ಕೆರೆಗಳಿಗೆ ಸಂಸ್ಕರಿಸಿದ ನೀರು ತಲುಪಿಸಲು ಮುಂಜಾಗೃತ ಕ್ರಮಗಳು ಅಗತ್ಯ

0
17

ಬೆಂಗಳೂರು

       ಬಯಲು ಸೀಮೆಯ ಕೆರೆಗಳಿಗೆ ಸಂಸ್ಕರಿಸಿದ ನೀರು ತಲುಪಿಸಲು ಸಾಕಷ್ಟು ಮುಂಜಾಗೃತ ಹಾಗೂ ಎಚ್ಚರಿಕೆಯ ಕ್ರಮಗಳು ಅಗತ್ಯವಾಗಿದ್ದು ಸ್ಥಳೀಯರು ಆತಂಕದಿಂದ ದೂರುಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಬಯಲು ಸೀಮೆಯ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ನೀರು ವಿಚಾರಣದಲ್ಲಿ ಪಾಲ್ಗೊಂಡಿದ್ದ ವಿಜ್ಞಾನಿಗಳು ಒತ್ತಿ ಹೇಳಿದರು.

       ಕುಮಾರ ಕೃಪಾದ ಗಾಂಧಿ ಭವನದಲ್ಲಿ ಶನಿವಾರ ಯುವಶಕ್ತಿ ಆಯೋಜಿಸಿದ್ದ, ಬಯಲು ಸೀಮೆಯ ಕೆರೆಗಳಿಗೆ ರಾಜಧಾನಿ ಬೆಂಗಳೂರಿನ ಸಂಸ್ಕರಿಸಿದ ನೀರು-ಈ ಕುರಿತು ವಿಜ್ಞಾನಿಗಳೊಂದಿಗೆ ವಿಚಾರ ಸಂಕಿರಣದಲ್ಲಿ ನೀರು ಸಂಸ್ಕರಣ ಮಾಡುವ ದಿಟ್ಟ ಕ್ರಮ ಬೇಕೆಂದು ವಿಜ್ಞಾನಿಗಳು ತಿಳಿಸಿದರು.

        ಅಂತರ್ಜಲ ಮಂಡಳಿ ನಿವೃತ್ತ ನಿರ್ದೇಶಕ, ವಿಜ್ಞಾನಿ ಡಾ.ವಿ.ಎಸ್.ಪ್ರಕಾಶ್ ಮಾತನಾಡಿ, ಕೆ.ಸಿ.ವ್ಯಾಲಿ ಕೊಳಚೆ ನೀರಿನ ಶುದ್ದೀಕರಣದ ಸಂದರ್ಭದಲ್ಲಿ ಇನ್ನು ಹಲವು ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.

       ನೀರಿನ ಶುದ್ದೀಕರಣ ಎಂದರೆ, ಯಾವ ರೀತಿಯ ಶುದ್ದೀಕರಣ,ಎಷ್ಟು ಪ್ರಮಾಣದ ನೀರನ್ನು ಯಾವ ರೀತಿಯಲ್ಲಿ ಶುದ್ದೀಕರಿಸಬೇಕೆಂದು? ತಿಳಿಯುವುದು ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ತಂತ್ರಜ್ಞಾನ ವೂ ಆಧುನಿಕವಾಗಿರಬೇಕು ಎಂದರು.

       ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರ ಸದಸ್ಯ ಡಾ.ಎಂ.ಕೆ. ರಮೇಶ್ ಮಾತನಾಡಿ, ಪ್ರಕೃತಿಯಿಂದ ಪಡೆದ ನೀರನ್ನು ಬಳಸುವುದು ಕಲುಷಿತಗೊಳಿಸುವುದು ಮಾತ್ರ ಹಕ್ಕಲ್ಲ. ಅದನ್ನು ಮತ್ತೆ ಪ್ರಕೃತಿ ಸ್ನೇಹಿ ಮಾಡಿಕೊಡುವ ಹೊಣೆಗಾರಿಕೆ ಇದೆ ಎಂದು ಹೇಳಿದರು.

        ನೀಲನಕ್ಷೆಗೆ ಸಿದ್ದ: ಕಲುಷಿತಕ್ಕೆ ಸಂಬಂಧಿಸಿದಂತೆ ನೀರು ನೀತಿಯಾಗಲಿ ಅಥವಾ ಕಾಯ್ದೆಯಾಗಲಿ ಜಾರಿ ಗೊಳಿಸಿದರೆ, ಸಮಸ್ಯೆ ಮುಕ್ತಿ ಸಾಧ್ಯ. ಆ ನಿಟ್ಟಿನಲ್ಲಿ ಒಂದು ಕಡತ, ನೀಲಿ ನಕ್ಷೆ ಸಿದ್ಧಪಡೆಸಿ ಸರ್ಕಾರಕ್ಕೆ ಕೊಡಲು ಕಾನೂನು ತಜ್ಞರು ಸಿದ್ಧರಿದ್ದೇವೆ ಎಂದು ಅವರು ವಿವರಿಸಿದರು.

        ಬಯಲುಸೀಮೆಯ ನೀರಿನ ಸಮಸ್ಯೆ ನೀಗಿಸುವುದಾಗಿ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಕೆ ಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ಯೋಜನೆಗಳ ಸಂಸ್ಕರಿಸಿದ ತ್ಯಾಜ್ಯ ನೀರಿನ ಗುಣಮಟ್ಟದ ಬಗ್ಗೆ ಹಲವಾರು ಸಂಶಯಗಳು ಮತ್ತು ಆತಂಕಗಳಿದ್ದು, ಸಾರ್ವಜನಿಕರು ಗೊಂದಲಿದ್ದಾರೆ ಎಂದು ಯುವ ಶಕ್ತಿ ಸದಸ್ಯರು ಆರೋಪಿಸಿದರು.

        ವಿಚಾರ ಸಂಕಿರಣದಲ್ಲಿ ವಿಜ್ಞಾನಿ, ಪರಿಸರ ಮತ್ತು ಅರಣ್ಯ ನಿವೃತ್ತ ಕಾರ್ಯದರ್ಶಿ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ, ಪರಿಸರ ವಿಜ್ಞಾನಿಗಳಾದ ನಿರ್ಮಲ ಗೌಡ, ಡಾ.ರಾಜ್‍ಮೋಹನ್, ಡಾ.ಜೆ.ಆರ್ ಮುದಕವಿ, ಡಾ.ಶಶಿರೇಖಾ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here