ಕ್ಯಾನ್ಸರ್‍ನಂತಹ ರೋಗದಿಂದ ಮುಕ್ತರಾಗಲು ಸೂಕ್ತ ಚಿಕಿತ್ಸೆ ಅಗತ್ಯ

0
13

ಶಿರಾ

        ತಂಬಾಕು ಹೆಚ್ಚು ಸೇವೆಯಿಂದ ಪುರುಷರಲ್ಲಿ ಬಾಯಿ ಕ್ಯಾನ್ಸರ್ ಮತ್ತು ವೈದ್ಯರ ಸಲಹೆ ಇಲ್ಲದೆ ನಿರಂತರವಾಗಿ ವಿವಿಧ ಬಗೆಯ ಮಾತ್ರೆ ಸೇವನೆಯಿಂದ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಬರುವ ಸಾಧ್ಯತೆ ಇದ್ದು, ದೇಹದ ಮೇಲೆ ಬಿಳಿ ಹಾಗೂ ಕೆಂಪು ಮಚ್ಚೆ ಕ್ಯಾನ್ಸರ್ ಹರಡುವಿಕೆಯ ಲಕ್ಷಣವಾಗಿದ್ದು ತಕ್ಷಣ ವೈದ್ಯರಲ್ಲಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆದರೆ ಮಾತ್ರಾ ಕ್ಯಾನ್ಸರ್‍ನಂತ ಭಯಾನಕ ಕಾಯಿಲೆಯಿಂದ ಮುಕ್ತಿ ಪಡೆಯಬುದೆಂದು ಸ್ತ್ರೀರೋಗ ತಜ್ಞೆ ಡಾ.ಮೋಕ್ಷದಾಯಣಿ ತಿಳಿಸಿದರು.

        ಶಿರಾ ತಾಲೂಕಿನ ದ್ವಾರನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರೀದೇವಿ ಮೆಡಿಕಲ್ ಕಾಲೇಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಅಸ್ಪತ್ರೆ ಶಿರಾ ಇವರ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಉಚಿತ ಕ್ಯಾನ್ಸರ್ ಹಾಗೂ ಮಹಿಳೆಯ ಗರ್ಭಕೋಶ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ ಮಾತನಾಡಿದರು.

         ಕ್ಯಾನ್ಸರ್ ರೋಗಿಗಳ ಸಂಖ್ಯೆಯಲ್ಲಿ ದೇಶದಲ್ಲಿ 5.ನೇ ಸ್ಥಾನದಲ್ಲಿ ರಾಜ್ಯವಿದ್ದು, ತಂಬಾಕು ಸೇವನೆ ತ್ಯಜಿಸಿ ಸರಳ ಆಹಾರ ಪದ್ದತಿ ಅನುಕರಣೆ ಮಾಡಿದರೆ ರೋಗ ಸುಳಿಯದಂತೆ ಮಾಡಬಹುದು. ತಾಯಂದಿರು ಸ್ಥನ ಮತ್ತು ಗರ್ಭಕೋಶ ಕ್ಯಾನ್ಸರ್ ಬಗ್ಗೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡು ಈ ಕ್ಯಾನ್ಸರ್ ಬಗ್ಗೆ ಸದಾ ಜಾಗೃತಿಯಿಂದ ಇರಬೇಕಿದೆ ಎಂದರು.

          ತಾಲೂಕು ಆರೋಗ್ಯಧಿಕಾರಿ ಡಾ. ಅಫ್ಜಲ್ ಉರ್ ರಹಮಾನ್ ಮಾತನಾಡಿ ಶ್ರಮದ ಜೀವನ ಕಟ್ಟಿ ಕೊಂಡಿರುವ ಗ್ರಾಮೀಣ ಪ್ರದೇಶದ ಮಹಿಳೆಯರು, ಸ್ತನದಲ್ಲಿ ಗಡ್ಡೆ ಇದ್ದರೆ ಅಥವಾ ಗರ್ಭಕೋಶದ ಸಮಸ್ಯೆ ಕಾಡುತ್ತಿದ್ದರು ಯಾವುದೇ ಸಂಕೋಚ ಇಲ್ಲದೆ ವೈದ್ಯರಲ್ಲಿ ಸಲಹೆ ಪಡೆದು ಆರೋಗ್ಯದ ಬಗ್ಗೆ ಹೆಚ್ಚು ಮುತ್ವರ್ಜಿ ವಹಿಸ ಬೇಕಿದೆ ಎಂದರು.

          ಉದ್ಘಾಟನೆ ನೆರವೇರಿಸಿ ಮಾತನಾಡಿದ ಹುಲಿಕುಂಟೆ ಜಿಲ್ಲಾ ಪಂಚಾಯತಿ ಸದಸ್ಯ ಎಸ್.ರಾಮಕೃಷ್ಣ ತಾಯಂದಿರು ದೇಹದ ಶುಚಿತ್ವದ ಬಗ್ಗೆ ಹೆಚ್ಚು ನಿಗಾ ವಹಿಸ ಬೇಕು, ಮನೆಗೆ ತಾಯಿಯೇ ಮೊದಲ ಗುರು ತಾಯಿ ಎಷ್ಟು ಸ್ವಚ್ಚತೆ ಕಾಪಾಡುತ್ತಾಳೋ ಮಕ್ಕಳು ಸಹ ಅದೇ ದಾರಿ ಅನುಕರಣೆ ಮಾಡುತ್ತಾರೆ ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.

          ಹುಲಿಕುಂಟೆ ತಾಪಂ ಸದಸ್ಯೆ ವಸುಧಾ ತಿಪ್ಪೇಶ್‍ಗೌಡ, ದ್ವಾರನಕುಂಟೆ ಗ್ರಾಪಂ ಅಧ್ಯಕ್ಷ ನರಸಿಂಹಯ್ಯ, ವೈದ್ಯಾಧಿಕಾರಿ ವೈದ್ಯಶ್ರೀ ಡಾ.ತಿಮ್ಮರಾಜು, ಮಾಜಿ ಗ್ರಾಪಂ ಉಪಾಧ್ಯಕ್ಷೆ ಜಯಮ್ಮ ಕೃಷ್ಣಮೂರ್ತಿ, ಶ್ರೀದೇವಿ ಮೆಡಿಕಲ್ ಕಾಲೇಜ್ ವೈದ್ಯರಾದ ಡಾ.ಮಾಳವಿಕಾ, ಡಾ.ಮೈತ್ರಿ, ಡಾ.ಮಾಲಿನಿ, ಡಾ.ನಿರಜ್, ಆರೋಗ್ಯ ಇಲಾಖೆಯ ತಿಮ್ಮರಾಜು, ಶ್ರೀರಾಮ್, ಕಿಶೋರ್ ಅಹಮದ್, ನರಸಿಂಹಮೂರ್ತಿ, ಮಂಜುನಾಥ್ ಸ್ವಾಮಿ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ವಿವಿಧ ಗ್ರಾಮಗಳಿಂದ ಆಗಮಿಸಿದ 100 ಮಹಿಳೆಯರಿಗೆ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ತಪಾಸಣೆ ಮಾಡಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here