ಒಂಟಿಯಾಗಿದ್ದ ಅತ್ತೆಯ ಅಕ್ಕನ ಮನೆಗೆ ನುಗ್ಗಿ ಹಣ ಚಿನ್ನ ದೋಚುತ್ತಿದ್ದ ಆರೋಪಿ ಬಂಧನ

0
10

ಬೆಂಗಳೂರು

          ಒಂಟಿಯಾಗಿದ್ದ ಅತ್ತೆಯ ಅಕ್ಕನ ಮನೆಗೆ ನುಗ್ಗಿ, ಹಲ್ಲೆ ಮಾಡಿ ಹಣ ಚಿನ್ನ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಆರೋಪಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

        ಚಂದ್ರಲೇಔಟ್‍ನ ಹೆಚ್.ಡಿ ಸುಬ್ರಮಣ್ಯ ಪ್ರಸಾದ್(40)ಬಂಧಿತ ಆರೋಪಿಯಾಗಿದ್ದಾನೆ, ಆರೊಪಿ ಯಲಹಂಕದಲ್ಲಿ ಮನೆ ಕಟ್ಟಲು ಬ್ಯಾಂಕ್‍ನಲ್ಲಿ ಲಕ್ಷಾಂತರ ಸಾಲ ಮಾಡಿದ್ದ. ಆನಂತರದಲ್ಲಿ ಸಾಲದ ಕಂತು ಕಟ್ಟಲು ಆಗದೆ, ಕಡಿಮೆ ಸಮಯದಲ್ಲಿ ಹೆಚ್ಚು ಹಣಗಳಿಸುವ ಉದ್ದೇಶದಿಂದ ಚಂದ್ರಲೇಔಟ್‍ನ ಕಲ್ಯಾಣ ನಗರದಲ್ಲಿರುವ ತನ್ನ ಅತ್ತೆಯ ಅಕ್ಕನಾದ ಸುಜಾತ ಒಂಟಿಯಾಗಿರುವುದನ್ನ ಗಮನಿಸಿ ಅವರ ಮನೆಗೆ ಹೋಗಿ, ಹಲ್ಲೆ ಮಾಡಿ ಅವರ ಬಳಿ ಇದ್ದ ನಗದು ಚಿನ್ನಾಭಾರಣ ಕದ್ದುಕೊಂಡು ಹೋಗಿದ್ದನು.ಸುಜಾತ, ಚಂದ್ರಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನ ಬಂಧಿಸಿ ನಗದು ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ಮಜ್ಜಿಗೆ ಕಡೆಯುವ ಕಡಗೋಲು ತೆಂಗಿನ ಕಾಯಿ ತುರೆಮಣೆಯನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here