ಶ್ರೀ ಮರ್ಹಷಿ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಣೆ

ಮಿಡಿಗೇಶಿ

        ದಾರ್ಶನಿಕ ಮಹಾಶಯರ ಜಯಂತಿಗಳ ಆಚರಣೆಯನ್ನು ಆಚರಿಸಲೆಂದೆ ಸರ್ಕಾರ ನಿಗದಿತ ದಿನದಂದು ರಜಾ ಘೋಷಣೆ ಮಾಡಿ ಅನುವು ಮಾಡಿಕೊಡುತ್ತಿದೆ. ಆದ್ದರಿಂದ ಸದರಿ ದಿನಗಳಂದೇ ದಿನಾಚಾರಣೆಯನ್ನು ಆಚರಿಸುವುದು ಸೂಕ್ತವಾಗಿರುತ್ತದೆ. ಶ್ರೀಮಹರ್ಷಿವಾಲ್ಮೀಕಿ ರಚಿಸಿರುವಂತಹ ರಾಮಾಯಣದಂತಹ ಉತ್ತಮ ಕೊಡುಗೆಗಳನ್ನು ಅನುಸರಿಸಿದ್ದೇ ಆದಲ್ಲಿ, ಎಲ್ಲಾ ಸಮುದಾಯದವರು ಮುಂದೆ ಬರಲು ಅನುಕೂಲಕವಾಗಲಿದೆ ಎಂದು ತಾಲ್ಲೂಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್ ಮಲ್ಲಿಕಾರ್ಜುನಯ್ಯ ತಿಳಿಸಿದರು.

        ಮಿಡಿಗೇಶಿ ಹೋಬಳಿ ಮಟ್ಟದ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ನಂ 4 ರ ಭಾನುವಾರದಂದು ನೂತನವಾಗಿ ನಿರ್ಮಿಸುತ್ತಿರುವ ವಾಲ್ಮೀಕಿ ಸಮುದಾಯ ಭವನದ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

       ಪ್ರಾಂಶುಪಾಲ ಮುದ್ದಪ್ಪ, ಶ್ರೀ ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆಯ ಬಗ್ಗೆ ಜನರಿಗೆ ಸವಿವರವಾಗಿ ಮಾಹಿತಿ ತಿಳಿಸಿದರು.
ಮುಖಂಡ ಎಂ.ಎಸ್ ಸುರೇಶ್ ಮಾತನಾಡಿ, ಸುಮುದಾಯವರು ಹಾಗೂ ಹಿಂದುಳಿದ ವರ್ಗಗಳ ಎಲ್ಲಾ ಜನಾಂಗದ ಪೋಷಕರು ತಮ್ಮ ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಿಸುವ ಮೂಲಕ ಚಿಕ್ಕ ಪುಟ್ಟ ಮಕ್ಕಳಿಗೆ ಟಿ.ವಿ ಯ ಕಡೆ ಗಮನ ಕೊಡದಂತೆ ಎಚ್ಚರ ವಹಿಸುವಂತೆ ತಿಳಿಸಿದರಲ್ಲದೆಯೇ ಅಪೂರ್ಣಗೊಂಡಿರುವ ವಾಲ್ಮೀಕಿ ಸಮುದಾಯ ಭವನವನ್ನು ಮುಂಬರುವ ವಾಲ್ಮೀಕಿ ಜಯಂತಿಯ ವೇಳೆಗೆ ಪರಿಪೂರ್ಣಗೊಳಿಸಲು ಎಲ್ಲರ ಸಹಕಾರದೊಂದಿಗೆ ಪೂರೈಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

      ಮಿಡಿಗೇಶಿ ಗ್ರಾಮ ಪಂಚಾಯಿತಿ ಅಧ್ಯಕ್ಷಿಣಿ ಜಯಮ್ಮ ಮಾತನಾಡಿ ಮುಂಬರುವ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯನ್ನು ಎಲ್ಲರ ಒಮ್ಮತದೊಂದಿಗೆ ನಿಗಧಿತ ದಿನದಂದೇ ಆಚರಿಸಲಾಗುವುದೆಂದರು. ಪಾವಗಡ ತಾಲ್ಲೂಕಿನ ಶ್ರೀ ವಾಲ್ಮೀಕಿ ಸಮುದಾಯ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ರವರು ಮಾತನಾಡಿ ಶ್ರೀ ವಾಲ್ಮೀಕಿ ಮಹರ್ಷಿರವರು ಎಲ್ಲಾ ಸಮುದಾಯದವರಿಗೆ ಬೇಕಾದ ಉತ್ತಮ ವ್ಯಕ್ತಿಯಾಗಿದ್ದವರು ಪಾವಗಡ ತಾಲ್ಲೂಕಿನ ನಾರಾಯಣ ಮೂರ್ತಿರವರ ಮಾತನಾಡಿ ರಾಜ್ಯ ನಾಯಕರಲ್ಲಿ ಈ ಹಿಂದಿನ ವಿಧಾನ ಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದು ರಾಜ್ಯಕ್ಕೆ ಮಧುಗಿರಿ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಂತಹ ಮಾಜಿ ಶಾಸಕ ಕೆ.ಎನ್.ರಾಜಣ್ಣನವರನ್ನು ಮುಂಬರುವ ವಿಧಾನ ಸಭಾ ಸದಸ್ಯರನ್ನಾಗಿ ಆಯ್ಕೆಮಾಡಲು ತಾಲ್ಲೂಕಿನ ಎಲ್ಲಾ ಜನಾಂಗದವರು ಸಹಕರಿಸುವಂತೆ ಮನವಿ ಮಾಡಿದರು.

       ಪಾವಗಡ ತಾಲ್ಲೂಕಿನ ಮುಗುದಾಳವಟ್ಟ ಓಂಕಾರ ಮೂರ್ತಿರವರು ಏಕಪಾತ್ರಾಭಿನಯ ಪಾತ್ರದ ನಟನೆಯ ಮೂಲಕ ಜನರಿಗೆ ಮನರಂಜನೆ ನೀಡಿದರು.

       ಇದೇ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷಿಣಿ ಜಯಮ್ಮ, ಗ್ರಾ.ಪಂ ಸದಸ್ಯರುಗಳಾದ ಪಿ.ಎಲ್.ಮಂಜುನಾಥ್, ಆದಿನಾರಾಯಣ, ಚಿನ್ನೇನಹಳ್ಳಿ ಗ್ರಾ.ಪಂ ಸದಸ್ಯ ಆರ್.ಪಲ್ಲಪ್ಪ, ಮಾಜಿ ಗ್ರಾ.ಪಂ ಅಧ್ಯಕ್ಷ ನಾಗರಾಜಪ್ಪ ಗ್ರಾಮದ ಮುಖಂಡರುಗಳಾದ ರಾಮಾಂಜಿನೇಯ, ಬಾಬು, ಚಿನ್ನಾಗಪ್ಪ, ನಿ.ಶಿ. ಲಕ್ಷ್ಮೀನಾರಾಯಣಪ್ಪ, ಮುದ್ದಪ್ಪ, ನರಸಿಂಹಯ್ಯ, ಕಾಮಣ್ಣ, ರಾಜಣ್ನ, ಚನ್ನೀರಪ್ಪ, ಸೇರಿದಂತೆ ತೋಟಮಡಗಲು, ಚಿನ್ನೇನಹಳ್ಳಿ, ಕತ್ತಿರಾಜನಹಳ್ಳಿ, ಕಸಾಪುರ, ಗ್ರಾಮಗಳ ಪರಿಶಿಷ್ಟ ಪಂಗಡದ, ಸಮುದಾಯದ ನಾಯಕರು ಉಪಸ್ಥಿತರಿದ್ದರು. ಶಿಕ್ಷಕ ನಟರಾಜು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವ ಚಿತ್ರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap