ವಿಜ್ಞಾನಿಗಳ ಕೌಶಲ್ಯ ಬಳಸಿಕೊಳ್ಳಲು ಅಗತ್ಯ ನೆರವು: ಕುಮಾರಸ್ವಾಮಿ

ಬೆಂಗಳೂರು

       ನಿರಂತರವಾಗಿ ಸಂಶೋಧನೆ ನಡೆಸಲು ವಿಜ್ಞಾನಿಗಳ ಕೌಶಲ್ಯ ಬಳಸಿಕೊಳ್ಳಲು ಅಗತ್ಯವಿರುವ ನೆರವನ್ನು ನ್ಯಾಯ ವಿಜ್ಞಾನ ಪ್ರಯೋಗಾಲಯಗಳಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ

       ನಗರದ ಹೊಸೂರು ರಸ್ತೆಯ ನಿಮ್ಹಾನ್ಸ್ ಸಭಾಂಗಣದಲ್ಲಿ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ ಆಯೋಜಿಸಿದ್ದ ‘ನ್ಯಾಯ ವಿಜ್ಞಾನದಲ್ಲಿ ಉದಯೋನ್ಮುಖ ಬೆಳವಣಿಗಳು’ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳ ಕೌಶಲ್ಯಕ್ಕೆ ಉತ್ತೇಜನ ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.

       ರಾಜ್ಯದ ಎಫ್‍ಎಸ್‍ಎಲ್‍ನಲ್ಲಿ ಡಿಎನ್‍ಎ ಪರೀಕ್ಷೆಯು ಬಹಳ ವೇಗವಾಗಿ ಫಲಿತಾಂಶ ನೀಡುತ್ತದೆ.ಇದರಿಂದ ಗಂಭೀರ ಅಪರಾಧ ಪ್ರಕರಣಗಳ ತನಿಖೆ ಬಹು ಬೇಗ ಪೂರ್ಣಗೊಳಿಸಬಹುದು ಇದರ ಜೊತೆಗೆ ಎಫ್‍ಎಸ್‍ಎಲ್ ನಲ್ಲಿನ ಫಲಿತಾಂಶ ಪಾರದರ್ಶಕವಾಗಿರುವುದು ಅಗತ್ಯವಾಗಿದೆ ಎಂದು ತಿಳಿಸಿದರು.

        ಎಫ್‍ಎಸ್‍ಎಲ್‍ನಲ್ಲಿ ಪ್ರಗತಿ ಸಾಧಿಸಲು ನಮ್ಮ ಸಂಶೋಧನಾ ಘಟಕ ಆಧುನಿಕವಾಗಿರಬೇಕು. ಇನ್ನೂ, ಮನುಷ್ಯನ ತಪ್ಪುಗಳಿಂದ ಎಫ್‍ಎಸ್‍ಎಲ್ ವರದಿ ಹೊರತಾಗಿರಬೇಕು.ಈ ನಿಟ್ಟಿನಲ್ಲಿ, ಈ ಸಂಸ್ಥೆಗೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದರು.

       ವಿಧಿ ವಿಜ್ಞಾನ ಸಂಶೋಧಾನ ಘಟಕಗಳಲ್ಲಿ ಕಾರ್ಯ ನಿರ್ವಹಿಸುವ ವಿಜ್ಞಾನಿಗಳು ಶಾಂತಿಯುತ ಸಮಾಜಕ್ಕೆ ಮುಖ್ಯವಾಗಿದ್ದಾರೆ. ಇನ್ನೂ, ನಮ್ಮ ರಾಜ್ಯದ ಎಫ್‍ಎಸ್‍ಎಲ್ ಪ್ರಯೋಗಾಲಯವು ಹಲವು ವಿಷಯಗಳಲ್ಲಿ ದೇಶದ ಇತರ ಲ್ಯಾಬ್‍ಗಳಿಗಿಂತ ವಿಶೇಷ ಮತ್ತು ವಿಭಿನ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್ಚನ ಜವಾಬ್ದಾರಿ

      ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಅಪರಾಧ ನ್ಯಾಯದಲ್ಲಿ ವಿಧಿ ವಿಜ್ಞಾನದ ಕಾರ್ಯ ಬಹಳ ಮುಖ್ಯವಾಗಿದೆ.ಡಿಎನ್‍ಎ ತಂತ್ರಜ್ಞಾನ ಎಫ್‍ಎಲ್‍ಎಲ್‍ನಲ್ಲಿ ತಪ್ಪಿತಸ್ಥರಲ್ಲದವರಿಗೆ ಶಿಕ್ಷೆಯಾಗುವುದನ್ನು ತಪ್ಪಿಸುತ್ತದೆ ಎಂದರು.

       ಎಫ್‍ಎಸ್‍ಎಲ್ ನಲ್ಲಿ ಹಲವು ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಎಫ್‍ಎಸ್‍ಎಲ್ ನಲ್ಲಿ ಅಪರಾಧ ಮಾಡುವ ವಿಧಾನ ಬದಲಾಗುತ್ತಿದ್ದಂತೆ ಹೆಚ್ಚಿನ ಜವಾಬ್ದಾರಿ ಹೆಚ್ಚಾಗಿದೆ ಪೊಲೀಸ್ ತನಿಖೆಗೆ ಎಫ್‍ಎಸ್‍ಎಲ್‍ನ ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

      ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು, ಮಾತನಾಡಿ,1967ರಲ್ಲಿ ಸ್ಥಾಪನೆಯಾಗಿ, ಕಳೆದ ಐವತ್ತು ವರ್ಷಗಳಿಂದ ನ್ಯಾಯಾ ವಿಜ್ಞಾನ ಪ್ರಯೋಗಾಲಯ ಉನ್ನತ ಸಾಧನೆ ಮಾಡಿದೆ. ರಾಜ್ಯದ ಮೈಸೂರು, ಬೆಂಗಳೂರು, ದಾವಣಗೆರೆ, ಕಲಬುರಗಿ, ಬೆಳಗಾವಿ, ಮಂಗಳೂರು ಸೇರಿದಂತೆ ಹಲವು ಕಡೆ, ಎಫ್ ಎಸ್‍ಎಲ್ ಕಚೇರಿಗಳು, ಸ್ಥಾಪನೆಯಾಗಿವೆ ಎಂದರು.

ಗಂಭೀರ ಕೃತ್ಯಗಳ ಪತ್ತೆ

      2017 ರಲ್ಲಿ ವಿಚಾರವಾದಿಗಳಾದ ಗೌರಿ ಲಂಕೇಶ್, ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣ. ಅದೇ ರೀತಿ, ಮಲ್ಲೇಶ್ವರಂ ಬಾಂಬ್ ಸ್ಫೋಟ ಸೇರಿದಂತೆ ರಾಜ್ಯದಲ್ಲಿ ನಡೆಯುವ ಗಂಭೀರ ಅಪರಾಧ ಪ್ರಕರಣಗಳನ್ನು ಬೋಧಿಸುವುದಲ್ಲದೆ, ಹೊರ ರಾಜ್ಯದ ಪ್ರಕರಣ ತನಿಖೆಗೆ ಈ ನಿರ್ದೇಶನಾಲಯ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

         ಕಾರ್ಯಕ್ರಮದಲ್ಲಿ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ ಲಾಂಛನ ಅಂಚೆ ಲಕೋಟೆ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಸಲೀಂ, ಹಿರಿಯ ಅಧಿಕಾರಿಗಳಾದ ಎಂ.ಎನ್.ರೆಡ್ಡಿ, ಪ್ರವೀಣ್ ಸೂದ್, ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ್ ವರ್ಮಾ, ಎಫ್‍ಎಸ್‍ಎಲ್ ನಿರ್ದೇಶಕಿ ಇಶಾಪಂತ್ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap