ಗೇಟ್ ತೇರ್ಗಡೆಯಾದರೆ ಮಾತ್ರ ಇಂಜಿನಿಯರಿಂಗ್ ಪದವಿ….!

0
84
ಬೆಂಗಳೂರು: 
           ನಮ್ಮ ದೇಶ ಪ್ರಪಂಚದ ಬುದ್ದಿವಂತ ಇಂಜಿನೆಯರ್ ಗಳ ಕಾರ್ಖಾನೆಯಾಗಿಬಿಟ್ಟಿದೆ ಈ ಉಪನಾಮಕ್ಕೆ ತಕ್ಕಂತೆ ನಮ್ಮಲ್ಲಿ ಪ್ರತಿ ವರ್ಷವೂ ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರಬರುವ ಇಂಜಿನಿಯರ್ ಗಳ ಸಂಖ್ಯೆ 7 ಲಕ್ಷ ತಲುಪಿದ್ದು, ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗ ಸಿಗುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬೆಳವಣಿಗೆಯನ್ನು ಗಮನಿಸಿರುವ ತಾಂತ್ರಿಕ ವಿದ್ಯಾಭ್ಯಾಸಕ್ಕಾಗಿ ಇರುವ ಅಖಿಲ ಭಾರತೀಯ ಪರಿಷತ್ (ಎಐಸಿಟಿಇ) ಗೇಟ್ ಪರೀಕ್ಷೆಯಲ್ಲಿ ತೇರ್ಗಡೆ ಯಾದವರಿಗೆ ಮಾತ್ರವೇ ಇಂಜಿನಿಯರಿಂಗ್ ಪದವಿ ನೀಡುವುದಾಗಿಘೋಷಿಸಿದೆ .
           2019-2020 ರಿಂದ ತಾಂತ್ರಿಕ ಕೋರ್ಸ್ ಗಳನ್ನು ಓದುವ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದ್ದು, ಗ್ರಾಜ್ಯೂಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (ಗೇಟ್) ಪರೀಕ್ಷೆಯನ್ನು ತೇರ್ಗಡೆಗೊಳಿಸಿದವರಿಗಷ್ಟೇ ಇನ್ನು ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಪದವಿ ಕೈಗೆ ಸೇರಲಿದೆ. ಗೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗದವರು ಮತ್ತೊಮ್ಮೆ ಗೇಟ್ ಪರೀಕ್ಷೆ ಬರೆಯಬೇಕಾಗುತ್ತದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here