ಗ್ರಂಥಾಲಯದ ಸೌಲಭ್ಯ ಸದುಪಯೋಗಕ್ಕೆ ಕರೆ

ತುಮಕೂರು:

        ಕನ್ನಡ ಭವನದ ಪ್ರಾಂಗಣದಲ್ಲಿ ತೆರೆದಿರುವ ಗ್ರಂಥಾಲಯ ವ್ಯವಸ್ಥಿತವಾಗಿದ್ದು, ಇದು ಸಮಯಕ್ಕೆ ಸರಿಯಾಗಿ ತೆರೆದಿರುತ್ತದೆ. ಮೇಲ್ವಿಚಾರಕರಾದ ಪುಷ್ಪ ಅವರು ಓದುಗರಿಗೆ ಪ್ರೋತ್ಸಾಹಿಸುತ್ತಾರೆ. ಶೌಚಾಲಯ ಮತ್ತು ಆವರಣದ ಶುಚಿತ್ವ ಉತ್ತಮವಾಗಿದೆ. ಓದುಗರಿಗೆ ಬೇಕಾದ ಉತ್ತಮ ವಾತಾವರಣ ಕೂಡಾ ಇಲ್ಲಿದೆ ಆದ್ದರಿಂದ ಓದುಗರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ನಿವೃತ್ತ ಪ್ರಾಚಾರ್ಯ ಕುಮಾರಸ್ವಾಮಿ ಕರೆ ನೀಡಿದರು.

      ರಾಜ್ಯೋತ್ಸವದಂದು ಕುಮಾರಸ್ವಾಮಿ ಅರು ತಮ್ಮ ಕುಟುಂಬದ ವತಿಯಿಂದ ಕನ್ನಡ ಭವನದಲ್ಲಿರುವ ನಗರ ಗ್ರಂಥಾಲಯಕ್ಕೆ 11,500 ರೂ. ಮೌಲ್ಯದ ವಿಶೇಷ ಕೃತಿಗಳನ್ನು ಉಚಿತವಾಗಿ ನೀಡಿದರಲ್ಲದೆ, ಅವರು ಈ ಕೆಳಕಂಡ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

        ಲಭ್ಯವಿರುವ ಪುಸ್ತಕಗಳ ಮಾಹಿತಿ ಫಲಕ ಪ್ರದರ್ಶಿಸಬೇಕು, ನಿಯತಕಾಲಿಕಗಳ ಸಂಖ್ಯೆ ಹೆಚ್ಚಾಗಲಿ, ಮಕ್ಕಳ ವಿಭಾಗ ಪ್ರತ್ಯೇಕ ತೆರೆದು ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಬೇಕು, ಓದುಗರು ಮತ್ತು ಸದಸ್ಯರು ಶಿಸ್ತಿನಿಂದ ವರ್ತಿಸಿ ಪಡೆದ ಕೃತಿಗಳನ್ನು ಸಮಯಕ್ಕೆ ಸರಿಯಾಗಿ ಹಿಂದಿರುಗಿಸಬೇಕು, ಕವಿಗಳ ಜನ್ಮದಿನಕ್ಕನುಗುಣವಾಗಿ ಮಸಿಕ ವಿಶೇಷ ಉಪನ್ಯಾಸವನ್ನು ಪ್ರಾಜ್ಞಾ ವಿದ್ವಾಂಸರಿಂದ ಏರ್ಪಡಿಸಿದರೆ ಆಸಕ್ತ ಸಾರ್ವಜನಿಕರಿಗೆ, ಕನ್ನಡ ಐಚ್ಛಿಕ ವಿಷಯ ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬಿತ್ಯಾದಿ ಸಲಹೆಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕ ಹನುಮದಾಸ್, ಜಿಲ್ಲಾ ತಾ.ಸಾ.ಪ. ಅಧ್ಯ್ಕಷ ಎಂ.ಜಿ.ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap