ಮುಸ್ಲಿಂ ಹಾಸ್ಟೆಲ್‍ಗೆ ಟಾರ್ಗೆಟ್ ಗ್ರೂಪ್ ಸಾರಥ್ಯ

0
9

ದಾವಣಗೆರೆ:

       ವಕ್ಫ್ ಮಂಡಳಿಯ ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್(ಮುಸ್ಲಿಂ ಹಾಸ್ಟೆಲ್) ಅಧ್ಯಕ್ಷ ಸ್ಥಾನ ನಿರೀಕ್ಷೆಯಂತೆಯೇ ಟಾರ್ಗೆಟ್ ಗ್ರೂಪ್‍ಗೆ ಒಲಿದಿದ್ದು, ಗ್ರೂಪ್‍ನ ಏಕೈಕ ಸದಸ್ಯ ಬಾಷಾ ಮೊಹಿಯುದ್ದೀನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

       ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ 11 ಜನ ಚುನಾಯಿತ ಸದಸ್ಯರ ಉಪಸ್ಥಿತಿಯಲ್ಲಿ ಅಸೋಸಿಯೇಷನ್ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಶಾದ್ ಆರ್.ಶರೀಫ್ ಕಾರ್ಯ ನಿರ್ವಹಿಸಿದರು.

         ಟಾರ್ಗೆಟ್ ಅಸ್ಲಂ ನೇತೃತ್ವದ ಗುಂಪಿನ ಏಕೈಕ ಸದಸ್ಯ ಬಾಷಾ ಮೊಹಿಯುದ್ದೀನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖಾದ್ರಿಯಾ ಗುಂಪಿನ ಸೈಯದ್ ಅಲ್ತಾಫ್ ಉಪಾಧ್ಯಕ್ಷ, ಮಹಮದ್ ಸಮೀರ್ ಹಟೇಲಿ ಕಾರ್ಯದರ್ಶಿ ಹಾಗೂ ಎನ್.ಸಲೀಂ ಖಾನ್ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾದರು.

         ಈ ಸಂದರ್ಭದಲ್ಲಿ ಖಾದ್ರಿಯಾ ಗುಂಪಿನ ಎನ್.ಕೆ.ಅಶ್ರಫ್, ಅಹ್ಮದ್ ರಜಾ, ಹೆಚ್‍ಕೆಜಿಎನ್ ಗುಂಪಿನ ಎಸ್.ಬಿ.ಮೊಹಿದ್ದೀನ್, ಬಿ.ಎನ್.ಇರ್ಷಾದ್, ಹಜರತ್ ಅಲಿ, ಏಜಾಜ್ ಅಹಮದ್, ಎ.ಬಿ.ತನ್ವೀರ್, ಮುಖಂಡರಾದ ಟಾರ್ಗೆಟ್ ಅಸ್ಲಂ, ಸೈಯದ್ ಸೈಫುಲ್ಲಾ, ಜೆ.ಅಮಾನುಲ್ಲಾ ಖಾನ್, ಕೋಳಿ ಇಬ್ರಾಹಿಂ, ಕೆ.ಚಮನ್ ಸಾಬ್, ಅತಾವುಲ್ಲಾ, ಸಿ.ಆರ್.ನಸೀರ್ ಅಹ್ಮದ್, ನಯಾಜ್ ಅಹಮದ್ ಖಾನ್, ಖಾದರ್ ಬಾಷ, ಮೈನುದ್ದೀನ್ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here