ಕನ್ನಡದ ಶ್ರೀಮಂತಿಕೆಗೆ ಸಾಟಿ ಇಲ್ಲ

0
16

ಕೊಟ್ಟೂರು  

          ಕನ್ನಡ ಭಾಷೆ ಭವ್ಯವಾದ ಇತಿಹಾಸವನ್ನು ಹೊಂದಿದ್ದು, ಸುಲಲಿತವಾದ ಹಾಗೂ ಸುಂದರ ಲಿಪಿಯನ್ನು ಹೊಂದಿ ತನ್ನದೇ ಆದ ಸೊಗಡಿನಿಂದ ಕೂಡಿದೆ ಎಂದು ಮುಖ್ಯ ಶಿಕ್ಷಕಿ ಎಸ್.ಎಂ.ನಳಿನಿ ತಿಳಿಸಿದರು.

           ಪಟ್ಟಣಕ್ಕೆ ಸಮೀಪದ ತಿಮಲಾಪುರ ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ಕ.ಸಾ.ಪ ತಾಲ್ಲೂಕು ಘಟಕವು ಏರ್ಪಡಿಸಿದ್ದ ಶ್ರೀಮತಿ ರುದ್ರಮ್ಮ ವಾಮದೇವ ಶಿವಾಚಾರ್ಯ ದತ್ತಿ ಹಾಗೂ ಪತ್ತಿಕೊಂಡ ಕಾಮಾಕ್ಷಮ್ಮ ವಿಶ್ವನಾಥ ಶೆಟ್ಟಿ ಇವರುಗಳ ದತ್ತಿ ಕಾರ್ಯಕ್ರಮದಲ್ಲಿ ‘ಕನ್ನಡದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ವಿದ್ಯಾರ್ಥಿಗಳಿಗೆ ಸ್ಪಷ್ಠವಾಗಿ ಓದುವ, ಶುದ್ಧವಾಗಿ ಬರೆಯುವ ಹಾಗೂ ಸ್ಪುಟವಾಗಿ ಮಾತನಾಡುವ ಸಾಮಥ್ರ್ಯವನ್ನು ಶಿಕ್ಷಕರು ಕಲಿಸಲು ಮುಂದಾಗಬೇಕೆಂದರು.

          ಉಪನ್ಯಾಸಕ ಅರವಿಂದ ಬಸಾಪುರ ‘ಸಮಾಜ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಶಿಕ್ಷಕರ ವ್ಯಕ್ತಿತ್ವವು ಇತರರಿಗೆ ಮಾದರಿಯಾಗಿದ್ದು, ಸ್ವಸ್ಥ ಸಮಾಜ ನಿಮಾರ್ಣದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದರು. ಸಮಾರಂಭ ಉದ್ಘಾಟಿಸಿದ ಮುಖ್ಯ ಶಿಕ್ಷಕ ಸಿ.ಲಿಂಗನಗೌಡ್ರು ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜೊತೆಯಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕೆಂದರು.

          ಸಮಾರಂಭದ ಅಧ್ಯಕ್ಷತೆಯನ್ನು ಕ.ಸಾ.ಪ ತಾಲ್ಲೂಕು ಘಟಕಾಧ್ಯಕ್ಷ ಎಸ್.ಎಂ.ಗುರುಪ್ರಸಾದ್ ವಹಿಸಿದ್ದರು. ಈ ಸಂದರ್ಭದಲ್ಲಿ ಕ.ಸಾ.ಪ ಕೋಶಾಧ್ಯಕ್ಷ ಜೆ.ಎಂ.ರೇವಣಾರಾಧ್ಯ, ಸಂಘಟನಾ ಕಾರ್ಯದರ್ಶಿ ಬಿ.ಎಂ.ಗಿರೀಶ್ ಹಾಗೂ ಶಿಕ್ಷಕರಾದ ಎಂ.ಟಿ.ಸರೋಜ, ಡಿ.ಎಸ್.ಲತಾ, ಎಸ್.ಎಂ.ಕೊಟ್ರುಸ್ವಾಮಿ, ಮಹೇಂದ್ರ, ಎಚ್.ಕೊಟ್ರೇಶ್ ಮಾತನಾಡಿದರು. ಕುಮಾರಿ ನಯನ ಪ್ರಾರ್ಥಿಸಿದರು, ಜೆ.ಎಂ.ರೇವಣಾರಾಧ್ಯ ಸ್ವಾಗತಿಸಿದರು, ಶಿಕ್ಷಕ ಮಹೇಂದ್ರ ವಂದಿಸಿದರು, ಎಚ್.ಕೊಟ್ರೇಶ್ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here