ಭೋದಕರ ತರಬೇತಿ ಕಾರ್ಯಾಗಾರ

ಹೂವಿನಹಡಗಲಿ :

         ಪಟ್ಟಣದ ಎಸ್.ಪಿ.ವಿ. ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ತಾಲೂಕು ಲೋಕ ಶಿಕ್ಷಣ ಸಮಿತಿ ಹಡಗಲಿ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಬಳ್ಳಾರಿ, ಪುರಸಭೆ ಹಡಗಲಿ ಹಾಗೂ ಶ್ರೀ ಗುರು ಕೊಟ್ಟೂರೇಶ್ವರ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಡಗಲಿ ಇವರ ಸಹಯೋಗದಲ್ಲಿ ಬೋಧಕರ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

         ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ತಾಲೂಕು ಸಾಕ್ಷರತಾ ಸಮಿತಿಯ ಸಂಯೋಜಕ ಎಲ್.ಮಲ್ಲೇಶನಾಯ್ಕ ಮಾತನಾಡಿ, ಡಾ. ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ಮತ್ತು ಅತೀ ಹಿಂದುಳಿದ ತಾಲೂಕಿನಲ್ಲಿ ಕೊಳಚೆ ಪ್ರದೇಶದಲ್ಲಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಲು ಜಾರಿಗೊಂಡಿರುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

          ಪಟ್ಟಣದ ಕೊಳಚೆ ಪ್ರದೇಶದಲ್ಲಿ ವಾಸಿಸುವವರಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಈಗಾಗಲೇ ಸಮೀಕ್ಷೆ ಕಾರ್ಯ ಮಾಡಿದ್ದು, ಅಕ್ಷರದಿಂದ, ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿರುವ 15 ರಿಂದ 45 ವರ್ಷದ ಅನಕ್ಷರಸ್ಥರಿಗೆ ಅಕ್ಷರವನ್ನು ಕಲಿಸಿ ಅವರ ಬಾಳಿಗೆ ಬೆಳಕು ನೀಡಿ, ಜ್ಞಾನದ ಜ್ಯೋತಿ ಬೆಳಗಿಸಲು ಕೊಳಚೆ ಪ್ರದೇಶದ ಅನಕ್ಷರಸ್ಥರಿಗೆ 1500 ಜನರ ಗುರಿ ನೀಡಿದ್ದು, ಒಬ್ಬ ಬೋಧಕರು ಹತ್ತು ಜನರಿಗೆ ಅಕ್ಷರದ ಜೊತೆಗೆ ಓದು ಬರಹ, ಲೆಕ್ಕಾಚಾರ ಕಲಿಸಲು 150 ಬೋಧಕರನ್ನು ನೇಮಿಸಿ ತರಬೇತಿ, 4 ದಿವಸಗಳ ಕಾಲ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತದೆ.

          ಬೋಧಕರಿಗೆ ಸರ್ಕಾರವು 900 ರೂ ಗೌರವ ಧನವನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲಿದ್ದು, ಬೋಧಕರು ಸದರಿ ತರಬೇತಿಯ ಪ್ರಯೋಜನ ಪಡೆದು ನಿಮ್ಮ ವ್ಯಾಪ್ತಿಯಲ್ಲಿ ಬರುವ ಅನಕ್ಷರಸ್ಥರಿಗೆ ಒಂದು ತಾಸು ಅಕ್ಷರ ಕಲಿಸಿ ಸಾಕ್ಷರರನ್ನಾಗಿ ಮಾಡಲು ಶ್ರಮವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.

           ಎಸ್.ಬಿ.ಐ. ಹಣಕಾಸು ಸಾಕ್ಷರತಾ ಕೇಂದ್ರದ ಸಲಹೆಗಾರ ಬಿ.ಬಿ.ಅಸುಂಡಿಯವರು ಮಾತನಾಡಿ, ಯಾವುದೇ ಪ್ರದೇಶದ ಅಭಿವೃದ್ದಿಗೆ ಸಾಕ್ಷರತೆ ಊರುಗೋಲಾಗಿದ್ದು, ಅನಕ್ಷರಸ್ಥರು ಕಲಿಯುವ ಅಕ್ಷರ ಅವರ ಜೀವನ ಸಾರ್ಥಕತೆಗೆ ಅಡಿಪಾಯವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರುಗಳಾದ ಎಚ್.ಎಂ.ಶಶಿಧರಯ್ಯ ಮಾತನಾಡಿದರು. ಪತ್ರಕರ್ತ ಹೆಚ್.ಚಂದ್ರಪ್ಪ ಇದ್ದರು. ಸಂಪನ್ಮೂಲ  ವ್ಯಕ್ತಿಗಳಾದ ಕಂಠಿ ಪ್ರಕಾಶ್, ಎಂ.ಪಿ.ಎಂ. ಕೊಟ್ರಸ್ವಾಮಿ ತರಬೇತಿ ನೀಡಿದರು. ಜಿಲ್ಲಾ ಕಾರ್ಯಕ್ರಮ ಸಹಾಯಕ ಅಧಿಕಾರಿ ಜಿ.ಭಾಸ್ಕರರೆಡ್ಡಿ ತರಬೇತಿ ಶಿಭಿರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap