ಪಟ್ಟಣದಲ್ಲಿ ಸ್ವಚ್ಚ ಭಾರತ ಮಿಷನ್ ಮೂಲೆಗುಂಪು

0
13

ಗುತ್ತಲ:

         ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ 3 ವರ್ಷಗಳ ಕಾಲ ಗತಿಸುತ್ತಾ ಬಂದರು ಗುತ್ತಲ ಪಟ್ಟಣ ದಿನದಿಂದ ದಿನಕ್ಕೆ ಹೇಗೆ ಬೆಳವಣಿಗೆಯನ್ನು ಹೊಂದುತ್ತಿದೆಯೊ ಅದೇ ರೀತಿಯಾಗಿ ಸಮಸ್ಯೆಗಳು ಕೂಡಾ ಪಟ್ಟಣದಂತೆ ಬೆಳೆಯುತ್ತಿವೆ. ಇಷ್ಟಾದರು ಕೂಡಾ ಅಸ್ವಚ್ಚತೆ ಎನ್ನುವಂತ ಸಮಸ್ಯೆಯ ಸುಳಿಯಿಂದ ಪಟ್ಟಣದ ಜನತೆ ಹೊರಬಂದಿಲ್ಲಾ ಗುತ್ತಲ ಹೆಸರಿಗಷ್ಟೆ ಪಟ್ಟಣವಾಗಿದೆ ಹೊರತು ಅಭಿವೃದ್ಧಿಯಲ್ಲಿ ಪಟ್ಟಣ ಹೋಗಿ ಖಾಲಿ ಪೊಟ್ಟಣವಾಗಿದೆ.

           ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಮಿಷನ್ ಮಹತ್ವಾಕಾಂಕ್ಷಿ ಯೋಜನೆಯು ಪಟ್ಟಣದಲ್ಲಿ ಮೂಲೆಗುಂಪಾಗಿ ಆಟಕ್ಕುಂಟು ಲೆಕ್ಕಕಿಲ್ಲ ಎಂಬತಾಗಿದೆ ಪಟ್ಟಣದ 15ನೇ ವಾರ್ಡ ಕೂಡಾ ಅದಕ್ಕೆ ತಕ್ಕಂತೆ ಕಾಣುತ್ತಿದೆ ಹೇಗೆ ಅಂತೀರಾ ಇದು ಗುತ್ತಲ ಪಟ್ಟಣ ಪಂಚಾಯತಿಯ ಪಕ್ಕದ ರಸ್ತೆ ಈ ಮಾರ್ಗ ಪಟ್ಟಣದ ಜನತೆಗೆ ದೇವಸ್ಥಾನ ಹಾಗೂ ವಿದ್ಯಾರ್ಥಿಗಳಿಗೆ ಶಾಲಾ,ಕಾಲೇಜುಗಳಿಗೆ ಸಂಪರ್ಕವನ್ನು ಕಲ್ಪಿಸುವ ರಸ್ತೆಯು ಕೂಡಾ ಇದಾಗಿದೆ.

          ಈ ಮಾರ್ಗವಾಗಿ ಶಾಲೆ ಹಾಗೂ ಕಾಲೇಜುಗಳಿಗೆ ಹೋಗುವಂತ ವಿದ್ಯಾರ್ಥಿಗಳು ಮೂಗನ್ನು ಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿ ಬಂದರು ಕೂಡಾ ಪಟ್ಟಣ ಪಂಚಾಯಿತಿ ಈ ಒಂದು ಸಮಸ್ಯೆಗೆ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದೆ ಸುಮ್ಮನಿರುವುದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬೇಸರದ ಸಂಗತಿಯಾಗಿದೆ.

          ಪಟ್ಟಣದಲ್ಲಿ ಈ ತರಹದ ಸಮಸ್ಯೆಗಳನ್ನು ನೋಡಿದರೆ ಪಟ್ಟಣ ಪಂಚಾಯತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರಾ? ಎನ್ನುವಂತಹ ಅನುಮಾನಗಳು ಸಾರ್ವಜನಿಕರನ್ನು ಕಾಡತೊಡಗಿವೆ.
ಸ್ವಚ್ಚತೆಯ ಅಂಗಾರ ನಮ್ಮ ಪಟ್ಟಣಕ್ಕೆ ಬಂಗಾರವಾಗುತ್ತದೆ ಎಂದು ಭಾವಿಸಿದ್ದಂತಹ ಪಟ್ಟಣದ ಪರಿಸರ ಪ್ರೇಮಿಗಳಿಗೆ ಸ್ವಚ್ಚತೆಯ ಬದಲಾಗಿ ಅಸ್ವಚ್ಚತೆಯ ಅಂಗಾರವೇ ನಮ್ಮ ಪಟ್ಟಣಕ್ಕೆ ಬಂಗಾರ ಮತ್ತು ಶೃಂಗಾರ ಎಂದು ವಿಶೇಷವಾಗಿಯೆ ನಮ್ಮ ಪಟ್ಟಣಕ್ಕೆಂದೆ ಹಲವು ಪದಗಳನ್ನು ಹಾಗೂ ವಾಕ್ಯಗಳನ್ನು ಬದಲಿಸಿದ ಹಾಗೆ ಕಾಣುತ್ತದೆ.

         ಇನ್ನಾದರು ಈ ಒಂದು ಸಮಸ್ಯೆಯ ಸುಳಿಯಿಂದ ಈ ವಾರ್ಡಿನ ಜನಸಾಮಾನ್ಯರು ಹಾಗೂ ದಿನನಿತ್ಯ ಶಾಲಾ, ಕಾಲೇಜುಗಳಿಗೆ ಹೋಗುವಂತಾ ವಿದ್ಯಾರ್ಥಿಗಳು ಹೊರಬರುತ್ತಾರಾ? ಪಟ್ಟಣ ಪಂಚಾಯತಿ ಇನ್ನಾದರು ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ನಿವಾರಣೆ ಮಾಡುತ್ತಾ ಎಂಬುದನ್ನಾ ಕಾದು ನೋಡಬೇಕಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here