ಜಿಲ್ಲಾ ಆಡಳಿತ ನೊಂದ ಎಲ್ಲಾ ಕುಟುಂಬಗಳಿಗೆ ಸೂಕ್ತ ಸವಲತ್ತುಗಳನ್ನು ಒದಗಿಸುವಲ್ಲಿ ಯಶಸ್ಸಿಯಾಗಿದೆ.

0
9

ಚಳ್ಳಕೆರೆ

      ಕಳೆದ ಐದು ದಿನಗಳಿಂದ ಅಗ್ನಿ ದುರಂತದಲ್ಲಿನೊಂದ ಕುಟುಂಬಗಳು ಪ್ರಯಾಸಕರ ಜೀವನ ನಡೆಸುತ್ತಿದ್ದು, ಇದು ಎಲ್ಲರಿಗೂ ನೋವಿನ ಸಂಗತಿಯಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಇಲ್ಲಿನ ಸಮಸ್ಯೆ ನಿವಾರಣೆಯ ಬಗ್ಗೆ ಚರ್ಚೆ ನಡೆಸಿದ್ದು, ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯುತ್ತವೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

         ಅವರು ಭಾನುವಾರ ಸಂಜೆ ವೆಂಕಟೇಶ್‍ರ ನಗರ ಪಂಪ್‍ಹೌಸ್ ಬಳಿ ಬೆಂಕಿ ದುರಂತಕ್ಕೆ ಸಂಬಂಧಪಟ್ಟ ನೊಂದ ಕುಟುಂಬದ ಸದಸ್ಯರೊಂದಿಗೆ ಕುಳಿತು ಸುಧೀರ್ಘ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ನಗರದ ಅನೇಕ ದಾನಿಗಳು ನೀಡಿದ ಬಟ್ಟೆ, ಬರೆ, ದವಸ ದಾನ್ಯ, ಚೆಡ್‍ಶಿಟ್, ಚಾಪೆ ಮುಂತಾದ ವಸ್ತುಗಳನ್ನು ಪರಿಶೀಲಿಸಿದರು. ನಗರದ ನಾಗರಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಿರೀಕ್ಷೆಗೂ ಮೀರಿ ನೊಂದ ಜನತೆಗೆ ಸಹನುಭೂತಿಯ ಜೊತೆಗೆ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಆದರೆ, ನೊಂದ ಕುಟುಂಬ ವರ್ಗದವರು ಶಾಂತಯಿಂದ ತಾಲ್ಲೂಕು ಆಡಳಿತದೊಂದಿಗೆ ಮತ್ತು ನಗರಸಭೆ ಆಡಳಿತದೊಂದಿಗೆ ಸಹಕರಿಸಬೇಕು. ನಿಮ್ಮೆಲ್ಲರಿಗೂ ಉತ್ತಮ ವ್ಯವಸ್ಥೆಯನ್ನು ಮಾಡಲು ಜಿಲ್ಲಾಡಳಿತವೇ ಮುಂದೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ತಾವೆಲ್ಲರೂ ಶಾಂತಿ ಮತ್ತು ಸಮದಾನದಿಂದ ಸಹಕಾರ ನೀಡುವಂತೆ ಅವರು ತಿಳಿಸಿದರು.

      ಈಗಾಗಲೇ ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆಯೊಂದಿಗೆ ವರದಿಯನ್ನು ಸಿದ್ದಪಡಿಸುತ್ತಿದ್ದು, ಜಿಲ್ಲಾಧಿಕಾರಿಗಳ ಮೂಲಕ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯ ಪಡಿಸಲಾಗುವುದು. ನಗರಸಭೆ ಆಡಳಿತ ಈಗಾಗಲೇ 35 ಕುಟುಂಬಗಳಿಗೂ ಪರಿಹಾರದ ಚೆಕ್ ನೀಡಿದೆ. ಯಾವುದೇ ಸಂದರ್ಬದಲ್ಲೂ ನೊಂದ ಕುಟುಂಬದ ಸದಸ್ಯರು ಸಹನೆಯನ್ನು ಕಳೆದುಕೊಳ್ಳದಂತೆ ಜಾಗೃತೆ ವಹಿಸಬೇಕೆಂದು ತಿಳಿಸಿದರು.

         ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಜೆಇ ಲೋಕೇಶ್, ಹಿರಿಯ ಆರೋಗ್ಯ ನಿರೀಕ್ಷ ಮಹಲಿಂಗಪ್ಪ, ಗಣೇಶ್, ಗ್ರಾಮ ಲೆಕ್ಕಿಗ ರಾಜೇಶ್, ಪ್ರಭಾರ ಆರ್‍ಐ ಲಿಂಗೇಗೌಡ, ನಗರಸಭಾ ಸದಸ್ಯ ರಮೇಶ್‍ಗೌಡ, ಮಲ್ಲಿಕಾರ್ಜುನ, ಪ್ರಕಾಶ್, ಸಿ.ವೀರಭದ್ರಬಾಬು, ಪ್ರಸನ್ನಕುಮಾರ್, ಕಂದಿಕೆರೆ ಸುರೇಶ್‍ಬಾಬು ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here