ನೆಲ,ಜಲದ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಅವಶ್ಯ

0
18

ಚಿತ್ರದುರ್ಗ:

          ಭಾಷೆ, ನೆಲ ಮತ್ತು ಜಲದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕಾದ ಅವಶ್ಯ ಕತೆ ಇದೆ ಎಂದು ಕರ್ನಾಟಕ ಪ್ರದೇಶ ಕಾಂಗೇಸ್ ಸಮಿತಿ ಕಾರ್ಯದರ್ಶಿ ಹನುಮಲಿ ಷನ್ಮುಖಪ್ಪ ಅಭಿಪ್ರಾಯ ಪಟ್ಟರು

          ನಗರದ ಯೂನಿಯನ್ ಪಾರ್ಕ್‍ನಲ್ಲಿ ಬಿ.ಎಂ. ಮತ್ತು ವಿ.ಎಂ. ಗ್ರೂಪ್‍ನಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

       ನಾವು ಮೊದಲು ಕನ್ನಡಿಗರು. ಈ ನೆಲ ಮತ್ತು ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯಲ್ಲಿಯೇ ವ್ಯವಹಾರ ಮಾಡುವ ಮೂಲಕ ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದು ಹೇಳಿದರು

       ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದು ಕಡೆ ಭಾಷೆ ಮತ್ತು ಗಡಿಯ ಸಮಸ್ಯೆ ಆದರೆ ಇನ್ನೊಂದು ಕಡೆ ಜಲದ ಸಮಸ್ಯೆ ಇದೆ. ಇಂತಹ ವಿಚಾರದಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಂದಾಗಬೇಕು ಎಂದು ಹನುಮಲಿ ಷನ್ಮುಖಪ್ಪ ಕರೆ ನೀಡಿದರು

         ಕನ್ನಡ ಭಾಷೆ ತುಂಬಾ ಶ್ರೀಮಂತವಾದದ್ದು. ಈ ಭಾಷೆಗೆ ತನ್ನದೇ ವೈಶೀಷ್ಟಗಳಿಗೆ. ಇಲ್ಲಿನ ಕಲೆ, ಶಿಲ್ಪಿ, ದೇಗುಲಗಳು ನಾಡಿನ ಹಿರಿಮೆಯನ್ನು ಬಿಂಬಿಸುತ್ತವೆ. ಹಲವಾರು ಮಹಾಪುರುಷರು ನಾಡು ನುಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ನಮ್ಮ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದರು

       ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ವಿಶ್ವ ಸಾಹಿತ್ಯ ಎಂದು ತಿಳಿಸಿದರು.

         ವಚನ ಸಾಹಿತ್ಯದಲ್ಲಿ ಎಲ್ಲ ವಿಚಾರಗಳು ಅಡಕವಾಗಿವೆ. ಯಾವುದೇ ವಿಧವಾದ ಕೃಷಿಗೆ ಬೇಕಾದರೂ ಅದಕ್ಕೆ ಅಗತ್ಯವಾದ ಮಾಹಿತಿ ಸಿಗುವ ವಚನ ಸಾಹಿತ್ಯ ಕನ್ನಡದಲ್ಲಿ ಇರುವುದು ಅತ್ಯಂತ ಮಹತ್ವದಾಗಿದೆ. ಇದು ಇಡೀ ವಿಶ್ವದ ಸಾಹಿತ್ಯವಾಗಿದೆ ಎಂದು ತಿಳಿಸಿದರು.ಉನ್ನತ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಪಿಎಚ್‍ಡಿ ಅಂತಹ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸಬೇಕು. ಸರ್ಕಾರವು ಲೇಖಕರು ರಚಿಸುವ ಕೃತಿಗಳನ್ನು ಪರಾಮರ್ಶಿಸಿ ಉತ್ತಮ ಕೃತಿಗಳನ್ನು ಮುದ್ರಿಸುವ ವ್ಯವಸ್ಥೆ ಜಾರಿಯಾಗಬೇಕು.

        ಕನ್ನಡ ವಿಮರ್ಶಾ ಸಾಹಿತ್ಯವನ್ನು ಕೇಂದ್ರವಾಗಿಟ್ಟುಕೊಂಡು ಮಧ್ಯಕರ್ನಾಟಕವಾದ ಚಿತ್ರದುರ್ಗದಲ್ಲಿ ವಿಮರ್ಶಾ ವಿಶ್ವವಿದ್ಯಾಲಯವನ್ನು ಆರಂಭಿಸಬೇಕು. ಜಗತ್ತಿನ ಯಾವುದೇ ಭಾಷೆಯಲ್ಲಿ ಅತ್ಯುತ್ತಮ ಕೃತಿ ಪ್ರಕಟವಾದರೆ ಅದನ್ನು 30 ದಿನದ ಒಳಗಾಗಿ ಕನ್ನಡದಲ್ಲಿ ಪ್ರಕಟಿಸುವ ಕಾರ್ಯವಾಗಬೇಕು. ಜತೆಗೆ ಕಡಿಮೆ ಬೆಲೆಯಲ್ಲಿ ಆಸಕ್ತ ಓದುಗರಿಗೆ ಸರ್ಕಾರ ಒದಗಿಸುವ ಕೆಲಸ ತುರ್ತಾಗಿ ಮಾಡಬೇಕಾಗಿದೆ. 

         ಹಿಂದಿನಿಂದಲೂ ಕಾಲಕಾಲಕ್ಕೆ ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳುತ್ತಾ ಬಂದಿದೆ. ಈಗ ಕೊರಗುತ್ತಾ ಸಾಗುತ್ತಿದೆ. ಅದನ್ನು ನೀಗಿಸುವ ಕೆಲಸ ಅವಶ್ಯವಾಗಿದೆ.

         ವೇದಿಕೆಯಲ್ಲಿ ಹಾಸ್ಯ ಸಾಹಿತಿ ಇಂದುಮತಿ ಸಾಲಿಮಠ, ರವಿ ಭಜಂತ್ರಿ, ಹನುಮಲಿ ಷಣ್ಮುಖಪ್ಪ, ನಗರಸಭೆ ಸದಸ್ಯ ಮಲ್ಲಿಕಾರ್ಜುನ್, ಹನುಮಂತಪ್ಪ, ಮುಸ್ತಾಪ, ನಾಗರಾಜ್, ಅಂಜಿನಪ್ಪ, ಮಾಜಿ ನಗರಸಭೆ ಸದಸ್ಯ ಗರಡಿ ಪ್ರಕಾಶ್, ಎಪಿಎಂಸಿ ಸದಸ್ಯ ಜಯಪ್ಪ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here