಹಾಯಧನಗಳ ನೀಡಿಕೆಯಲ್ಲಿ ಅವ್ಯವಹಾರಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಇಂಥ ಸಂದರ್ಭದಲ್ಲಿ ಅಧಿಕಾರಿಗಳು ಹಣಕ್ಕೆ ಒತ್ತಾಯಿಸಿದರೆ ಕೂಡಲೇ ಎಸಿಬಿ ಸಹಾಯಕ್ಕೆ ಬರಲಿದೆ. ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಹಾವೇರಿ(08375-235533, 9480806229, 9480806289, 9480806290) ಇವರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

        ಬೀದಿ ನಾಟಕದಲ್ಲಿ ಕೆ.ಆರ್.ಹಿರೇಮಠ, ಶಂಕರ್ ತಮ್ಮಣ್ಣನವರ, ಹನುಮಂತಪ್ಪ ಕರವಳ್ಳಿ, ಮಾಲತೇಶ ಕುರುಬಗೊಂಡ, ಶಶಿಕಲಾ ಅಕ್ಕಿ ಲತಾ ಪಾಟೀಲ, ಅಧಿಕಾರಿಗಳಾದ ಮಾಲತೇಶ ಅರಸಿಕೆರೆ, ಡಿ.ಪಿ.ಹುರಳಿಕುಪ್ಪಿ ಇತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here