ಜಿಪಂ ಅಧ್ಯಕ್ಷರಿಂದ ಶಾಲೆಯ ಕುಂದು ಕೊರತೆಗಳ ಬಗ್ಗೆ ವಿಚಾರಣೆ

0
4

ಹರಪನಹಳ್ಳಿ:

       ತಾಲೂಕಿನ ಕೂಲಹಳ್ಳಿ ಕ್ರಾಸ್ ಬಳಿ ಇರುವ ಶ್ರೀ ಗೋಣಿಬಸವೇಶ್ವರ ವಸತಿ ಪ್ರೌಢಶಾಲೆಗೆ ಶುಕ್ರವಾರ ಜಿಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾ ಬೇಟಿ ನೀಡಿ ಶಾಲೆಯ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು. 

         ಈ ಸಂದರ್ಭದಲ್ಲಿ ಕೂಲಹಳ್ಳಿ ಸಂಸ್ಥಾನದ ಚಿನ್ಮಯಿ ಶ್ರೀಗಳು ಶಾಲೆಗೆ ಮೂಲಸೌಕರ್ಯಗಳು ಮತ್ತು ಕಾಂಪೌಂಡಿನ ಅವಶ್ಯಕತೆ ಬಗ್ಗೆ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಅಧ್ಯಕ್ಷರು ಶಾಲೆಗೆ ಕಾಂಪೌಂಡ್ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಮೂಲಕ ನರೇಗಾ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.ಶಾಲೆಯ ವಿದ್ಯಾರ್ಥಿಗಳೊಂದಿಗೆ ಅಧ್ಯಕ್ಷರು ಕೆಲ ಸಮಯ ಚರ್ಚೆಯೊಂದಿಗೆ ಕಳೆದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಂ.ಪಿ.ನಾಯ್ಕ, ಬಿಜೆಪಿ ತಾಲೂಕು ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್, ಸದಸ್ಯರಾದ ಬೂದಿನವೀನ್, ಬಿ.ಮೆಹಬೂಬ್ ಸಾಬ್, ಅಣ್ಣಪ್ಪ, ನಾಗರಾಜ, ಮುಖಂಡರಾದ ತೆಲಿಗಿ ಲಕ್ಕಪ್ಪ, ಎಸ್.ಟಿ.ಮೋರ್ಚಾ ಅಧ್ಯಕ್ಷ ಲೋಕೇಶ್, ಎನ್.ಮಂಜುನಾಥ್, ಅಶೋಕ್, ಕೆಂಚಪ್ಪ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here