ಧನ-ಕರುಗಳಿಗೆ ಸಮರ್ಪಕವಾಗಿ ನೀರು ಮೇವು ಒದಗಿಸಿ

ಜಗಳೂರು:

      ಸಮರೋಪಾಧಿಯಲ್ಲಿ ಜನರಿಗೆ ಕುಡಿಯುವ ನೀರು ಸೇರಿದಂತೆ ಧನ-ಕರುಗಳಿಗೆ ಸಮರ್ಪಕವಾಗಿ ನೀರು ಮೇವು ಒದಗಿಸಬೇಕೆಂದು ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಬುಧುವಾರ ಬರಗಾಲ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ತಾಲ್ಲೂಕಿನಲ್ಲಿ ಬರ ಬಂದಿದೆ. ಬರ ಬಂಧಿದ್ದನ್ನು ದೈರ್ಯವಾಗಿ ಎದುರಿಸೋಣ. ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಬೇಡ ಪಕ್ಷ ಬೇದ ಮರೆತು ಕುಡಿಯುವ ನೀರು ಕೊರತೆ ಇರುವ ಗ್ರಾಮಗಳಿಗೆ ಶುದ್ದವಾದ ನೀರನ್ನು ಕೊಡಬೇಕು.ರೈತರಿಗೆ ಸಾಂತ್ವಾನ ಹೇಳುವಂತ ಕೆಲಸ ಮಾಡಬೇಕು.ಗುರುಸಿದ್ದಾಪುರ, ಕೊಣಚಗಲ್ಲು, ಅಣಬೂರು ಅರಣ್ಯದ ಹತ್ತಿರ ಗೋಶಾಲೆ ತೆರೆಯುವುದು. ಜಗಳುರು ಸೇರಿದಂತೆ ಇತರೇ ಮೇವು ಬ್ಯಾಂಕುಗಳನ್ನು ತುರ್ತಾಗಿ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

            ರೈತರು ಬೆಳೆದ ಮೆಕ್ಕೇಜೋಳ ಸೇರಿದಂತೆ ಇತರೇ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ. ಅಂತಹ ರೈತರಿಗೆ ಪರಿಹಾರ ಸಿಗುವಂತಾಗಬೇಕು. ಬರ ಇರುವುದರಿಂದ ಅಂತರ್ಜಲ ಮಟ್ಟ ದಿದನಕ್ಕೆ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಅಡಿಕೆ ಹಾಕದಂತೆ ಮನವೊಲಿಸಿ ತಡೆಯಬೇಕೆಂದರು. ಮನೆಗಳಿಗೆ ಫಲಾನುಭವಿಗಳಿಂದ ಗ್ರಾಮ ಪಮಚಾಯಿತಿಗಳಲ್ಲಿ ಹಣ ಪಡೆಯುತ್ತಾರೆ ಎಂಬ ಆರೋಪವಿದೆ. ನಾನು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.ಬೋರ್‍ವೆಲ್ ಕೊರೆಯಿಸಿದ ಬೋರ್‍ವೆಲ್‍ಗೆ ತುರ್ತಾಗಿ ವಿದ್ಯುತ್ ಕಲ್ಪಿಸಿ ನೀರು ನೀಡಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಾಗುತ್ತಿವೆ .ತುರ್ತಾಗಿ ಕೆಲಸ ನಿರ್ವಹಿಸಬೇಕು ಎಂದು ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

          ತಾಲ್ಲೂಕು ಕಾರ್ಯನಿವಾಹಕಾಧಿಕಾರಿ ಮಾತನಾಡಿ ತಾಲ್ಲೂಕಿನ ಚದುರುಗೊಳ್ಳ ಸೇರಿದಂತೆ 16 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಅಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈಗೆ ಮುಂದಿನ ದಿನಗಳಲ್ಲಿ ಇನ್ನು 36 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದೆಂದು ಗುರ್ತಿಸಲಾಗಿದೆ. ಸಮಸ್ಯೆ ಇರುವ ಗ್ರಾಮಗಳಿಗೆ ನೀರು ಸರಬರಾಜು ಮಾಡಿದವರಿಗೆ ಜಿಪಿಎಸ್ ಮಾಡಿ ಬಿಲ್ಲನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ ಎಂದರು.

         ನನ್ನ ಕ್ಷೇತ್ರದ ಕಣ್ಣಕುಪ್ಪೆ ಗ್ರಾಮದಲ್ಲಿ 30 ಲಕ್ಷ ರೂ.ವೆಚ್ಚದ ಕಾಮಗಾರಿ ನಡೆಯುತ್ತಿದೆ. ಆದರೆ ನಮಗೆ ಸೌಜನ್ಯಕ್ಕಾದರೂ ತಿಳಿಸುತ್ತಿಲ್ಲವೆಂದರೆ ಏನರ್ಥ ಎಂದು ಭೂಸೇನಾನಿಗಮದ ಇಂಜಿನಿಯರ್ ಚಂದ್ರಶೇಖರ್ ರವರನ್ನು ತರಾಟೆ ತೆಗೆದುಕೊಂಡರು.
ಕೃಷಿ ಇಲಾಖೆಯ ಅಧಿಕಾರಿ ಗೋವಿಂಧನಾಯ್ಕ್, ಪ್ರಭಾರಿ ಜಿ.ಪಂ.ಸಹಾಯಕಕಾರ್ಯಪಾಲಕ ಅಭಿಯಂತರ,ತೋಟಗಾರಿಕೆ ಇಲಾಖಾಧಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

           ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀಧರಮೂರ್ತಿ, ಜಿ.ಪಂ.ಉಪಾಧ್ಯಕ್ಷೆ ರಷ್ಮಿರಾಜಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತ ಕಲ್ಲೇಶಪ್ಪ, ಸದಸ್ಯರುಗಳಾದ ಸಿದ್ದಪ್ಪ, ಎಸ್.ಕೆ.ಮಂಜುನಾಥ, ತಾ.ಪಂ.ಸದಸ್ಯರುಗಳಾದ ಗಡಿಮಾಕುಂಟೆ ಸಿದ್ದೇಶ್, ಶಂರನಾಯ್ಕ್, ಬಸವರಾಜು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap