ಹಂಪಿ ಉತ್ಸವ ನಡೆಸದಿದ್ದರೆ ಜಿಲ್ಲೆಯಾದ್ಯಾಂತ ಪ್ರತಿಭಟನೆ: ಬಿಜೆಪಿ

ಬಳ್ಳಾರಿ

       ಬರಗಾಲದ ನೆಪದಿಂದ ಹಂಪಿ ಉತ್ಸವ ಆಚರಿಸದಿದ್ದರೆ ಜಿಲ್ಲೆಯಾದ್ಯಾಂತ ಪ್ರತಿಭಟನೆ ನಡೆಸಲಿದೆ ಎಂದು ಭಾರತೀಯ ಜನತಾ ಪಕ್ಷ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

        ನಗರದಲ್ಲಿಂದು ಪಕ್ಷದ ಜಿಲ್ಲಾ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಚೆನ್ನಬಸವನಗೌಡ ಅವರು, ರಾಜ್ಯದ ಜನತೆಗೆ ಬೇಡವಾದವರ ಜಯಂತಿಯನ್ನು ಸರ್ಕಾರ ಅದ್ದೂರಿಯಾಗಿ ಆಚರಿಸುತ್ತದೆ. ಮೈಸೂರು ದಸರಾ ಇನ್ನಿತರ ಉತ್ಸವಗಳನ್ನು ಆಚರಿಸುತ್ತದೆ. ಅದಕ್ಕೆ ಬರಗಾಲವಿಲ್ಲವೇ ಹಂಪಿ ಉತ್ಸವಕ್ಕೆ ಮಾತ್ರ ಬರಗಾಲದ ನೆಪ ಸರಿಯೇ ಎಂದು ಪ್ರಶ್ನಿಸಿದರು.

        ಹಂಪಿ ಉತ್ಸವ ನಡೆಸುವಂತೆ ಈಗಾಗಲೇ ಕಲಾವಿದರು, ಸಾಹಿತಿಗಳು ಪ್ರತಿಭಟನೆ ಡಿ.16ರಂದು ಹಂಪಿಯಲ್ಲಿ ಜನೋತ್ಸವ ಮಾಡಲು ಮುಂದಾಗಿದ್ದಾರೆ. ಅದಕ್ಕೆ ನಮ್ಮ ಪಕ್ಷ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಿದೆ. ಸರ್ಕಾರವೇ ಕೂಡಲೇ ಹಂಪಿ ಉತ್ಸವ ನಡೆಸಲು ಮುಂದಾಗಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಲಿದೆ. ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೆ, ನಮ್ಮ ಎಲ್ಲಾ ತಾಲೂಕುಗಳಲ್ಲಿ ಹಂಪಿ ಉತ್ಸವ ನಡೆಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಿದೆಂದು ಹೇಳಿದರು.

ಬರಗಾಲ ಅಧ್ಯಯನ ತಂಡ

        ಬಳ್ಳಾರಿಜಿಲ್ಲೆಯಲ್ಲಿ ಉಂಟಾಗಿರುವ ಬರಗಾಲದ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಬಿಜೆಪಿ ಮುಖಂಡರ ಅಧ್ಯಯನ ತಂಡ ನಾಡಿದ್ದು ಡಿ.4ರಂದು ಜಿಲ್ಲೆಗೆ ಆಗಮಿಸಲಿದೆ.

          ಈ ಕುರಿತು ಮಾಹಿತಿ ನೀಡಿದ ಪಕ್ಷದ ಜಿಲ್ಲಾ ಅಧ್ಯಕ್ಷ ಚೆನ್ನಬಸವನಗೌಡ, ಪಕ್ಷದ ಮುಖಂಡರುಗಳಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದ ಸುರೇಶ್ ಅಂಗಡಿ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಮೊದಲಾದವರು ತಂಡದೊಂದಿಗೆ ಆಗಮಿಸಲಿದ್ದಾರೆಂದರು.

          ಸರ್ಕಾರಕ್ಕೆ ಐತಿಹಾಸಿಕ ಹಂಪಿ ಉತ್ಸವ ನಡೆಸಲು ಹಣದ ಕೊರತೆ ಇದೆ ಎಂದು ಹೇಳಿದರೆ ನಾವು ನಮ್ಮ ಪಕ್ಷದಿಂದ ಭಿಕ್ಷೆ ಬೇಡಿ ಉತ್ಸವ ನಡೆಸಲು ಸರ್ಕಾರಕ್ಕೆ ಹಣ ನೀಡಲಿದೆಂದು ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಹೇಳಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಮೂರು ದಿನಗಳ ಕಾಲ ಉತ್ಸವ ನಡೆಸಬೇಕು, ಜಿಲ್ಲಾ ಉಸ್ತುವಾರಿ ಸಚಿವರು ಹೊರ ಜಿಲ್ಲೆಯವರಾಗಿರುವುದರಿಂದ ಅವರಿಗೆ ಆಸಕ್ತಿ ಇಲ್ಲ, ಇದೇ ಜಿಲ್ಲೆಯವರಾಗಿದ್ದರೆ ಆಸಕ್ತಿ ಇರುತ್ತಿತ್ತು ಎಂದು ಆರೋಪಿಸಿದ ಅವರು, ಹಂಪಿ ಉತ್ಸವ ನಡೆಸುವಂತೆ ಈ ತಿಂಗಳ 10ರಿಂದ ಆರಂಭಗೊಳ್ಳುವ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೆ ಮಾಡುವುದಾಗಿ ಹೇಳಿದರು.ಉಪಚುನಾವಣೆಯಲ್ಲಿ ಗೆದ್ದೀವಿ ಎಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ದೂರಿ ಸಮಾರಂಭ ಮಾಡುವವರು ಹಂಪಿ ಉತ್ಸವಕ್ಕೆ ಬರಗಾಲ ಎನ್ನುವುದು ಸರಿಯಲ್ಲವೆಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap