ಮಧ್ಯಪಾನ ನಿಷೇಧಕ್ಕಾಗಿ 19ರಿಂದ ಪಾದಯಾತ್ರೆ

ಚಿತ್ರದುರ್ಗ

        ರಾಜ್ಯದಲ್ಲಿ ಮಧ್ಯಪಾನವನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧ ಮಾಡುವಂತೆ ಆಗ್ರಹಿ ಸರ್ಕಾರದ ಮೇಲೆ ಒತ್ತಡವನ್ನು ಹಾಕುವುದಕ್ಕೆ ಚಿತ್ರದುರ್ಗದಿಂದ ಪಾದಯಾತ್ರೆ ಜ. 19 ರಿಂದ ಪ್ರಾರಂಭವಾಗಲಿದೆ ಎಂದು ಸಂಚಾಲಕರಾರ ನರೇನಹಳ್ಳಿ ಅರುಣ್ ಕುಮಾರ್ ತಿಳಿಸಿದ್ದಾರೆ.

          ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಧ್ಯವನ್ನು ಮಾರಾಟ ಮಾಡುವುದರ ಮೂಲಕ ಸರ್ಕಾರವನ್ನು ನಡೆಸುತ್ತಿದೆ, ಆದರೆ ಇದರಿಂದ ಲಕ್ಷಾಂತರ ಕುಟುಂಬಗಳು ಹಾಳಾಗುತ್ತಿದೆ, ಅಪರಾಧ ಪ್ರಕರಣಗಳು ಇದರ ಸೇವನೆಯಿಂದ ನಡೆಯುತ್ತಿದ್ದು ಇದನ್ನು ನಿಲ್ಲಿಸುವಂತೆ ಸರ್ಕಾರವನ್ನು ಹಲವಾರು ಬಾರಿ ಆಗ್ರಹಿಸಿದರು ಸಹಾ ಸುಮ್ಮನೆ ಇದೇ ಇದರಿಂದ ಮಹಿಳೆಯರು ಒಮ್ಮದಿಂದ ನಿರ್ಧಾರ ಮಾಡಿ ಚಿತ್ರದುರ್ಗದಿಂದ ಪಾದಯಾತ್ರೆಯನ್ನು ಪ್ರಾರಂಭ ಮಾಡಿದ್ಧಾರೆ ಎಂದರು.

          ಈ ಪಾದಯಾತ್ರೆಯ ಅಂಗವಾಗಿ ನಗರದ ವಿಜ್ಞಾನ ಕಾಲೇಜು ಮೈದಾನದಲ್ಲಿ ಜ. 19 ರ ಬೆಳಿಗ್ಗೆ ಸರ್ವ ಧರ್ಮ ಗುರುಗಳ ಸಮ್ಮುಖದಲ್ಲಿ ಸಮಾವೇಶ ನಡೆಯಲಿದೆ, ಇದರಲ್ಲಿ ಸಾಣೀಹಳ್ಳಿಯ ಶ್ರೀ ಪಂಡಿತಾರಾಧ್ಯ ಶ್ರೀಗಳು, ಡಾ.ಮುರುಘಾ ಶರಣರು, ಮಾದಾರ ಚನ್ನಯ್ಯ ಶ್ರೀಗಳು, ಬೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಕೃಸ್ತ ಗುರುಗಳಾದ ಫಾದರ್ ಮತ್ತು ಮುಸ್ಲಿಂ ಧರ್ಮ ಗುರುಗಳು ಭಾಗವಹಿಸಲಿದ್ಧಾರೆ, ಇಲ್ಲಿ ಯಾವುದೇ ರಾಜಕೀಯದವರನ್ನು ಆಹ್ವಾನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

          ಜ. 19 ರ ಮಧ್ಯಾಹ್ನ 2.30 ರಿಂದ ಪ್ರಾರಂಭವಾಗುವ ಪಾದಯಾತ್ರೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ 2500 ಮಹಿಳೆಯರು ಭಾಗವಹಿಸಲಿದ್ದು ಚಿತ್ರದುರ್ಗದಿಂದ 500 ಜನ ಭಾಗವಹಿಸಲಿದ್ದಾರೆ, ಸಮಾವೇಶಕ್ಕೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಿಂದ ಸುಮಾರು 5000 ಜನ ಭಾಗವಹಿಸಲಿದ್ದಾರೆ, ಈ ಕಾರ್ಯಕ್ರಮಕ್ಕೆ ರೈತ ಸಂಘಟನೆ, ದಲಿತ ಸಂಘಟನೆ, ಪ್ರಗತಿ ಪರ, ಹೋರಾಟಗಾರರು ಬೆಂಬಲವನ್ನು ವ್ಯಕ್ತವನ್ನು ಪಡಿಸಿದ್ದಾರೆ ಎಂದು ಹೇಳಿದರು.

       ಚಿತ್ರದುರ್ಗದಿಂದ ಪ್ರಾರಂಭವಾಗುವ ಪಾದಯಾತ್ರೆ ಪ್ರತಿ ದಿನ 20 ಕಿ.ಮೀ. ದೂರ ಕ್ರಮಿಸಿ ನಂತರ ವಾಸ್ರವ್ಯ ಮಾಡಲಿದ್ದಾರೆ, ಜ. 19 ರಿಂದ ಪ್ರಾರಂಭವಾಗುವ ಪಾದಯಾತ್ರೆ ಜ. 30ರ ಗಾಂಧಿಜಿಯವರ ಪುಣ್ಯ ತಿಥಿಯಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ನಡೆಸುವುದರ ಮೂಲಕ ಸರ್ಕಾರಕ್ಕೆ ರಾಜ್ಯದಲ್ಲಿ ಮಧ್ಯಪಾನವನ್ನು ನಿಷೇಧ ಮಾಡುವಂತೆ ಆಗ್ರಹಿಸಲಾಗುವುದು ಎಂದ ಅವರು, ಜ. 19 ರಂದು ಪಾದಯಾತ್ರೆಯೂ ಕ್ಯಾದಿಗೆರೆ ಬಳಿ, ಜ. 20 ರಂದು ಮರಡಿಹಳ್ಳಿ ಗಣೇಶ ದೇವಾಲಯ ಬಳಿ, ಮರಡಿಹಳ್ಳಿಯಿಂದ ಹೊರಟು ಹೊಸೂರು ಗ್ರಾಮದ ಟೋಲ್ ಬಳಿ, ಜ. 21 ರಂದು ಹಿರಿಯೂರು ಸಮೀಪದ ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಬಳಿ, ಮಧ್ಯಾಹ್ನ ಹಿರಿಯೂರು ನಗರ, ಸಂಜೆ ನಿತ್ಯಾನಂದ ಆಶ್ರಮದಲ್ಲಿ ವಾಸ್ತವ್ಯ ಮಾಡಲಿದ್ದು ಜ. 22 ರಂದು ಜಿಲ್ಲೆಯ ಗಡಿ ಪ್ರದೇಶವಾದ ಜವನಗೊಂಡನಹಳ್ಳಿಯಿಂಧ ಶಿರಾ ತಾಲ್ಲೂಕನ್ನು ಪ್ರವೇಶ ಮಾಡಲಿದೆ ಎಂದರು.

         ಈ ಪಾದಯಾತ್ರೆಯ ಸಮಯದಲ್ಲಿ ಅಗತ್ಯವಾಗಿ ಬೇಕಾದಂತೆ ವಿವಿಧ ರೀತಿಯ ಊಟ, ಉಪಹಾರ, ಸೇರಿದಂತೆ ಇತರೆ ವ್ಯವಸ್ಥೆಯನ್ನು ವಿವಿಧ ಸಂಘಟನೆಯವರು, ಕೆಲವಡೆ ಸ್ವಯಂ ಆಗಿ ಮಾಡಲು ಮುಂದಾಗಿದ್ದಾರೆ, ಇಲ್ಲಿ ಯಾವುದೇ ರಾಜಕೀಯವನ್ನು ಪ್ರವೇಶ ಮಾಡಿಲ್ಲ ಎಂದು ಅರುಣ್ ಕುಮಾರ್ ತಿಳಿಸಿದರು. ಗೋಷ್ಟಿಯಲ್ಲಿ ರೈತ ಸಂಘದ ಲಕ್ಷ್ಮೀಕಾಂತ್, ಕಸವನಹಳ್ಳಿ ಶಿವಣ್ಣ, ಪರಮೇಶ್ವರಪ್ಪ, ನಿಂಗಾನಾಯ್ಕ್ ಬೇಬಿಜಾನ್, ಸೇರಿದಂತೆ ಇತರರು ಭಾಗವಹಿಸಿದ್ದರು,

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap