ವಕೀಲ ಮೇಲೆ ಹಲ್ಲೆ : ಪಿಎಸ್.ಐ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹ

ಹೊಳಲ್ಕೆರೆ

        ಚಿತ್ರದುರ್ಗ ನ್ಯಾಯಾಲಯದ ವಕೀಲ ಪ್ರತಾಪ್‍ಕುಮಾರ್ ಜೋಗಿ ಅವರ ಮೇಲೆ ಜ.6ರಂದು ಹೊಳಲ್ಕೆರೆ ಸಬ್‍ಇನ್ಸಕ್ಟರ್ ಮಹೇಶ್ ಅವರು ಅನುಚಿತವಾಗಿ ವರ್ತನೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅವರ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಸ್ಥಳೀಯ ನ್ಯಾಯಾಲಯಗಳ ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಿಗೆ ಗೈರಾಗಿ ಪಿಎಸ್.ಐ ವಿರುಧ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ವಕೀಲರ ಸಂಘ ಖಂಡನಾ ನಿರ್ಣಯವನ್ನು ತೆಗೆದುಕೊಂಡಿದೆ.

        ಕಾರಣ: ಚಿತ್ರದುರ್ಗ ನಗರಕ್ಕೆ ಜೆ.ಡಿ.ಎಸ್. ವರಿಷ್ಠ ಹೆಚ್.ಡಿ.ದೇವೆಗೌಡ ಆಗಮಿಸಿದ್ದ ಅವರು ತಂಗಿದ್ದ ಪ್ರವಾಸಿ ಮಂದಿರದ ಕೊಠಡಿಯೊಳಗೆ ಪ್ರವೇಶ ಮಾಡಲು ಬಾಗಿಲಿಗೆ ಹೋದಾಗ ಪಿಎಸ್.ಐ ಮಹೇಶ್ ವಕೀಲ ಪ್ರತಾಪ್ ಕುಮಾರ್ ಜೋಗಿ ಅವರನ್ನು ಒಳಗಡೆ ಹೋಗಲು ತಡೆ ಹಿಡಿದರು. ಪ್ರತಾಪ್ ಕುಮಾರ್ ಜೋಗಿ ಜಿಲ್ಲಾ ಜೆಡಿಎಸ್. ಯುವ ಘಟಕದ ಅಧ್ಯಕ್ಷರಾಗಿದ್ದರಿಂದ ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿ ಮಾಡಲು ಯತ್ನಿಸಿದಾಗ ಈ ಘಟನೆ ಸಂಭವಿಸಿದೆ.

         ಹಲ್ಲೆ ಮಾಡಿದ ಸಬ್ ಇನ್ಸಪಕ್ಟರ್ ಮಹೇಶ್ ವಿರುದ್ದ ಪೋಲೀಸ್ ದೂರು ಪ್ರಾಧಿಕಾರಕ್ಕೆ ದೂರನ್ನು ನೀಡುವುದು ಅವರ ವಿರುರ್ದದ ಅಧಿಕಾರಿಗಳು ಕಾನೂನು ಕ್ರಮ ಜರುಗಿಸದಿದ್ದಲ್ಲಿ ಅವರ ಮೇಲೆ ಖಾಸಗಿ ದೂರನ್ನು ನ್ಯಾಯಾಲಯದಲ್ಲಿ ಸಲ್ಲಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

         ಹಲ್ಲೆ ಮಾಡಿದ ಆರೋಪಿ ಪಿಎಸ್ ಐ ಪರವಾಗಿ ಯಾವುದೇ ವಕೀಲರು ವಕಾಲತ್ತನ್ನು ವಹಿಸಬಾರದೆಂದು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪಿಎಸ್ ಐ ಮಹೇಶ್ ಅವರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ವಕೀಲರ ಸಂಘ ಆಗ್ರಹಿಸಿದೆ.ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪ್ರದೀಪ್ ಜಿ.ಪಿ., ಮುಂತಾದ ವಕೀಲರುಗಳು ಸಭೆಯಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap