ಬೋಯಿಂಗ್‍ನ ಜಾಗತಿಕ ಕಾರ್ಯತಂತ್ರದಲ್ಲಿ ವಿಪ್ರೋ ಪ್ರಮುಖ ಪಾತ್ರ

0
8

ಬೆಂಗಳೂರು

        ದೇವನಹಳ್ಳಿಯ ವಿಪ್ರೋ ಇನ್ಫ್ರಾಸ್ಟ್ರಕ್ಚರ್ ಇಂಜಿನಿಯರಿಂಗ್-ಡಬ್ಲ್ಯೂಐಎನ್ ಘಟಕ ಭಾರತದಲ್ಲಿನ ಬೋಯಿಂಗ್ ಸಂಸ್ಥೆಗೆ ತನ್ನ ಉತ್ಪನ್ನಗಳನ್ನು ಸರಬರಾಜು ಮಾಡಲು ಪ್ರಾರಂಭಿಸಿದೆ.

         ಬೋಯಿಂಗ್ ಸಂಸ್ಥೆಯು 737 ಎಂಎಎಕ್ಸ್ ಮತ್ತು ಮುಂದಿನ ಪೀಳಿಗೆಯ 737 ಏರೋಪ್ಲೇನ್ ತಯಾರಿಕೆಗೆ ಸಹಕಾರಿಯಾಗಬಲ್ಲ ಸಲಕರಣೆಗಳ (ಸ್ಟ್ರಟ್) ಉತ್ಪಾದನೆಗೆ ಗುತ್ತಿಗೆ ನೀಡಿದೆ.

        ಬೋಯಿಂಗ್ ನಂತಹ “ಮೂಲಭೂತ ಸಲಕರಣೆಗಳ ಉತ್ಪಾದಕರು ಅತ್ಯಂತ ಯಶಸ್ವಿ 737 ಸರಣಿಯ ವಿಮಾನ ತಯಾರಿಕಾ ಸಲಕರಣೆಗಳಿಗಾಗಿ ನಮ್ಮ ಸಂಸ್ಥೆಗೆ ಗುತ್ತಿಗೆ ನೀಡಿರುವುದು ಹೆಮ್ಮೆಯ ಸಂಗತಿ. ಈ ಯೋಜನೆಯ ಗುರಿ ಮುಟ್ಟಲು ನಮ್ಮ ಉತ್ಪಾದನಾ ತಜ್ಞರು ಸಹಕರಿಸಲಿದ್ದಾರೆ ಎಂದು ವಿಪ್ರೋ  ಇನ್ಫ್ರಾಸ್ಟ್ರಕ್ಚರ್ ಇಂಜಿನಿಯರಿಂಗ್‍ನ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಕುಮಾರ್ ತಿಳಿಸಿದ್ದಾರೆ.

       ಪಾಲುದಾರಿಕೆ ಕುರಿತು ಬೋಯಿಂಗ್ ಇಂಡಿಯಾ ಸರಬರಾಜು ವಿಭಾಗದ ನಿರ್ದೇಶಕ ಅಶ್ವನಿ, “ಭಾರತದ ಪೂರೈಕೆದಾರರ ಜತೆಗಿನ ಪಾಲುದಾರಿಕೆಯು ಬೋಯಿಂಗ್‍ನ ಜಾಗತಿಕ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ” ಎಂದು ಹೇಳಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here