ಮದ್ಯವರ್ಜನ ಶಿಭಿರದ ಸಮಾರೋಪ ಸಮಾರಂಭ

ಹರಪನಹಳ್ಳಿ:

      ಜಗತ್ತಿನಲ್ಲಿ ನೂರನಲವತ್ತು ಲಕ್ಷ ಜನ ಮದ್ಯಪಾನಕ್ಕೆ ವ್ಯಸನಿಗಳಾಗಿದ್ದು ಖೇದಲರ ಸಂಗತಿಯಾಗಿದೆ ಎಂದು ತೆಗ್ಗಿನಮಠದ ಶ್ರೀ ವರಸದ್ಯೊಜಾತ ಶಿವಾಚಾರ ಮಹಾಸ್ವಾಮಿಗಳು ಹೇಳಿದರು.

      ಹರಪನಹಳ್ಳಿ ಹೊರ ವಲಯದಲ್ಲಿರುವ ದೇವರ ತಿಮ್ಮಾಲಾಪುರದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ ಪ್ರಗತಿ ಬಂದರು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಭಾನುವಾರ 1293ನೇ ಮದ್ಯವರ್ಜನ ಶಿಭಿರದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.

       ಜೀವನದಲ್ಲಿ ಏಳು ವ್ಯಸನಗಳಲ್ಲಿ ಒಂದಾದ ಮದ್ಯಪಾನಕ್ಕೆ ಅದೀನರಾದರೆ ಜೀವನ ರೂಪಿಸಿಕೊಳ್ಳುವಾಗ ಆರೊಗ್ಯ, ಕುಟುಂಬ, ಸಮಾಜ, ದೇಶದಲ್ಲಿ ದುಷ್ಪರಿಣಾಮ ಬೀರುತ್ತದೆ. ವ್ಯಸನಗಳಿಗೆ ಅಂಟಿಕೊಂಡಿದ್ದೇವೆ. ಇದು ಜೀವನದ ಘಟ್ಟಗಳಲ್ಲಿ ಕೆಲವೊಂದು ಸಂದರ್ಭದಲ್ಲಿ ದುಷ್ಟಟಕ್ಕೆ ಬಲಿಯಾಗಿರಬಹುದು ಇದು ಮಾರಕವಾಗಲಿದೆ ಎಂದು ಹೇಳಿದರು.

         ಸರಕಾರ ಮಾಡದ ಕೆಲಸವನ್ನು ಧರ್ಮಸ್ಥಳ ಸಂಸ್ಥೆಯು ಮಾಡುತ್ತಿದ್ದು, ಮನಪರಿವರ್ತನೆಯೊಂದಿಗೆ ಸುಸಂಸ್ಕತರಾಗಲು ಸಾಧ್ಯ ಇದರ ಕೀರ್ತಿ ವೀರೇಂದ್ರ ಹೆಗಡೆಯವರ ಸಲ್ಲುತ್ತದೆ ಎಂದ ಅವರು ಕುಟುಂಬ ಉಜ್ವಲವಾಗಲು ಈ ಶಿಬಿರ ಸಾರ್ಥಕವಾಗಲಿ ಎಂದರು.

        ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಜಿಲ್ಲಾ ನಿರ್ದೇಶಕ ಜಯಂತ ಪೂಜಾರ ಮಾತನಾಡಿ ಜೇನುಗೂಡಿಗೆ ಕೈ ಹಾಕಿದ ಅನುಭವ ಸಶಿಬಿರದಲ್ಲಿ ಆಗಿದ್ದು, ದುಷ್ವಟ, ದುರಾಬ್ಯಾಸ ದೂರ ಮಾಡುವ ಕೆಲಸ ಸಮಾಜದಲ್ಲಿ ಸವಾಲಿನ ಕೆಲಸ ಇದಾಗಿದೆ ಎಂದರು.

        ರಾಜ್ಯದಲ್ಲಿ 1.20.ಲಕ್ಷ, ದಾವಣಗೆರೆ ಜಿಲ್ಲೆಯಲ್ಲಿ 3200ಜನ ನವಜೀವನ ಸದಸ್ಯರಾಗಿದ್ದಾರೆ. ಅನೇಕ ವೃತ್ತಿಗಳಲ್ಲಿ, ಪ್ರತಿಭೆಯಲ್ಲಿ ತೊಡಗಿಸಿಕೊಂಡಿದ್ದವರು ಇಂದು ಬದಲಾವಣೆಯಾಗಿದ್ದಾರೆ. ಇಂಥವರನ್ನು ಈ ಶಿಬಿರದಿಂದ ಹೊರಬಂದು ತಮ್ಮ ಪ್ರತಿಭೆ ಸಮಾಜಕ್ಕೆ ತೋರಿಸುವ ಕೆಲಸ ಆಗಬೇಕಾಗಿದೆ ಎಂದ ಅವರು ಉತ್ತಮ ಸಂಸಾರ ನಡೆಸುವ ಜಾವಬ್ದಾರಿ ನಿಮ್ಮ ಮೇಲಿದೆ ಶಿಬಿರದ ಯಶಸ್ವಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

         ಜಿಲ್ಲಾ ಜನಜಾಗೃತಿ ಅಧ್ಯಕ್ಷ ಸುರೇಶ ಮಾತನಾಡಿ ಕುಡಿತದಿಂದಾಗುವ ದುಷ್ಪ ಪರಿಣಾಮಗಳು ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ದುಡಿದು ಕುಟುಂಬದೊಂದಿಗೆ ಉತ್ತಮವಾದ ಜೀವನ ನಡೆಸಿ, ಏನೇ ಕಷ್ಟ ಬರಲಿ ಅದನ್ನು ಎದುರಿಸಿ ಶಕ್ತಿಯನ್ನು ತಾವು ಪಡೆದುಕೊಳ್ಳಿ ಎಂದ ಅವರು ಜನ ಜಾಗೃತಿ ವೇದಿಕೆ ಸದಸ್ಯರು ಎಲ್ಲೂ ಕಪ್ಪು ಚುಕ್ಕೆ ಬರದಂತೆ ಎಚ್ಚರವಹಿಸಿ ಮುನ್ನಡೆಯಬೇಕು ಎಂದರು.

       ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷ ಬಂದೋಳ ಮಂಜುನಾಥ ಮಾತನಾಡಿ ಸಮಯ, ಅಧಿಕಾರ ಎಲ್ಲಾ ಸಮಯದಲ್ಲೂ ಸಹಕರಿಸುವುದಿಲ್ಲ, ಆದರೆ ನಡತೆ, ಉತ್ತಮ ಗುಣಗಳನ್ನು ಹೊಂದಬೇಕು, ಮನುಷ್ಯ ತಾನು ಬದಲಾವಣೆ ಆಗುವುದು ಅಗತ್ಯವಿದೆ. ಎಷ್ಟೇ ಶ್ರೀಮಂತರಾದರು ಕೂಡ ನಮ್ಮ ಜೀವನ ಉತ್ತಮ ಸ್ಥಿತಿಯಲ್ಲಿ ನೋಡಿಕೊಳ್ಳಬೇಕು ಕಾರಣ ಕುಡಿತ ಸೇರಿ ದುಷ್ಚಟಗಳನ್ನು ಬಿಡುವ ಸಂಕಲ್ಪದ ಮೂಲಕ ಕುಟುಂಬದೊಂದಿಗೆ ಉತ್ತಮ ಜೀವನ ನಡೆಸಿ ಎಂದರು.ಡಿವೈಎಸ್‍ಪಿ ನಾಗೇಶ್ ಐತಾಳ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಕುಸುಮಾ ಜಗದೀಶ, ಮಾತನಾಡಿದರು.

          ಒಟ್ಟು ಎಪ್ಪತ್ತೆರಡು ಜನ ಮದ್ಯವರ್ಜನ ಶಿಭಿರದಲ್ಲಿ ಪಾಲ್ಗೊಂಡು ಕುಡಿತವನ್ನು ಬಿಡಲು ನಿರ್ದಸಿದ್ದಾರೆ. ಈ ವೇಳೆ ಶಿಬಿರಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

        ಈ ಸಂದರ್ಭದಲ್ಲಿ ಯೋಜನಾಧಿಕಾರಿ ಗಣೇಶ ಮರಾಠೆ, ಸಾಸ್ವಿಹಳ್ಳಿ ಪ್ರಕಾಶ, ಪುರಸಭೆ ಉಪಾಧ್ಯಕ್ಷ ಸತ್ಯನಾರಾಯಣ, ಗ್ರಾಪಂ ಅದ್ಯಕ್ಷ ಬಿ.ಕೆಂಚಪ್ಪ, ಬಿ.ಸಿದ್ದೇಶ, ರೇಖಾ, ಇರ್ಷಾದ್, ಪಿ.ಟಿ.ಮಂಜುನಾಥ, ಜ್ಞಾನ ವಿಕಾಸ ಸಮಿತಿ ಉಮಾ ಸೇರಿದಂತೆ ಧಮಸ್ಥಳ ಸಂಸ್ಥೆಯ ಪದಾಧಿಕಾರಿಗಳು, ಇತರರು ಇದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap