ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ:-ಜಗದೀಶ ಶೆಟ್ಟರ್

ಹಗರಿಬೊಮ್ಮನಹಳ್ಳಿ:

        ರಾಜ್ಯದ ಆಡಳಿತ ಕಾರ್ಯವೈಖರಿ ಖಂಡಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ ಅವರು, ರಾಜ್ಯ ಆಡಳಿತ ನಿಂತ ನೀರಾಗಿದೆ ಎಂದು ಕಿಡಿಕಾರಿದರು.

         ಅವರು ಬರಗಾಲ ಅಧ್ಯಾಯನ ಹಿನ್ನೆಲೆಯಲ್ಲಿ ತಾಲೂಕಿನ ಮರಬ್ಬಿಹಾಳ್ ಮತ್ತು ತಾಂಡದ ಸುತ್ತಮುತ್ತ ರೈತರ ಕೃಷಿಭೂಮಿಯಲ್ಲಿ ಒಣಗಿನಿಂತ ಬೆಳೆಯನ್ನು ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ರಾಜ್ಯದ ಲಕ್ಷಾಂತರ ರೈತರೊಂದಿಗೆ ಸುವರ್ಣ ಸೌದಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದೆಂದರು. ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇವಲ ನಾಲ್ಕು ಜಿಲ್ಲೆಗೆ ಮಾತ್ರ ಮುಖ್ಯಂತ್ರಿಗಳಾಗಿದ್ದಾರೆ. ಅವರು ರಾಜ್ಯ ವ್ಯಾಪಿ 100ಕ್ಕೂ ಹೆಚ್ಚು ಬರಬಿದ್ದ ತಾಲೂಕುಗಳ ಮಾಹಿತಿ ಪಡೆಯುವಲ್ಲಿ ವಿಫಲವಾಗಿದ್ದು, ರಾಜ್ಯದ ಜನತೆಯ ಹಿತ ಮರೆತಿದ್ದಾರೆ ಎಂದು ಆರೋಪಿಸಿದ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಬಗ್ಗೆ ಕಾಳಜಿ ಇಲ್ಲವೆಂದು ಸಚಿವರನ್ನು ಜರಿದರು.

       ಬರಗಾಲ ಹಿನ್ನೆಲೆಯಲ್ಲಿ ಹೈದರಬಾದ್ ಕರ್ನಾಟಕ ಜನತೆ ದುಡುಮೆಗಾಗಿ ಗುಳೆ ಹೋಗುತಿದ್ದಾರೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಇದೆ. ಆದರೆ, ರಾಜ್ಯದಲ್ಲಿ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ನೀರಿನ ಕೊರತೆ ಇರುವುದರಿಂದ ಪಶುಗಳಿಗಾಗಿ ಗೋ ಶಾಲೆ ತೆರೆಯಬೇಕು, ಮೇವು ಸಂಗ್ರಹಿಸಬೇಕು ಎಂದರು. ಬರ ಕುರಿತು ರಾಜ್ಯದಿಂದ ಅಧಿಕಾರಿಗಳು ಮತ್ತು ಸರ್ಕಾರ ಸರಿಯಾದ ವರದಿ ಮತ್ತು ಮಾಹಿತಿಯನ್ನು ಕೇಂದ್ರಕ್ಕೆ ನೀಡಬೇಕು ಎನ್ನುವುದು ನಮ್ಮ ಒತ್ತಾಯ. ಅಲ್ಲದೆ, ಈ ಬಗ್ಗೆ ನಷ್ಟವಾಗಿರುವ ರೈತರಿಗೆ ತಲಾ ಒಂದು ಎಕರೆಗೆ ಕನಿಷ್ಠವೆಂದರೂ 25ಸಾವಿರ ರೂ.ಗಳನ್ನು ತುಂಬಿಕೊಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

       ಆಪರೇಷನ್ ಕಮಲ ಸುದ್ದ ಸುಳ್ಳು: ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿದೆ ಎಂದು ಕಾಂಗ್ರೆಸ್‍ನವರೇ ವದಂತಿ ಹರಡಿದ್ದಾರೆ. ನಮ್ಮ ಪಕ್ಷದ ಯಾರೊಬ್ಬರು ಈ ಬಗ್ಗೆ ಕಾಂಗ್ರೆಸ್‍ನವರನ್ನು ಸಂಪರ್ಕಮಾಡಿಲ್ಲ. ಆ ಬಗ್ಗೆ ತನಿಖೆಯೂ ನಡೆಯಲಿ ಎಂದರಲ್ಲದೆ, ಅವರ ಮನೆಯಲ್ಲಿಯೇ ಎಲ್ಲವೂ ಸರಿಯಾಗಿಲ್ಲ. ನಮ್ಮ ಮೇಲೆ ಗೂಬೆ ಕೂರಿಸುವುದು ಸರಿ ಅಲ್ಲವೆಂದರು. ಒಂದು ವೇಳೆ ನಿಮ್ಮ ಪಕ್ಷದೊಂದಿಗೆ ಅವರು ಸಂಪರ್ಕ ಮಾಡಿದರೆ ನೀವು ಪಕ್ಷ ಸೇರ್ಪಡೆಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗುತ್ತೀರ ಎಂದು ಕೇಳಲಾದ ಪ್ರಶ್ನೆಗೆ ಯಾರೇ ಬರುವವರಿದ್ದರೆ ನಾಔಉ ಮನಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

          ಈ ಸಂದರ್ಭದಲ್ಲಿ ಯಲಬುರ್ಗ ಶಾಸಕ ಹಾಲಪ್ಪ ಆಚಾರಿ, ಬಿಜೆಪಿ ರೈತ ಮೋರ್ಚ ರಾಷ್ಟ್ರೀಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಈಶ್ವರಚಂದ್ರ ಹೊಸಮನಿ, ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ, ತಾಲೂಕು ಘಟಕದ ಅಧ್ಯಕ್ಷ ನರೆಗಲ್ ಕೊಟ್ರೇಶ್, ಕಾರ್ಯದರ್ಶಿ ಜೆ.ಬಿ.ಶರಣಪ್ಪ, ಜಿ.ಪಂ.ಸದಸ್ಯ ಆನಂದ, ತಾ.ಪಂ.ಮಾಜಿ ಅಧ್ಯಕ್ಷ ಸೂರ್ಯಬಾಬು, ಒಬಿಸಿ ಘಟಕದ ಅಧ್ಯಕ್ಷ ಕಲ್ಲಳ್ಳಿ ನಿಂಗಪ್ಪ, ಮುಖಂಡರಾದ ಕಿನ್ನಾಳ್ ಸುಭಾಷ್, ಚಿತ್ತವಾಡ್ಗಿ ಪ್ರಕಾಶ, ಗಿರಿರಾಜ ರೆಡ್ಡಿ, ರಾಜುಪಾಟೀಲ್, ನಾಗಯ್ಯ, ಎಲ್‍ಐಸಿ ಮಲ್ಲಿಕಾರ್ಜುನ, ನಾಗರಾಜ, ಗೋಣೆಪ್ಪ, ನಾಗಪ್ಪ, ಹಡಗಲಿಯ ಮುಖಂಡರಾದ ಓದೋ ಗಂಗಪ್ಪ, ಬಸವರಾಜಪ್ಪ, ಜಗದೀಶಗೌಡ ಸೇರಿದಂತೆ ಅನೇಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap