ಶೀಘ್ರವಾಗಿ ಪರಹಾರಕ್ಕಾಗಿ ಒತ್ತಾಯ

ತಿಪಟೂರು :

          ನಗರದಲ್ಲಿ ಡಿಸೆಂಬರ್-02ರಂದು ನೆಡೆದ ಪಟಾಕಿ ದುರ್ಘಟನೆಯಲ್ಲಿ ನೆಡೆದ ಮೃತರಿಗೆ ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ಶ್ರೀ ಸತ್ಯಗಣಪತಿ ಸೇವಾ ಟ್ರಸ್ಟ್ ರವರಿಂದ ಶೀಘ್ರವಾಗಿ ಪರಹಾರವನ್ನು ಕೊಡಿಸಬೇಕೆಂದು ತಾಲ್ಲೂಕು ಮದಕರಿ ನಾಯಕ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

           ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರು ತಿಪಟೂರಿನ ಗಣಪತಿ ಜಾತ್ರಾ ಮಹೋತ್ಸವವನ್ನು ನೋಡಲು ಬಂದಿದ್ದ ಎಂ.ಎಲ್ ಲಿಂಗೇಗೌಡ ಮತ್ತು ಲಲಿತಮ್ಮ ಹಡವನಹಳ್ಳಿ ಜನತಾ ಕಾಲೋನಿ, ದಂಡಿನಶಿವರ ಹೊಬಳಿ, ತುರುವೇಕೆರೆ ತಾಲ್ಲೂಕು, ನಾಯಕ ಜನಾಂಗದ (ಎಸ್.ಟಿ) ಇವರ ಮಗಳು ಎಂ.ಎಲ್ ಸಿತಾರ ಸಿ.ಎ ವಿದ್ಯಾರ್ಥಿನಿ,

          ಇವರು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪಟಾಕಿಯ ಸಿಡಿಮದ್ದಿನ ಒಂದು ಉಂಡೆ ಬಂದು ಎಂ.ಎಲ್ ಸಿತಾರ ರವರ ತಲೆಗೆ ತಗುಲಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾರೆ, ಆದ್ದರಿಂದ ಇವರಿಗೆ ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ಶ್ರೀ ಸತ್ಯ ಗಣಪತಿ ಸೇವಾ ಟ್ರಸ್ಟ್ ರವರಿಂದ ಶೀಘ್ರವಾಗಿ ಪರಹಾರವನ್ನು ಕೊಡಿಸಬೇಕೆಂದು ತಾಲ್ಲೂಕು ಮದಕರಿ ನಾಯಕ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಮನವಿಗೆ ಸರ್ಕಾರವು ಸ್ಪಂದಿಸದಿದ್ದಲ್ಲಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆಂದು ತಿಪಟೂರು ತಾಲ್ಲೂಕು ಮದಕರಿ ನಾಯಕ ಸಂಘ ಎಚ್ಚರಿಕೆ ನೀಡಿದರು.

         ಇದೇ ವೇಳೆ ಮನವಿ ಸ್ವೀಕರಿಸಿ ಮಾತನಾಡಿದ ಅವರು ಸರ್ಕಾರಕ್ಕೆ ಹೀಗಾಗಲೆ ಮನವಿ ಸಲ್ಲಿಸಲಾಗಿದ್ದು ಸರ್ಕಾರದ ನಿರ್ದೆಶನಕ್ಕಾಗಿ ಕಾಯುತ್ತಿದ್ದೆವೆ, ಆದಷ್ಟು ಬೇಗ ಮೃತರ ಕುಟುಂಬಕ್ಕೆ ಸಹಾಯವಾಗುವ ರೀತಿಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು,

        ಪ್ರತಿಭಟನೆಯಲ್ಲಿ ತಾಲ್ಲೂಕು ಮದಕರಿ ನಾಯಕ ಸಂಘದ ಗೌರವಾಧ್ಯಕ್ಷರಾದ ಚಿಕ್ಕಣ್ಣ, ಅಧ್ಯಕ್ಷರಾದ ಮಹೇಶ್, ಉಪಾಧ್ಯಕ್ಷ ಕೆ.ಎನ್.ಜಯಸಿಂಹ, ಕಾರ್ಯದರ್ಶಿ ದೊಡ್ಡಯ್ಯ, ಸಂಚಾಲಕ ಮಹಾಲಿಂಗಯ್ಯ ಪದಾಧಿಕಾರಿಗಳಾದ ಮಂಜುನಾಥ.ಆರ್, ಟಿ.ಆರ್.ಸುರೇಶ್, ಎನ್.ಮಂಜುನಾಥ, ರವಿಕೀರ್ತಿ ಮೊದಲಾದವರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap