ಎರಡು ದಿನಗಳ ಮಕ್ಕಳ ಹಬ್ಬ

0
28

ಬೆಂಗಳೂರು

        ಮರಗಿಡ ಹಸಿರಿನಿಂದ ಕಂಗೊಳಿಸುತ್ತಿರುವ ಕಬ್ಬನ್ ಉದ್ಯಾನವನದಲ್ಲಿ ಶನಿವಾರ ಮಕ್ಕಳ ಕಲವರ.ಅಲ್ಲಿದ್ದ ಸಾವಿರಾರು ಮಕ್ಕಳು ಬುಗುರಿ, ಗೋಲಿ, ಲಗೋರಿ, ಪಗಡೆ, ಹಗ್ಗದಾಟ, ಅಳುಗುಳಿ ಮನೆ, ಚಾಟರಿ ಬಿಲ್ಲು ಇನ್ನಿತರ ಗ್ರಾಮೀಣ ಕ್ರೀಡೆಗಳ ಸವಿಯುಂಡರು.

        ಕಬ್ಬನ್ ಉದ್ಯಾನವನದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಎರಡು ದಿನಗಳ ಮಕ್ಕಳ ಹಬ್ಬದಲ್ಲಿ ಸೇರಿದ್ದ ಚಿಣ್ಣರು ವೀರಗಾಸೆ, ಕರಡಿ ಮಜಲು, ಹೆಜ್ಜೆ ಮೇಳ, ಕಂಸಾಳೆ, ಧ್ವಜ ಕುಣಿತ, ಚಿಟ್ಟಿ ಮೇಳ, ಹಾಲಕ್ಕಿ ಸುಗ್ಗಿ ಕುಣಿತ, ಡೊಳ್ಳು ಕುಣಿತ, ನಂದಿ ಧ್ವಜ ಕುಣಿತವನ್ನು ಕಂಡು ಪುಳಕಿತರಾದರು

        ವಿವಿಧ ಜಿಲ್ಲೆಗಳ ಬಾಲಮಂದಿರ ಮತ್ತು ಸಂಘ-ಸಂಸ್ಥೆಗಳಿಂದ ಮಕ್ಕಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಪ್ರತಿಭೆಗಳ ಪ್ರದರ್ಶನ ಮಾಡಿದರು. ಜೊತೆಗೆ ಇಡೀ ದಿನ ಕಬ್ಬನ್‍ಪಾರ್ಕ್‍ನಲ್ಲಿ ಮಕ್ಕಳ ಆಟೋಟಗಳ ಜೊತೆಗೆ ತುಂಟಾಟ ಸಹ ಅಲ್ಲಿ ಕಂಡು ಬಂತು.
ಪುಟ್ಟ ಮಕ್ಕಳು ತಮ್ಮ ಪೋಷಕರ ಜತೆ ಇಡೀ ಉದ್ಯಾನಕ್ಕೆ ಪ್ರದಕ್ಷಿಣೆ ಹಾಕಿದರು. ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳು ಇಟ್ಟಿದ್ದ ಮಳಿಗೆಗಳಿಗೆ ಭೇಟಿ ನೀಡಿದ ಚಿಣ್ಣರು, ಅಲ್ಲಿದ್ದ ವಸ್ತುಗಳ ಬಗ್ಗೆ ಪೋಷಕರನ್ನು ಕೇಳಿ ತಿಳಿದುಕೊಂಡರು.

        ಕಬ್ಬನ್ ಪಾರ್ಕ್ ಮಧ್ಯ ಭಾಗದ ಬ್ಯಾಂಡ್ ಸ್ಟ್ಯಾಂಡ್ ಬಳಿ ಬೆಳಿಗ್ಗೆಯಿಂದಲೇ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಿರಿಧಾನ್ಯಗಳಿಂದ ತಯಾರಿಸಿದ ವಿಶೇಷ ಖಾದ್ಯಗಳ ಮಳಿಗೆಗೆ ಜನರು ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು.

        ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಒದಗಿಸುವುದರ ಜೊತೆಗೆ ಅವರ ಸುರಕ್ಷತೆ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಭವನ ಹಾಗೂ ಪೊಲೀಸ್ ಇಲಾಖೆ ಎಲ್ಲ ರೀತಿಯ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಮಾಡಿದೆಶನಿವಾರ ಮತ್ತು ಭಾನುವಾರ ಕಬ್ಬನ್‍ಪಾರ್ಕ್‍ನಲ್ಲಿ ವಾಹನ ಮತ್ತು ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಕ್ಕಳ ಹಬ್ಬಕ್ಕೆ ಬರುವವರಿಗೆ ಮಾತ್ರ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಭಾನುವಾರವೂ ಇಡೀ ದಿನ ಮಕ್ಕಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಮುಂದುವರಿಯಲಿವೆ.

ಸಾಂಸ್ಕೃತಿಕ ವಾತಾವರಣ

       ಮಕ್ಕಳ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ.ಜಯಮಾಲ ಅವರು ಮಕ್ಕಳು ದೇಶದ ಸಂಪತ್ತು ಅವರು ಆರೋಗ್ಯವಂತರಾಗಿ ನಕ್ಕು ನಲಿಯಬೇಕು ಇದನ್ನು ಗಮನಿನಿಸಿಯೇ ಕಬ್ಬನ್ ಉದ್ಯಾನವನದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದರು..

        ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುತ್ತಿದೆ. ಮಕ್ಕಳು ಸಣ್ಣ ವಯಸ್ಸಿನಲ್ಲಿ ಬಾಲ್ಯ ಕಳೆದುಕೊಳ್ಳುತ್ತಿದ್ದಾರೆ, ವಯಸ್ಸಾದ ಮೇಲೆ ವೃದ್ಧಾಪ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.ಈ ಸಂದರ್ಭದಲ್ಲಿ ಮಕ್ಕಳ ಹಬ್ಬಗಳು ಪ್ರಯೋಜನಕಾರಿ ಆಗಿವೆ ಎಂದು ಹೇಳಿದರು.

       ಕಳೆದ ಮೂರು ವರ್ಷಗಳಿಂದ ಈ ಮಕ್ಕಳ ಹಬ್ಬ ಆಚರಣೆ ಮಾಡಲಾಗುತ್ತಿದ್ದು ಈ ವರ್ಷ ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದ ಸಚಿವರು ಕಳೆದ ವರ್ಷ ಲಕ್ಷಾಂತರ ಮಕ್ಕಳು ಹಾಗೂ ಪೋಷಕರು ಈ ಮಕ್ಕಳ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here