ಶಾ ಆಗಮನ ಎರಡು ಗಂಟೆ ವಿಳಂಬ: ಉರಿಬಿಸಿಲಲ್ಲಿ ಸುಸ್ತಾದ ಅಭಿಮಾನಿಗಳು

0
2

ಹೊನ್ನಾಳಿ:

       ಮಂಗಳವಾರ ಪಟ್ಟಣದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ಧೇಶ್ವರ್ ಪರ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ಗಂಟೆಗಳಷ್ಟು ಕಾಲ ತಡವಾಗಿ ಆಗಮಿಸಿದರು.

        ಅಮಿತ್ ಶಾ ಮಂಗಳವಾರ ಬೆಳಿಗ್ಗೆ 10.30ಕ್ಕೆ ಆಗಮಿಸಬೇಕಿತ್ತು. ಅವರನ್ನು ಸ್ವಾಗತಿಸಲು ಪಕ್ಷದ ಕಾರ್ಯಕರ್ತರು-ಅಭಿಮಾನಿಗಳು ಬೆಳಿಗ್ಗೆ 9.30ರಿಂದಲೇ ಕಾದಿದ್ದರು. ಆದರೆ, ಹುಬ್ಬಳ್ಳಿಯಿಂದ ಆಗಮಿಸಬೇಕಿದ್ದ ಅಮಿತ್ ಶಾ, ಅಲ್ಲಿ ಏರ್ಪಾಡಾದ ಬಿಜೆಪಿ ಕಾರ್ಯಕರ್ತರ ಸಭೆ ಮುಗಿಸಿ ಹೊರಡುವುದು ತಡವಾದ ಕಾರಣ ಹೊನ್ನಾಳಿಗೆ ಮಧ್ಯಾಹ್ನ 12.10ರ ಸುಮಾರಿಗೆ ಆಗಮಿಸಿದರು.

         ಶಾ ಆಗಮನ ತಡವಾದ ಹಿನ್ನೆಲೆ ಪಕ್ಷದ ಕಾರ್ಯಕರ್ತರು-ಅಭಿಮಾನಿಗಳು, ಭದ್ರತಾ ಸಿಬ್ಬಂದಿ ಸೇರಿದಂತೆ ಅನೇಕರು ಬಿಸಿಲಿನ ಝಳದಿಂದ ತತ್ತರಿಸುವಂತಾಯಿತು. ಎಚ್. ಕಡದಕಟ್ಟೆ ವೃತ್ತದ ಬಳಿ ಇರುವ ಹೆಲಿಪ್ಯಾಡ್ ಹತ್ತಿರ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಪರದಾಡುವಂತಾಯಿತು.

       ಕೊನೆಗೆ, ಮಧ್ಯಾಹ್ನ 12.10ಕ್ಕೆ ಅಮಿತ್ ಶಾ ಆಗಮಿಸಿದ ತಕ್ಷಣ ಬಿಜೆಪಿ ಮುಖಂಡರು ಸಾಂಪ್ರದಾಯಿಕ ಸ್ವಾಗತ ನೀಡಿ, ಕಾರ್ಯಕ್ರಮದ ವೇದಿಕೆಯತ್ತ ಕರೆದೊಯ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here