ವಿಶ್ವ ಕ್ಯಾನ್ಸರ್ ದಿನಾಚಾರಣೆ

0
18

ಕುಣಿಗಲ್

    ನಲವತ್ತು ವರ್ಷದ ಮೇಲ್ಪಟ್ಟ ಮಹಿಳೆಯರು ಹಾಗೂ ಪುರುಷರ ಆರೋಗ್ಯದಲ್ಲಿ ಯಾವುದೇ ರೀತಿಯ ಸಣ್ಣ ತೊಂದರೆಗಳು ಗೋಚವಾದರೂ ಸಹ ಕಡೆಗಣಿಸದೇ ತಕ್ಷಣ ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಕ್ಯಾಸರ್ ಸೇರಿದಂತೆ ವಿವಿಧ ಖಾಯಿಲೆಗಳನ್ನು ತಡೆಯ ಬಹುದೆಂದು ಸರ್ಕಾರಿ ಆಸ್ಪತ್ರೆಯ ಆಡಳಿತಾವೈದ್ಯಾಧಿಕಾರಿ ಡಾ. ಗಣೇಶಬಾಬು ತಿಳಿಸಿದರು.

     ಅವರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಎನ್.ಸಿ.ಡಿ. ಕ್ಲಿನಿಕ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕ್ಯಾನಸರ್ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

     ನವತ್ತು ವರ್ಷ ಮೇಲ್ಪಟ್ಟ ಮಹಿಳೆಯರು ಸೇರಿದಂತೆ ಪುರಷರಲ್ಲಿ ಉಗುಳು ನುಂಗುವ ಸಮಸ್ಯೆ ದೀರ್ಘ ಕಾಲದ ಕೆಮ್ಮು, ಶೀಘ್ರವಾಗಿ ತೂಕ ಕಳೆದುಕೊಳ್ಳುವಿಕೆ, ಹಸಿವಾಗದಿರುವುದು, ಶರೀರದಲ್ಲಿ ಗಾಯಗಳು ದೀರ್ಘ ಕಾಲ ಮಾಯದೇ ಇರುವುದು ಸೇರಿದಂತೆ ಮಹಿಳೆಯರಲ್ಲಿ ಹೆಚ್ಚು ರಕ್ತಸ್ರಾವ ಆಗುವುದು ಕೂಡ ಕ್ಯಾಸರ್‍ನ ಒಂದು ಚಿಹ್ನೆಯಾಗಿರಬಹುದು ಆದ್ದರಿಂದ ಇಂತಹ ಸಮಸ್ಯೆಗಳನ್ನು ಎದರಿಸುವ ರೋಗಿಗಳು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯರನ್ನು ಕಂಡರೆ ಅಂತಹವರನ್ನ ಸಂಪೂರ್ಣವಾಗಿ ಉಚಿತವಾಗಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಆದ್ದರಿಂದ ಉದಾಸೀನ ಮಾಡದೆ ಎಲ್ಲರೂ ಪರೀಕ್ಷೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

       ಇದೇ ಸಂದರ್ಭದಲ್ಲಿ ನೂರಾರು ವಯೋವೃದ್ದರಿಗೆ ಉಚಿತ ಪರೀಕೆಯನ್ನು ಮಾಡಲಾಯಿತು. ವೈದ್ಯರಾದ ಡಾ.ಮಂಜುನಾಥಸ್ಮರಣ್, ಡಾ. ಇಂಧೂದರ್,. ಹಿರಿಯ ದಂತವೈದ್ಯಾಧಿಕಾರಿ ಡಾ.ಜಗದೀಶ್, ಡಾ. ನವೀನ್, ಡಾ. ಶಶಾಂಕ್, ಪ್ರಯೋಗಶಾಲ ಪರೀಕ್ಷಕರಾದ ಅನಿತಾ, ಕಲಾ, ಔಷಧಿ ವಿತರಕರಾದ ಜಯಪ್ರದ ಸೇರಿದಂತೆ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here