ಸಾಮಾಜಿಕ ಸೇವೆಯಲ್ಲಿ ತಿಪಟೂರು ಲೈಫ್ ಸೇವೆ ಅನನ್ಯ : ಎಸ್.ಎ.ಚಿನ್ನೇಗೌಡ

ತಿಪಟೂರು

     ಕಲ್ಪತರು ನಾಡು ಕಲೆ, ಸಾಹಿತ್ಯ, ಸಂಸ್ಕøತಿಗೆ ಹೆಸರಾಗಿದ್ದು ಇಂತಹ ನಾಡಿನಲ್ಲಿ ಅನೇಕ ಮಹನೀಯ ಕಲಾವಿದರು ಜನ್ಮತಾಳಿದ್ದಾರೆ. ಸಾಮಾಜಿಕ ಸೇವೆಯ ಮೂಲಕ ತಿಪಟೂರು ಲೈಫ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ತಿಳಿಸಿದರು.

      ನಗರದ ಗುರುಕುಲಾನಂದಶ್ರಮ ಕಲ್ಯಾಣಮಂಟಪದಲ್ಲಿ ಇತ್ತೀಚೆಗೆ ಜಾಗೃತಿ ಸಂಸ್ಥೆ ವತಿಯಿಂದ ತಿಪಟೂರು ಲೈಫ್ ಸ್ಟಾರ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲ್ಪತರು ನಾಡು ತಿಪಟೂರಿಗೂ ಕನ್ನಡ ಪದ್ಮಭೂಷಣ ಡಾ. ರಾಜ್‍ಕುಮಾರ್‍ಗೂ ಅವಿನಾಭಾವ ಸಂಬಂಧವಿದೆ. ಕರ್ನಾಟಕದ ಮೊದಲ ಚಲನಚಿತ್ರ ಸ್ಟುಡಿಯೋ ಕಂಠೀರವದ ನಿರ್ಮಾತೃ ಟಿ.ಎಸ್.ಕರಿಬಸಯ್ಯನವರ ಸೇವೆ ಅನನ್ಯವಾದುದು.

      ಇಂತಹ ನಾಡಿನಲ್ಲಿ ಕಳೆದ 21 ದಿನಗಳಿಂದ ಪರಿಸರ ಕಾಳಜಿ ಜಾಗೃತಿ ಮೂಡಿಸುವ ಕಾರ್ಯಕ್ರಮ, ಉಚಿತ ನೇತ್ರಚಿಕಿತ್ಸಾ ಶಿಬಿರ, ಸಾರ್ವಜನಿಕರಲ್ಲಿ ಸ್ಪರ್ಧೆ ಏರ್ಪಡಿಸಿ ವಿಜಯಶಾಲಿಗಳಿಗೆ ಬಹುಮಾನ ನೀಡುತ್ತಿರುವುದು ಉತ್ತಮ ಕಾರ್ಯವೆಂದರು.

      ಬೆಂಗಳೂರಿನ ಡಾ. ರಾಜ್‍ಕುಮಾರ್ ಸೇವಾ ಟ್ರಸ್ಟ್‍ನ ಟ್ರಸ್ಟಿ ಗ್ರೀನ್‍ಹೌಸ್ ವಾಸಣ್ಣ ಮಾತನಾಡಿ ನೇತ್ರದಾನ ಮಹಾದಾನ ಎಂಬ ಶೀರ್ಷಿಕೆಯಡಿ ರಾಜ್ಯದಾದ್ಯಂತ ಶಾಲಾಮಕ್ಕಳಿಗೆ ಉಚಿತ ಕಣ್ಣಿನ ಶಿಬಿರವನ್ನು ನಡೆಸಲಾಗುತ್ತಿದೆ ಎಂದರು.ಜಾಗೃತಿ ಸೇವಾಸಂಸ್ಥೆಯ ಅಧ್ಯಕ್ಷ ಸಿ.ಎಸ್.ರೇಣುಕಾರಾಧ್ಯ ಮಾತನಾಡಿ ಸ್ವಚ್ಛಸುಂದರ ನಗರವನ್ನಾಗಿಸಲು ಸೇವಾ ಸಂಸ್ಥೆಯ ವೇಗ ಪ್ರಗತಿಯಲ್ಲಿದ್ದು ನಗರದ ಮತ್ತು ಗ್ರಾಮೀಣ ಭಾಗದ ನಾಗರೀಕರಿಗೆ ಕೌಶಲ್ಯದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

 ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್‍ನ ಆರ್.ಶಿವಕುಮಾರ್, ಸಿ.ಡಿ.ಬಿ.ಹೆಚ್. ಗ್ರೂಪ್‍ನ ಸಿ.ಇ.ಓ ನವೀನ್‍ಕುಮಾರ್, ಮ್ಯಾನೇಜ್‍ಮೆಂಟ್‍ಗುರು ಹರೀಶ್, ವಾಣಿಜ್ಯ ಮಂಡಳಿ ವ್ಯವಸ್ಥಾಪಕ ಚಿದಾನಂದ್, ಜಾಗೃತಿ ಸಂಸ್ಥೆಯ ನಾಗೇಂದ್ರಗುಪ್ತ, ಕಿರಣ್, ಬಸವಣ್ಣ ಮುಂತಾವದರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap