ಮಹಿಳಾ ಸಾಫ್ಟ್‍ವೇರ್ ಇಂಜಿನಿಯರ್ ಗೆ ಇಬ್ಬರು ಯುವಕರಿಂದ ಕಿರುಕುಳ

0
12

ಬೆಂಗಳೂರು

         ರಸ್ತೆ ಮಧ್ಯದಲ್ಲೆ ಕಾರು ನಿಲ್ಲಿಸಿಕೊಂಡು ಟ್ರಾಫಿಕ್ ಜಾಮ್ ಮಾಡಿದ್ದನ್ನು ಪ್ರಶ್ನಿಸಿದ ಮಹಿಳಾ ಸಾಫ್ಟ್‍ವೇರ್ ಇಂಜಿನಿಯರ್‍ರೊಬ್ಬರ ಕೆನ್ನೆಗೆ ಹೊಡೆದು ಬಟ್ಟೆಯನ್ನು ಹರಿದು ಇಬ್ಬರು ಯುವಕರು ಕಿರುಕುಳ ನೀಡಿದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

         ಕಿರುಕುಳ ನೀಡಿದ ಮಂಜುನಾಥ್(29) ಮತ್ತು ಆತನ ಸ್ನೇಹಿತ ಮಧು (31)ನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಅ.5 ರಂದು ಕೈಕೊಂಡಹಳ್ಳಿಯ ರಸ್ತೆಯ ಮಧ್ಯದಲ್ಲಿ ಆರೋಪಿ ಮಂಜುನಾಥ್ ಜ್ಹೆನ್ ಕಾರ್‍ನ್ನು ನಿಲ್ಲಿಸಿಕೊಂಡಿದ್ದು ಸಂಚಾರ ದಟ್ಟಣೆ ಉಂಟಾಗಿತ್ತು ಇದನ್ನು ನೋಡಿದ ಮಹಿಳೆ ಪ್ರಶ್ನಿಸಿದಾಗ ಜಗಳ ತೆಗೆದ ಮಂಜುನಾಥ್ ಮತ್ತವನ ಸ್ನೇಹಿತ ಮಧು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ.

         ಈ ಸಂಬಂಧ ಹಲ್ಲೆಗೊಳಗಾದ ಮಹಿಳಾ ಟೆಕ್ಕಿ ಬೆಳ್ಳೂಂದುರು ಪೆಲೀಸ್ ಠಾಣೆಗೆ ದೂರು ನೀಡಿದ್ದಾರೆ. ಲೈಂಗಿಕ ಕಿರುಕುಳದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೆಲೀಸರು ಆರೋಪಿಗಳಾದ ಮಂಜುನಾಥ್ ಹಾಗೂ ಮಧುವನ್ನು ಬಂಧಿಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯ ಪುತ್ರ ಮಂಜುನಾಥ್ ಎಂದು ತಿಳಿದುಬಂದಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here