ವಿಶ್ವಾಸ ಕಿರಣ ಕಾರ್ಯಕ್ರಮಕ್ಕೆ ಚಾಲನೆ

ತಿಪಟೂರು 

        ಸರ್ಕಾರ ದಸರಾ ರಜೆಯ ವಿಶೇಷ ಬೋಧನಾ ತರಗತಿಗಳನ್ನು ಸದುಪಯೋಗಪಡಿಸಿಕೊಂಡು ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತರುವಂತೆ ವಿದ್ಯಾರ್ಥಿಗಳಿಗೆ ಎಂ.ಡಿ.ಶಿವಕುಮಾರ್ ಕರೆ ನೀಡಿದರು.

        ತಾಲ್ಲೂಕಿನ ಹೊನ್ನವಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಕಲಿಕೆಯಲ್ಲಿ ಹಿಂದುಳಿದ 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನಾ ಕಾರ್ಯಕ್ರಮ ‘ವಿಶ್ವಾಸ ಕಿರಣ’ ಕಾರ್ಯಕ್ರಮವನ್ನು ಕೆ.ಪಿ.ಎಸ್ ಶಾಲೆಯ ಪ್ರಾಂಶುಪಾಲರಾದ ಎಂ.ಡಿ.ಶಿವಕುಮಾರ್ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ದಸರಾ ರಜೆಯ ವಿಶೇಷ ಬೋಧನಾ ತರಗತಿಗಳನ್ನು ಸದುಪಯೋಗಪಡಿಸಿಕೊಂಡು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳ 25 ದಿನಗಳ ಬೋಧನಾ ತರಗತಿಗಳಲ್ಲಿ ಕ್ಲಿಷ್ಟಕರ ವಿಷಯಗಳ ಪರಿಕಲ್ಪನೆಯನ್ನು ಅರ್ಥೈಸಿಕೊಂಡು ಉತ್ಸಾಹ, ಶ್ರದ್ಧೆ, ಪರಿಶ್ರಮದಿಂದ ಅಧ್ಯಯನದಲ್ಲಿ ತೊಡಗಿಕೊಂಡು ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳಲು ತಿಳಿಸಿದರು.

      ನೋಡಲ್ ಅಧಿಕಾರಿ ಚಂದ್ರಯ್ಯ, ಬಳುವನೇರಲು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಪುಟ್ಟಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾದ ಸದಾನಂದ, ದಕ್ಷಿಣಾಮೂರ್ತಿ, ಪ್ರವೀಣ್ ಹಾಗೂ ಹಿರಿಯ ಸಹಶಿಕ್ಷಕಿ ಲಕ್ಷ್ಮಿ ಉಪಸ್ಥಿತರಿದ್ದರು. ಹೊನ್ನವಳ್ಳಿ ಹೋಬಳಿ ಪಟ್ರೇಹಳ್ಳಿ, ಬಳುವನೇರಲು ಹಾಗೂ ಗೌಡನಕಟ್ಟೆ ಸರ್ಕಾರಿ ಪ್ರೌಢಶಾಲೆಯ ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap