ವಕ್ಫ್ ಅಕ್ರಮ : ಹೈಕೋರ್ಟ್ ಆದೇಶದ ಪ್ರತಿ ಸಕ್ಕಿದರೆ ಕೊಡಿ : ಜಮೀರ್ ಅಹ್ಮದ್ ಖಾನ್

ಬೆಳಗಾವಿ

         ವಕ್ಫ್ ಮಂಡಳಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ಪಡೆಯಲು ಸರ್ಕಾರದಿಂದ ಯಾವುದೇ ಸಮಿತಿ ನೇಮಿಸಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಮೇಲ್ಮನೆಗಿಂದು ಸ್ಪಷ್ಟಪಡಿಸಿದ್ದಾರೆ.

         ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಡಾ. ವೈ.ಎ.ನಾರಾಯಣಸ್ವಾಮಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ವಕ್ಫ್ ಮಂಡಳಿ ಆಸ್ತಿ ಸಂರಕ್ಷಣೆ ಕುರಿತ ವರದಿ ಬಗ್ಗೆ ಹೈಕೋರ್ಟ್‍ನಲ್ಲಿ ಆದೇಶವಾಗಿದೆ. ಆದರೆ ಇಲ್ಲಿಯವರೆಗೂ ತಮಗೆ ಆದೇಶದ ಪ್ರತಿ ಸಿಕ್ಕಿಲ್ಲ. ಬಿಜೆಪಿ ಸದಸ್ಯರಿಗೆ ಸಿಕ್ಕಿದ್ದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

         ಸಚಿವರ ಉತ್ತರಕ್ಕೆ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿ ವರದಿಯನ್ನು ಸದನದಲ್ಲಿ ಮಂಡಿಸಲು ಹಿಂದೇಟು ಏಕೆ ಎಂದು ಪ್ರಶ್ನಿಸಿದರು. ಬಿಜೆಪಿಯವರ ಆಕ್ಷೇಪಕ್ಕೆ ಅಡ್ಡಿಪಡಿಸಿದ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಪ್ರಶ್ನೋತ್ತರ ಕಲಾಪದಲ್ಲಿ ಸಮಿತಿ ರಚನೆ ಬಗ್ಗೆ ಕೇಳಲು ಅವಕಾಶವಿದೆಯೇ ಹೊರತು ಸದನದಲ್ಲಿ ವರದಿ ಮಂಡಿಸಲು ಅವಕಾಶ ನೀಡಿಲ್ಲ ಎಂದರು.

       ಸದನದಲ್ಲಿ ಸಚಿವ ಜಮೀರ್ ಅಹ್ಮದ್ ಬೆಂಬಲಕ್ಕೆ ನಿಂತ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ, ಸರ್ಕಾರ ಯಾವುದೇ ಸಮಿತಿ ರಚಿಸಿಲ್ಲ. ವಕ್ಫ್ ಮಂಡಳಿ ಬಗ್ಗೆ ಬೇರೆ ರೂಪದಲ್ಲಿ ಪ್ರಸ್ತಾಪ ಮಾಡಿ. ಬೇಕಿದ್ದರೆ ಆಗ ಸಮಗ್ರವಾಗಿ ಚರ್ಚೆ ನಡೆಸೋಣ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap