ನವೋದ್ಯಮಕ್ಕೆ ವಿಪುಲ ಅವಕಾಶ: ರವಿರಾಜ್

0
20

ದಾವಣಗೆರೆ:

       ಹೊಸ ಉದ್ಯಮಕ್ಕೆ ದಾವಣಗೆರೆಯಲ್ಲಿ ವಿಪುಲ ಅವಕಾಶಗಳಿದ್ದು, ಇರುವ ಅವಕಾಶದ ಸದುಪಯೋಗ ಪಡೆದುಕೊಂದು ಉದ್ಯಮ ಸ್ಥಾಪನೆಗೆ ಮುಂದಾಗಬೇಕೆಂದು ಮಹಾರಾಜ ಇಂಡಸ್ಟ್ರೀಸ್‍ನ ಮುಖ್ಯಸ್ಥ ಡಾ.ರವಿರಾಜ್‍ಎಂ.ಈ. ಕರೆ ನೀಡಿದರು.

       ನಗರದ ಎಂ.ತಾಂತ್ರಿಕ ಮಹಾವಿದ್ಯಾಲಯದ ನಿರ್ವಹಣಾಶಾಸ್ತ್ರ(ಎಂ.ಬಿ.ಎ) ವಿಭಾಗದಿಂದ ಎಂ.ಬಿ. ಎವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಶೈಕ್ಷಣಿಕಕೂಟ “ದಿಶಾ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಉದ್ಯಮಕ್ಕೆ ಹೊಸ ಅವಕಾಶಗಳಿವೆ ವಿದ್ಯಾರ್ಥಿಗಳು ನಕಾರಾತ್ಮಕ ಯೋಚನೆಗಳನ್ನು ಬಿಟ್ಟು ಹೊಸ ಆಲೋಚನೆಗಳೊಂದಿಗೆ ಹೊಸ ಹೊಸ ಉದ್ಯಮಗಳನ್ನು ಸ್ಥಾಪಿಸಬೇಕೆಂದುಸಲಹೆ ನೀಡಿದರು.

        ತಮ್ಮ ಸೌಕರ್ಯ ವಲಯಗಳಿಂದ ಹೊರಗೆ ಬಂದು ಸರಿಯಾದ ಉದ್ಯಮದಂ iÉೂೀಜನೆಗಳನ್ನುರೂಪಿಸಿ ಇತರರಿಗೆ ಉದ್ಯೋಗವನ್ನು ದೊರಕಿಸುವುದರ ಕಡೆಗೆ ಗಮನ ಹರಿಸಬೇಕು ಎಂದರು.

       ಶಿವಮೊಗ್ಗದ ಯ್ಯಾಪ್ಯಾಕ್ಟ್ ಸಂಸ್ಥೆಯ ಸಿಕಂದರ್ ಖಾಜಿ ಮಾತನಾಡಿ, ನವೋದ್ಯಮಗಳಿಗೆ ಇರುವ ವಿಪುಲ ಅವಕಾಶಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಕುರಿತು ತಿಳಿಸಿದರು.

      ನಿರ್ವಹಣಾಶಾಸ್ತ್ರ ವಿಭಾಗದ ನಿರ್ದೇಶಕ ಡಾ. ಬಿ.ಬಕ್ಕಪ್ಪ, ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಲಯದ ಉದ್ಯೋಗ ಮತ್ತು ತರಬೇತಿ ವಿಭಾಗದ ಸಂಯೋಜಕ . ತೇಜಸ್ವಿ ಕಟ್ಟಿಮನಿ, ನಿರ್ವಹಣಾಶಾಸ್ತ್ರ(ಎಂ.ಬಿ.ಎ)ವಿಭಾಗದ . ಬಸವರಾಜು ಪಿ.ಎಸ್ ಮತ್ತು ಅಧ್ಯಾಪಕ ವರ್ಗ ಹಾಗೂವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕು.ಇಂದ್ರಾ ಪ್ರಾರ್ಥಿಸಿದರು. ಕು.ನಂದಿನಿ.ಎಂ.ಎನ್.ಸ್ವಾಗತಿಸಿದರು. ಕು.ಶಿವಲಿಂಗು ಹಾಗೂ ಶಬಾನಾ ನಿರೂಪಿಸಿದರು. ಕು.ಅಂರೀನ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here