ದಸರಾ ರಜೆಯಲ್ಲಿ ವಿಶ್ವಾಸ ಕಿರಣ ತರಬೇತಿ

ದಾವಣಗೆರೆ:

      ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯಗಳಲ್ಲಿ ದಸರಾ ರಜೆ ಅವಧಿಯಲ್ಲಿ ವಿಶೇಷ ಬೋಧನಾ ತರಬೇತಿ ಏರ್ಪಡಿಸಿರುವುದು ವಿದ್ಯಾರ್ಥಿಗಳು ಅನುಕೂಲವಾಗಲಿದೆ ಎಂದು ಕೆ.ಜಿ. ಶಿವಕುಮಾರ್ ಹೇಳಿದರು.

      ಮಂಗಳವಾರ ನಗರದ ಸೀತಮ್ಮ ಬಾಲಕೀಯರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ವಿಶ್ವಾಸ ಕಿರಣ ಬೋಧನಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳಲ್ಲಿ ಕಠಿಣ ವಿಷಯಗಳ ಮೇಲೆ ವಿಶ್ವಾಸ ಮೂಡುವಂತೆ ನುರಿತ ಅಧ್ಯಾಪಕರಿಂದ ತರಗತಿಗಳು ನಡೆಯಲಿದ್ದು, ಮಧ್ಯಾನ್ನದ ಬಿಸಿಯೂಟದ ಅವಕಾಶ ಸಹ ಕಲ್ಪಿಸಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

       ಉಪಪ್ರಚಾರ್ಯ ಮಂಜಪ್ಪ ಎ.ಆರ್ ಮಾತನಾಡಿ, ಜಿಲ್ಲೆಯಲ್ಲಿ 16 ಕೇಂದ್ರಗಳಲ್ಲಿ ಒಟ್ಟು 300 ವಿದ್ಯಾರ್ಥಿಗಳು ಈ ವಿಶ್ವಾಸ ಕಿರಣ ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದು, 10 ದಿನಗಳ ಕಾಲ ನಡೆಯಲಿರುವ ಈ ತರಬೇತಿಯಲ್ಲಿ 6 ಪ್ರೌಢಶಾಲೆಯ ವಿದ್ಯಾರ್ಥಿಗಳು ಇದರ ಭಾಗಿಯಾಗಲಿದ್ದಾರೆ. ಎಂದರು.

        ದಕ್ಷಿಣ ವಲಯದ ಬಿಇಓ ಪುಷ್ಪಲತಾ, ಎಸ್‍ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಪರಮೇಶ್ ಕುಂದೂರು, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್. ಗಂಗಾಧರ, ಎಚ್.ಎನ್. ಸುಜಾತ, ವಸಂತ ಎನ್. ರಾಡೆ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap