ಎಸ್‍ಯುಸಿಐ: ನೋಟು ಕೊಡಿ-ಓಟು ನೀಡಿ ಅಭಿಯಾನ

0
2

ದಾವಣಗೆರೆ

        ಎಸ್‍ಯುಸಿಐ (ಕಮ್ಯುನಿಷ್ಟ್) ಪಕ್ಷದಿಂದ ದಾವಣಗೆರೆ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಧು ತೊಗಲೇರಿ ಅವರ ಪರವಾಗಿ ಎಸ್‍ಯುಸಿಐ ಕಾರ್ಯಕರ್ತರು ನಗರದಲ್ಲಿ ಬುಧವಾರ ‘ನೋಟು ಕೊಡಿ-ಓಟು ನೀಡಿ’ ಎಂಬ ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ಅಭಿಯಾನ ನಡೆಸಿದರು.

         ನಗರದ ಬಂಬೂ ಬಜಾರ್, ಬಸಾಪುರ, ಕೆ.ಆರ್.ಮಾರ್ಕೆಟ್ ಸೇರಿದಂತೆ ನಗರದ ವಿವಿಧೆಡೆ ‘ನೋಟು ಕೊಡಿ-ಓಟು ನೀಡಿ’ ಪ್ರಚಾರಾಂದೋನ ನಡೆಸಿದರು.

          ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ಯುಸಿಐ ಮುಖಂಡರು, ಚುನಾವಣೆ ಎಂದರೆ ಇಂದು ಹಣವಂತರಿಗೆ ಮಾತ್ರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ದೇಶದಾದ್ಯಂತ 119 ಕ್ಷೇತ್ರದಲ್ಲಿ ನೈಜವಾಗಿ ಜನಪರ ಕಾಳಜಿ ಹಾಗೂ ಹೋರಾಟದ ಹಿನ್ನಲೆಯಿಂದ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿರುವ ಏಕೈಕ ಪಕ್ಷವೆಂದರೆ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷವಾಗಿದೆ. ನಮ್ಮ ಪಕ್ಷದ ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಮಧು ತೊಗಲೇರಿಯವರು ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವವರು .ಅವರ ಚುನಾವಣಾ ಖರ್ಚನ್ನು ಸಂಪೂರ್ಣವಾಗಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷವೇ ಭರಿಸುತ್ತಿದೆ ಎಂದು ಹೇಳಿದರು.

         ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರು ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು ಹಾಗೂ ಈ ಯುಗದ ಮಹಾನ್ ಮಾಕ್ಸವಾದಿ ಚಿಂತಕರು ಆದ ಕಾಮ್ರೇಡ್ ಶಿವದಾಸ್ ಘೋಷ್‍ರವರು ನಮಗೆ ತಿಳಿಸಿಕೊಟ್ಟಿರುವ ಪಾಠವೆಂದರೆ ನೈಜ ಜನಪರ ವಾಗಿರುವ ಪಕ್ಷ. ತನ್ನ ಕಾರ್ಯಚಟುವಟಿಕೆಗಳು ಹೋರಾಟಗಳಿಗೆ ತನ್ನ ದೇಶದ ಜನರಿಂದ ಸಂಗ್ರಹಿಸಬೇಕು.

         ಹೋರಾಟಕ್ಕೆ ದೇಣಿಗೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತೋರಿಸಿಕೊಟ್ಟಿದ್ದಾರೆ ಈ ಮಾರ್ಗದರ್ಶನದಲ್ಲಿ 1948 ರಿಂದಲೂ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷವು ರಸ್ತೆಗಳಲ್ಲಿ, ಬಡಾವಣೆಗಳಲ್ಲಿ, ಬಸ್ಸುಗಳಲ್ಲಿ ಹಾಗೂ ಪಕ್ಷದ ಹಿತೈಷಿಗಳು ಬೆಂಬಲಿಗರ ಬಳಿ ಚುನಾವಣೆಯ ಖರ್ಚಿಗಾಗಿ ದೇಣಿಗೆ ಸಂಗ್ರಹಿಸುತ್ತಿದೆ. ಇದರ ಭಾಗವಾಗಿ ನಗರದಲ್ಲಿ ಪಕ್ಷದ ಅಭ್ಯರ್ಥಿಯು ಕಾಲ್ನಡಿಗೆಯ ಪ್ರಚಾರದ ಸಂದರ್ಭದಲ್ಲಿ ಜನ ಸಾಮಾನ್ಯರ ಬಳಿ ತೆರಳಿ ಓಟು ಮತ್ತು ನೋಟು ಎರಡನ್ನು ಕೊಟ್ಟು ಬೆಂಬಲಿಸ ಬೇಕೆಂದು ಜನರಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.

        ಈ ಸಂದರ್ಭದಲ್ಲಿ ಎಸ್‍ಯುಸಿಐ ಕಮ್ಯುನಿಸ್ಟ್‍ನ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ, ರಾಜ್ಯ ಸಮಿತಿ ಸದಸ್ಯೆ ಬಿ ಆರ್ ಅಪರ್ಣಾ, ಭಾರತಿ, ಸೌಮ್ಯ, ಸ್ಮಿತಾ, ನಾಗಜ್ಯೋತಿ, ಚಂದ್ರಶೇಖರಪ್ಪ, ಪರಶುರಾಮ್, ರವಿಕುಮಾರ, ತಿಪ್ಪೇಸ್ವಾಮಿ, ವಸಂತ್ ಕುಮಾರ್ ಮತ್ತಿತರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here