ಅಭಿವೃದ್ದಿ ದೃಷ್ಠಿಯಿಂದ ಮೋದಿ ಗೆಲ್ಲಬೇಕು

ಚಿತ್ರದುರ್ಗ.

          ಬಿ.ಜೆ.ಪಿ ದೇಶದಾದ್ಯಂತ ಹಮ್ಮಿಕೊಂಡಿರುವ ಮೇರ ಪರಿವಾರ್, ಬಾ.ಜ.ಪ ಪರಿವಾರ್ (ನನ್ನ ಕುಟುಂಬ ಬಿ.ಜೆ.ಪಿ.ಕುಟುಂಬ) ಪ್ರಚಾರದ ಆಂದೋಲನವಾಗಿ ಇಂದು ಚಿತ್ರದುರ್ಗ ಜಿಲ್ಲಾ ಬಿ.ಜೆ.ಪಿ.ಯಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಟಿ.ಜಿ.ನರೇಂದ್ರನಾಥ್ ತಮ್ಮ ನಿವಾಸದಲ್ಲಿ ಬಿ.ಜೆ.ಪಿ. ಪಕ್ಷದ ಧ್ವಜಾರೋಹಣ ಮಾಡಿದರು

        ಈ ಸಂದರ್ಭದಲ್ಲಿ ಮಾತನಾಡಿದ ಜಿ.ಟಿ.ನರೇಂದ್ರನಾಥ್, ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಕ್ಷೇತ್ರದ ಗ್ರಾಮ ಮತ್ತು ವಾರ್ಡ್‍ಗಳಲ್ಲಿ ತಮ್ಮ ಮನೆಯ ಮೇಲೆ ಧ್ವಜವನ್ನು ಹಾರಿಸಬೇಕು. ಹಾಗೂ ಇತರೆ ಕಾರ್ಯಕರ್ತರು ಈ ಕೆಲಸದಲ್ಲಿ ಭಾಗವಹಿಸುವಂತೆ ಹುರಿದುಂಬಿಸಬೇಕು ಎಂದರು

         ದೇಶದಲ್ಲಿ 70ವರ್ಷ ಕಾಂಗ್ರೆಸ್ ಪಕ್ಷ ಸಾಧಿಸಲಾಗದಂತ ಸಾಧನೆಯನ್ನು ಪ್ರಧಾನಿ ಮೋದಿಯವರು ತಮ್ಮ ನಾಲ್ಕುವರೆ ವರ್ಷದ ಅವಧಿಯಲ್ಲಿ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ದೇಶವನ್ನು ಮುನ್ನೆಡೆಸಿದ್ದಾರೆ. ಮೋದೀಜಿ ರವರು ತಮ್ಮ ಬಡ್ಜೆಟ್‍ನಲ್ಲಿ ಕೃಷಿಕರಿಗೆ ಕಾರ್ಮಿಕ ವರ್ಗಕ್ಕೆ, ಬಡವರಿಗೆ ಅಸಂಘಟಿತ ವರ್ಗಕ್ಕೆ ತಮ್ಮ ಬಡ್ಜೆಟ್‍ನಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು

        ಪಕ್ಷದ ಹಿರಿಯ ನೇತಾರ ದೀನದಯಾಳ್ ಉಪಾಧ್ಯರ ಆಶಯದಂತೆ ಕಾರ್ಯಕರ್ತರ ನೀಡುವ ದೇಣಿಗೆಯಿಂದ ಪಕ್ಷ ನಡೆಯಬೇಕೆ ಹೊರತು, ಹಣದ ಥೈಲಿಯಿಂದ ಅಲ್ಲ ಎಂಬುದು ದೀನದಯಾಳ್ ರವರ ಆಶಯವಾಗಿತ್ತು. ಅದರಂತೆ ಪದಾಧಿಕಾರಿಗಳು, ಕಾರ್ಯಕರ್ತರು ನಡೆಯಬೇಕು. ಬಿ.ಜೆ.ಪಿ.ಪಕ್ಷ ತತ್ವ ಸಿದ್ಧಾಂತದ ಪಕ್ಷ, ರಾಷ್ಟ್ರದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರ ಪಡೆಯನ್ನು ಹೊಂದಿದೆ. ಪಾರದರ್ಶಕತೆಯಲ್ಲಿ ಇತರೆ ಪಕ್ಷಗಳಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು

         ಕಾರ್ಯಕರ್ತರು ತಮ್ಮ ತಮ್ಮ ಮೊಬೈಲ್‍ಗಳಲ್ಲಿ ನಮೋ ಹ್ಯಾಪನ್ನು ಡೌನ್‍ಲೋಡ್ ಮಾಡಿಕೊಂಡು ಪಕ್ಷಕ್ಕೆ ಸಹಕಾರಿಯಾಗುವಂತ ತಮ್ಮ ಶಕ್ತಿಯಾನುಸಾರವಾಗಿ 5/- ರೂ.ನಿಂದ 1000/- ರೂ.ವರೆಗೆ ದೇಣಿಗೆ ನೀಡಬಹುದು. ಇತರು ಈ ಅಭಿಯಾನದಲ್ಲಿ ಭಾಗವಹಿಸಲು ಪ್ರೇರೇಪಿಸಬೇಕಾಗಿದೆ ಎಂದರು.

      ಇದಕ್ಕೂ ಮೊದಲು ಬಿ.ಜೆ.ಪಿ. ಸಹ ಪ್ರಭಾರಿಯಾದ ಜಿ.ಎಂ.ಸುರೇಶ್ ರವರ ಬಿ.ಜೆ.ಪಿ. ಪಕ್ಷದ ಬಾವುಟವನ್ನು ಹಾರಿಸಲಾಯಿತು. ಈ ಸಂದರ್ಭದಲ್ಲಿ ಜಿ.ಎಂ.ಸುರೇಶ್ ವಿಭಾಗೀಯ ಸಹ ಪ್ರಭಾರಿ, ಮುರುಳಿ, ನಾಗರಾಜ ಬೇದ್ರೆ, ದಗ್ಗೆ ಶಿವಪ್ರಕಾಶ್, ನರೇಂದ್ರ, ಜಿತೇಂದ್ರ, ನಗರಸಭಾ ಸದಸ್ಯ ಹರೀಶ್, ರಂಗಸ್ವಾಮಿ, ನಂದಿ ನಾಗರಾಜ್, ರಾಜು ಶಿವನಕೆರೆ, ಸತ್ಯನಾರಾಯಣ, ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap