ವೈದ್ಯರು ಮತ್ತು ಸಿಬ್ಬಂದಿ ನೀಡುವ ಪ್ರಾಮಾಣಿಕ ಸೇವೆ ಆರೋಗ್ಯ ಇಲಾಖೆಯ ಗೌರವವನ್ನು ಹೆಚ್ಚಿಸುತ್ತದೆ.

ಚಳ್ಳಕೆರೆ

      ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ನೀಡುವಲ್ಲಿ ವೈದ್ಯಕೀಯ ಇಲಾಖೆ ಸಫಲವಾಗಿದೆ. ಹಲವಾರು ಬಾರಿ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದರೂ ಸಹ ಅವರ ವಿರುದ್ದ ಆರೋಪಗಳು ಬರುವುದು ಸಹಜ. ಆದರೆ, ನೀವು ಮಾಡುವ ಕಾರ್ಯವನ್ನು ಪ್ರಾಮಾಣಿಕತೆ ಮತ್ತು ಪಾರದರ್ಶಕವಾಗಿ ನಿರ್ವಹಿಸುವ ಮೂಲಕ ವೈದ್ಯಕೀಯ ಸೇವೆಯ ಗೌರವ ಮತ್ತು ಹಿರಿಮೆಯನ್ನು ಕಾಪಾಡಿಕೊಂಡು ಬರಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ಅಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ತಿಳಿಸಿದರು.

        ಅವರು, ಬುಧವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಮೊದಲ ಭೇಟಿಯಾಗಿದ್ದು, ಅವರನ್ನು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗ ಆತ್ಮೀಯವಾಗಿ ಸ್ವಾಗತಿಸಿತು.

        ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಿ.ಎಲ್.ಪಾಲಾಕ್ಷ ವೈದ್ಯರು ನೀಡುವ ಚಿಕಿತ್ಸೆ ರೋಗಿಗಳ ಪಾಲಿಗೆ ಹೊಸ ಶಕ್ತಿ ಹಾಗೂ ಬದುಕನ್ನು ನೀಡುತ್ತಿದ್ದು, ವೈದ್ಯರ ಸೇವೆಯನ್ನು ಸದಾ ಸ್ಮರಿಸುತ್ತಾರೆ. ಉತ್ತಮ ಚಿಕಿತ್ಸೆ ನೀಡುವ ವೈದ್ಯ ಇಲಾಖೆಯಲ್ಲಿ ಮತ್ತು ಸಾರ್ವಜನಿಕರಲ್ಲಿ ಸದಾಕಾಲ ಹೆಚ್ಚು ಗೌರವವನ್ನು ಪಡೆಯುವಂತಹವನ್ನಾಗುತ್ತಾನೆ. ನಮಗೆ ಶಿಕ್ಷಣ ನೀಡಿದ ಗುರುಗಳನ್ನು ನೆನೆಸುವಂತೆ ವೈದ್ಯರ ಸೇವೆಯನ್ನು ಜನಸಮುದಾಯ ಸದಾಕಾಲ ನೆನಪಿಸಕೊಳ್ಳುತ್ತದೆ ಎಂದರು.

        ಮಕ್ಕಳ ತಜ್ಞ ಡಾ.ಜಿ.ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ಸಿ.ಎಲ್.ಪಾಲಾಕ್ಷ ಚಳ್ಳಕೆರೆ ನಗರವೂ ಸೇರಿದಂತೆ ತಾಲ್ಲೂಕಿನ ಕೆಲವು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಿದ್ಧಾರೆ. ವೈದ್ಯರ ಎಲ್ಲಾ ರೀತಿಯ ಕಷ್ಟ ಸುಖಗಳ ಅರಿವು ಅವರಿಗೆ ಇದೆ. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ಲೋಪವಿಲ್ಲದೆ ವೈದ್ಯರು ಮತ್ತು ಸಿಬ್ಬಂದಿ ವರ್ಗ ರೋಗಿಗಳ ಹಿತವನ್ನು ಕಾಪಾಡುವಲ್ಲಿ ಯಶಸ್ಸಿಯಾಗಿದೆ. ಆಸ್ಪತ್ರೆಯ ಎಲ್ಲಾ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುವ ಗುಣ ಪಾಲಾಕ್ಷರವರಲ್ಲಿದೆ ಎಂದರು.

      ಪ್ರಾಸ್ತಾವಿಕವಾಗಿ ಮಾತನಾಡಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಬಸವರಾಜು ಮಾತನಾಡಿ, ಜಿಲ್ಲಾ ಆರೋಗ್ಯ ಅಧಿಕಾರಿಯಾಗಿರುವ ಪಾಲಾಕ್ಷ ಇಲಾಖೆಯಲ್ಲಿ ಹಲವಾರು ಆಯಾಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಯಾವುದೇ ವೈದ್ಯರು ಸಹ ನಿರ್ಲಕ್ಷದಿಂದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಆದರೆ, ಇಲ್ಲಿನ ಆಸ್ಪತ್ರೆಗೆ ಹಗಲು ರಾತ್ರಿ ಎನ್ನದೆ ಪ್ರತಿನಿತ್ಯ ಸಾವಿರಾರು ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಸಹಕಾರ ಮನೋಭಾವನದಿಂದ ಕಾರ್ಯನಿರ್ವಹಿಸುತ್ತಿದ್ದಾರೆಂದರು.

      ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ಡಾ.ಜಯಲಕ್ಷ್ಮಿರಾಜಕುಮಾರ್, ಡಾ.ಬಿ.ಆರ್.ಮಂಜಪ್ಪ, ಡಾ.ಅಮೀತ್ ಗುಪ್ತ, ಡಾ.ಪ್ರಜ್ವಲ್ ಧನ್ಯ, ಡಾ. ಸಾಯಿನಾಗಜ್ಯೋತಿ, ಸಹಾಯಕ ಆಡಳಿತಾಧಿಕಾರಿ ಕದುರಪ್ಪ, ವ್ಯವಸ್ಥಾಪಕಿ ಭಾರತಿ, ಮ್ಯಾಟ್ರನ್ ಸಾಂತಮ್ಮ, ಶುಶ್ರೂಷಕಿಯರಾದ ಪಾರ್ವತಮ್ಮ, ಪುಟ್ಟರಂಗಮ್ಮ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಎನ್.ಪ್ರೇಮಕುಮಾರ್ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap