ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ

ಬೆಂಗಳೂರು

    ದಾಸರಹಳ್ಳಿ ವಲಯದಲ್ಲಿ ಆರು ಅಕ್ರಮ ಗಾರ್ಮೆಂಟ್ಸ್ ಡೈಯಿಂಗ್ ಮತ್ತು ವಾಷಿಂಗ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿ ಕಟ್ಟಡಗಳನ್ನು ತೆರವು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

      ಅಕ್ರಮ ಕಟ್ಟಗಳ ಸ್ಥಳವನ್ನು ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ಮತ್ತು ಕಾರ್ಮಿಕ ಇಲಾಖೆಯ ವರದಿಯನ್ನು ಆಧರಿಸಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳು ಕಾರ್ಖಾನೆ ಮಾಲೀಕರಿಗೆ ಕೂಡಲೇ ಸ್ಥಳಾಂತರ ಮಾಡುವಂತೆ ನೋಟೀಸ್ ಜಾರಿ ಮಾಡಿದ್ದರು.

      ಆದರೂ ಈ ಕಾರ್ಖಾನೆ ಮಾಲೀಕರು ಘಟಕಗಳನ್ನು ಸ್ಥಗಿತಗೊಳಿಸದೆ ಮುಂದುವರೆಸಿದ್ದರಿಂದ ಶನಿವಾರ ಸ್ಥಳಕ್ಕೆ ಯಾವುದೇ ಮುನ್ನೆಚ್ಚರಿಕೆ ನೀಡದೆ, ಜೆಸಿಬಿ ಯಂತ್ರಗಳನ್ನು ಕೊಂಡೊಯ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರು, ಆ ಕಟ್ಟಡಗಳನ್ನು ನೆಲಸಮಗೊಳಿಸಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ..

     ತಿರುವನಂತಪುರದಲ್ಲಿರುವ ಮೇಜರ್ ಅಕ್ಷಯ ವಾಷಿಂಗ್ ಕಾರ್ಖಾನೆ ಎ.ಎಂ. ವಾಷ್ ಟೆಕ್, ತಿಪ್ಪೇನಹಳ್ಳಿಯಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ಎಂಟರ್‍ಪ್ರೈಸಸ್, ನಾಗಸಂದ್ರದಲ್ಲಿರುವ ಮಹಾಕಾಳಿ ಫ್ಯಾಕ್ಟರಿ ಹಾಗೂ ಇತರ ಎರಡು ಕಡೆಗಳಲ್ಲಿನ ಕಟ್ಟಡಗಳನ್ನು ಕೆಡವಿ ಹಾಕಲಾಯಿತು.
ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯು ಈಗಾಗಲೇ ಈ ಕಾರ್ಖಾನೆಗಳ ವಿರುದ್ಧ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿತ್ತು. ವಾಷಿಂಗ್ ಮತ್ತು ಡ್ರೈಯರ್ ಘಟಕಗಳು ಕಾನೂನುಬಾಹಿರವಾಗಿದ್ದು, ಕ್ರಮ ಕೈಗೊಳ್ಳಬೇಕೆಂದು ವರದಿ ಸಲ್ಲಿಸಿದ್ದಿತು.

     ಕಾರ್ಮಿಕ ಇಲಾಖೆಯಿಂದಲೂ ವರದಿ ತರಿಸಿಕೊಂಡ ಜಿಲ್ಲಾಡಳಿತ ಕೂಡಲೇ ಈ ಘಟಕಗಳನ್ನು ಸ್ಥಳಾಂತರಿಸಬೇಕೆಂದು ಮಾಲೀಕರುಗಳಿಗೆ ನೋಟೀಸ್ ಜಾರಿ ಮಾಡಿತ್ತು. ಉಪವಿಭಾಗಾಧಿಕಾರಿ (ಉತ್ತರ) ತಹಸಿಲ್ದಾರ್ ತೇಜಸ್ ಕುಮಾರ್ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ನೆಲಸಮ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap