ಜಿಲ್ಲಾ ಆಸ್ಪತ್ರೆಯಲ್ಲಿ ಏಡ್ಸ್ ದಿನಾಚರಣೆ

ಬಳ್ಳಾರಿ,

        ಏಡ್ಸ್ ಒಂದು ಮಹಾಮಾರಿ, ಇದ್ದಂತೆ ಇದರಿಂದ ರಕ್ಷಿಸಿಕೊಳ್ಳಲು ನಾವು ತುಂಬಾ ಜಾಗೃತಿಯಿಂದ ಇರಬೇಕು. ಏಡ್ಸ್ ನಿಯಂತ್ರಣಕ್ಕಾಗಿ ಪ್ರತಿ ಹಳ್ಳಿ-ಹಳ್ಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಪಂನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಭಾಗ್ಯ ತಿರುಮಲ ಅವರು ತಿಳಿಸಿದರು.

        ಬೆಂಗಳೂರಿನ ರಾಜ್ಯ ಏಡ್ಸ್ ಪ್ರಿವೇನ್ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಮ್ಸ್, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ಹಾಗೂ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ ಮತ್ತು ವೇದಿಕೆ ಕಾರ್ಯಕ್ರಮವನ್ನು ಸೋಮವಾರ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

         ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಏಡ್ಸ್ ಖಾಯಿಲೆಯಲ್ಲಿ ರಾಜ್ಯದಲ್ಲಿ ಜಿಲ್ಲೆಯು 21ನೇ ಸ್ಥಾನದಲ್ಲಿದೆ ಅದನ್ನು 30ನೇ ಸ್ಥಾನಕ್ಕೆ ತರಬೇಕು. ಇದಕ್ಕೆ ಆರೋಗ್ಯ ಇಲಾಖೆಯು ಉತ್ತಮ ಕಾರ್ಯಗಳುನ್ನು ಮಾಡಿ ಏಡ್ಸ್ ನಿಯಂತ್ರಣದ ಬಗ್ಗೆ ಹಾಗೂ ಚಿಕಿತ್ಸೆಯ ಕುರಿತು ಅರಿವು ಮೂಡಿಸಬೇಕು ಎಂದರು.

        ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶಿವರಾಜ್ ಹೆಡೆ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಈ ರೋಗದ ಬಗ್ಗೆ ಸ್ವಲ್ಪ ಅನುಮಾನ ಬಂದರೂ ಸರ್ಕಾರಿ ಆಸ್ಪತ್ರೆಯ ಐ.ಆರ್.ಸಿ.ಟಿ.ಸಿ. ಕೇಂದ್ರಕ್ಕೆ ಭೇಟಿ ನೀಡಿ, ಉಚಿತವಾಗಿ ತಪಾಸಣೆ ಮಾಡಿಸಿಕೊಂಡು ಅನುಮಾನ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ ಅವರು ರಾಜ್ಯಮಟ್ಟದಲ್ಲಿ ಜಿಲ್ಲೆಯು 21ನೇ ಸ್ಥಾನಕ್ಕೆ ಬಂದಿರುವುದು ಉತ್ತಮ ರೀತಿಯ ಬೆಳವಣೆಗೆ ಇದು ಕೇವಲ ಆರೋಗ್ಯ ಇಲಾಖೆ ಅಲ್ಲದೇ ಸ್ವಯಂ ಸೇವಾ ಸಂಘಗಳ ಸಹಕಾರ ಸಹ ಇದೆ. ಈ ವರ್ಷ “ನಿಮ್ಮ ಹೆಚ್,ಐ,ವಿ ಸ್ಥಿತಿ ನಿಮಗೆ ತಿಳದಿರಲಿ” (ಏಟಿoತಿ ಥಿouಡಿ ಊIಗಿ sಣಚಿಣus)ಎಂಬ ಘೋಷ ವಾಖ್ಯವಾಗಿದೆ ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಜಾಮುದ್ದಿನ ಮಾತನಾಡಿ, ಎಡ್ಸ್ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆ ಹಾಗೂ ಎನ್.ಜಿ.ಒ ಸಂಸ್ಥೆಗಳು ತುಂಬಾ ಸಹಕಾರ ನೀಡಿವೆ ಅವುಗಳ ಕಾರ್ಯ ಶ್ಲಾಘನೀಯ ಎಂದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ.ಎನ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಚೌಹನ್, ಜಿಲ್ಲಾ ಪರೀವಿಕ್ಷಣಾ ಘಟಕದ ಡಾ.ಅನಿಲ್ ಕುಮಾರ್ ಅವರು ಮಾತನಾಡಿದರು. ಡ್ಯಾಪ್‍ಕುನ ಜಿಲ್ಲಾ ಮೇಲ್ವಿಚಾರಕ ಬಿ.ಗಿರೀಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಅವರು ಸ್ವಾಗತಿಸಿ ವಂದಿಸಿದಿರು.

       ಈ ಸಂದರ್ಭದಲ್ಲಿ ಹೊಸಪೇಟೆಯ ಎ.ಆರ್.ಟಿ ವೈದ್ಯಾಧಿಕಾರಿ ಡಾ.ಯೂನಿಸ್, ಆಪ್ತ ಸಮಾಲೋಚಕ ವಿಮ್ಸ್‍ನ ಪಿ.ಪಿ.ಟಿ.ಸಿ. ಕೇಂದ್ರದ ಆಪ್ತಸಮಾಲೋಚಕ ಜಯರಾಮ್, ಹೊಸಪೇಟೆಯ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಶಾಲಾ ತಂತ್ರಜ್ಞ ಪುಷ್ಪ, ವಿಮ್ಸ್‍ನ ರಕ್ತ ಬಂಡಾದ ಆಪ್ತ ಸಮಾಲೋಚಕರಾದ ಸಂತೋಷ್.ಜಿ, ಬಳ್ಳಾರಿಯ ಸ್ವಾಮಿ ವಿವೇಕಾನಂದ ರಕ್ತಬಂಡಾರದ ಎಸ್.ವಿ.ಗೋಪಾಲ ರೆಡ್ಡಿ, ವಿಮುಕ್ತಿ ಸಂಸ್ಥೆಯ ಅಧ್ಯಕ್ಷೆ ರತ್ನಮ್ಮ ಇವರ ಕಾರ್ಯಕ್ಕೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ನಿತ್ಯ ಜೀವನ ಸಂಸ್ಥೆಯ ಶ್ರೀನಿವಾಸ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯವರು ಶಾಲಾಮಕ್ಕಳು ಇದ್ದರು.

ಜಾಗೃತಿ ಜಾಥ :

         ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಿಗ್ಗೆ 9ಕ್ಕೆ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಜಾಗೃತಿ ಜಾಥಾಗೆ ಜಿ.ಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಚಾಲನೆ ನೀಡಿದರು. ಜಾಗೃತಿ ಜಾಥಾ ಕಾರ್ಯಕ್ರಮವು ಆಸ್ಪತ್ರೆಯಿಂದ ಪ್ರಾರಂಭಗೊಂಡು ರಾಯಲ್ ವೃತ್ತ, ಕೋರ್ಟ್ ವೃತ್ತ ಹಾಗೂ ಪ್ರಮುಖ ಬೀದಿಗಳಿಂದ ಜಿಲ್ಲಾಸ್ಪತ್ರೆಗೆ ತಲುಪಿತು. ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್.ಹಂದ್ರಾಳ್, ಡಿ.ಹೆಚ್.ಒ. ಡಾ.ಶಿವರಾಜ್ ಹೆಡೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ, ಡಾ.ರಾಜಶೇಖರ ರೆಡ್ಡಿ, ಡಾ.ವಿಜಯಲಕ್ಷ್ಮೀ, ಡಾ.ಅನೀಲ್ ಕುಮಾರ್, ಡಾ.ಕಟ್ಟಿಮನಿ, ಡಾ.ಅಬ್ದುಲ್, ಡಾ.ನರಸಿಂಹಮೂರ್ತಿ, ಹೆಚ್.ಐ.ವಿ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap