ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ಸುನೀಲ್ ಕುಮಾರ್ ಯಶಸ್ವಿ

ಬೆಂಗಳೂರು

        ಡಿಸೆಂಬರ್ ತಿಂಗಳಾಂತ್ಯಕ್ಕೆ ಒಂದು ವರ್ಷ ಪೂರೈಸಲಿರುವ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ಮಾತ್ರವಲ್ಲ ಪತ್ತೆ ಕಾರ್ಯದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.

        ಇತ್ತೀಚಿಗೆ ಖ್ಯಾತ ನಟ ಅಂಬರೀಷ್ ಅಂತ್ಯಕ್ರಿಯೆಯು ಯಾವುದೇ ರೀತಿಯ ಗಲಾಟೆಯಾಗದಂತೆ ಶಾಂತಯುತವಾಗಿ ನಡೆಸಿದ ಕೀರ್ತಿಗೆ ಪಾತ್ರರಾಗಿರುವ ಸುನೀಲ್‍ಕುಮಾರ್ ತಮ್ಮ ಒಂದು ವರ್ಷದ ಅಧಿಕಾರವಧಿಯಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿಯೂ ತೊಂದರೆ ಎದುರಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

       ಹಿಂದಿನ ಯಾವ ಪೊಲೀಸ್ ಆಯುಕ್ತರುಗಳ ಅವಧಿಯಲ್ಲೂ ಆಗದಷ್ಟು ಹೆಚ್ಚಿನ ಅಪರಾಧ ಪತ್ತೆಕಾರ್ಯವನ್ನು ಕೈಗೊಂಡಿರುವ ಸುನೀಲ್ ಕುಮಾರ್ ವರ್ಗಾವಣೆಯ ಹೊಸ್ತಿನಲ್ಲಿದ್ದಾರೆ ನಗರದಲ್ಲಿ ಈ ವರ್ಷ ನವೆಂಬರ್ ಅಂತ್ಯದವರೆಗೆ ನಗರದಲ್ಲಿ ಒಟ್ಟು 202 ಕೊಲೆಗಳಾಗಿದೆ. ಇದರಲ್ಲಿ 194 ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. 636 ದರೋಡೆ ಪ್ರಕರಣಗಳು ದಾಖಲಾಗಿದ್ದು, 411 ರಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ.

         ಅಲ್ಲದೇ ಪೊಲೀಸರ ನಿದ್ದೆ ಕೆಡಿಸಿದ ಸರಗಳ್ಳತನ ಪ್ರಕರಣಗಳ 289 ಕೇಸ್ ವರದಿಯಾಗಿದ್ದು, ಅದರಲ್ಲಿ 206 ಕೇಸ್ ಪತ್ತೆ ಮಾಡಲಾಗಿದೆ. ಈ ವರ್ಷದಲ್ಲಿ 5023 ಮೋಟಾರ್ ವಾಹನಗಳು ಕಳವಾಗಿದ್ದು, 1296 ವಾಹನಗಳನ್ನ ಪತ್ತೆ ಮಾಡಲಾಗಿದೆ. ಈ ವರ್ಷ 2701 ವಂಚನೆ ಪ್ರಕರಣಗಳು ದಾಖಲಾಗಿದ್ದು, 1015 ಕೇಸ್ ಗಳಲ್ಲಿ ನ್ಯಾಯ ಕೊಡಿಸಲಾಗಿದೆ.

        ದುರಂತ ಅಂದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗದೇ ಇರುವುದು. ಈ ವರ್ಷ ಬರೋಬ್ಬರಿ 350 ಫೋಕ್ಸೋ ಕೇಸ್ ಗಳು ದಾಖಲಾಗಿದ್ದು, 339 ಮಂದಿ ಆರೋಪಿಗಳನ್ನ ಜೈಲಿಗಟ್ಟಲಾಗಿದೆ. 750 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿ 560 ಕೇಸ್ ಗಳನ್ನು ಪರಿಹರಿಸಲಾಗಿದೆ. ಸ್ವಾರಸ್ಯದ ಸಂಗತಿ ಅಂದರೆ ದಾಖಲಾದ 98 ರೇಪ್ ಕೇಸ್ ಗಳಲ್ಲಿ ಅಷ್ಟು ಮಂದಿಗೂ ನ್ಯಾಯ ಕೊಡಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.ಒಟ್ಟಿನಲ್ಲಿ ಈ ಬಾರಿ ಅಪರಾಧ ಪತ್ತೆಕಾರ್ಯ ಮೇಲುಗತಿಯಲ್ಲಿ ಸಾಗಿದೆ. ಹಗಲು ರಾತ್ರಿ ದುಡಿದು ಸಾಕಷ್ಟು ಕೇಸ್‍ಗಳನ್ನ ಪತ್ತೆ ಹಚ್ಚುವಲ್ಲಿ ನಗರದ ಎಲ್ಲಾ ಪೊಲೀಸರು ಶ್ರಮಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap