ಇನ್ನೆರಡು ತಿಂಗಳಿನಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ: ಆಶೋಕ್

ಬೆಂಗಳೂರು

     ಇನ್ನೆರಡು ತಿಂಗಳಿನಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಒಂದೊಂದು ವಿಧಾನಸಭಾ ಕ್ಷೇತ್ರವೂ ಮುಖ್ಯ ಹಾಗಾಗಿ ಲೋಕಸಭೆಗೆ ಸ್ಪರ್ಧಿಸುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದ್ದರಿಂದ ತಾವು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಆಶೋಕ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

       ನಿವೃತ್ತ ಹೆಚ್ಚುವರಿ ವಾಣಿಜ್ಯ ತೆರಿಗೆ ಅಧಿಕಾರಿ ಡಾ. ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೇರ್ಪಡೆಮಾಡಿಕೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಸಲಹೆ ಮೇರೆಗೆ ನನ್ನ ಹೆಸರನ್ನು ಮಂಡ್ಯದಲ್ಲಿ ಕೈ ಬಿಡಲಾಗಿದೆ. ಲೋಕಸಭೆ ಸಾರ್ವತ್ರಿಕ ಚುನಾವಣೆಗೂ ಮುನ್ನ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಶತಃಸಿದ್ದ ಎಂದು ಸುಳಿವು ನೀಡಿದರು.

      ಕನಸು ಇಲ್ಲದವನು ಗುರಿ ಸಾಧಿಸಲಾಗಲ್ಲ. ನಾವು ಸರ್ಕಾರ ಮಾಡುವುದು ಶತಃಸಿದ್ದ. ಮತದಾರರು ನಮಗೆ ಹೆಚ್ಚು ಸ್ಥಾನ ಕೊಟ್ಟಿದ್ದಾರೆ. 37 ಸ್ಥಾನ ಬಂದವರು ಮುಖ್ಯಮಂತ್ರಿಯಾಗಿದ್ದಾರೆ. ನಾವು 104 ಸ್ಥಾನ ತೆಗೆದುಕೊಂಡು ಮುಖ್ಯಮಂತ್ರಿಯಾಗಬಾರದೇ? ಇದನ್ನು ಕನಸು ಎಂದಾದರೂ ತಿಳಿದುಕೊಳ್ಳಿ, ಗುರಿ ಏನಾದರೂ ತಿಳಿದುಕೊಳ್ಳಿ. ಆದರೆ ನಮ್ಮ ಸರ್ಕಾರ ಬಂದೇ ಬರಲಿದೆ ಎಂದರು. 

     ಸರ್ಕಾರ ರಚನೆಗೆ ನಾವು ಆಪರೇಷನ್ ಕಮಲ ಮಾಡುವುದಿಲ್ಲ. ನಮಗೆ ಎಷ್ಟು ಜನ ಬೇಕು, ಹೇಗೆ ಮಾಡಬೇಕು ಎಂದು ರಾಜ್ಯದ ಮತ್ತು ರಾಷ್ಟ್ರೀಯ ನಾಯಕರು ಚರ್ಚೆ ಮಾಡಲಿದ್ದಾರೆ ಏನು ಮಾಡಬೇಕು ಎಂದು ಪಕ್ಷ ತೀರ್ಮಾನ ಮಾಡಿಲಿದೆ. ಇದೀಗ ಉಪ ಚನಾವಣೆ ಇದೆ ಇದಕ್ಕೆ ಏನು ಬೇಕೋ ಅದನ್ನು ಮಾಡಲಿದೆ. ಆದರೆ ಲೋಕಸಭಾ ಚುನಾವಣೆಗೂ ಮೊದಲೇ ಸರ್ಕಾರ ರಚನೆ ಮಾಡಲಿದ್ದೇವೆ, ಕೇಂದ್ರದ ನಾಯಕರು ಲೋಕಸಭೆಗೂ ಮುನ್ನ ಸರ್ಕಾರ ರಚನೆ ಕಸರತ್ತು ಮಾಡಬೇಡಿ ಎಂದಿಲ್ಲ, ಯಾವುದೇ ಸಂದೇಶ ನಮಗೆ ಬಂದಿಲ್ಲ, ಕಾಯಿರಿ, ಮಾಡಿರಿ ಎನ್ನುವ ಸಂದೇಶ ಮಾಡಿಲ್ಲ, ನಾವು ಏನು ಮಾಡಿದರೂ ಕೇಂದ್ರದ ಒಪ್ಪಿಗೆ ಪಡೆದೇ ಮಾಡಲಿದ್ದೇವೆ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತೆ ಸರ್ಕಾರ ರಚಿಸಲಿದ್ದಾರೆ ಎಂದರು.

       ಜೆಡಿಎಸ್ ಕಾಂಗ್ರೆಸ್ ಪಕ್ಷಗಳಲ್ಲಿ ಮಂಡ್ಯ ಚುನಾವಣೆಗ ಸಂಬಂಧಪಟ್ಟಂತೆ ಸಮಸ್ಯೆಇದೆ, ನಾವು ಚುನಾವಣೆಯನ್ನು ಸವಾಲಾಗಿ ಸ್ವಿಕಾರ ಮಾಡಿದ್ದೇವೆ, ಮಂಡ್ಯದಲ್ಲಿ ಯಾವಾಗಲೂ ಎರಡನೇ ಸ್ಥಾನಕ್ಕೆ ಪ್ರಯತ್ನ ಮಾಡುತ್ತಿದ್ದೆವು ಈ ಬಾರಿ ಪ್ರಥಮ ಸ್ಥಾನಕ್ಕೆ ಪ್ರಯತ್ನ ಮಾಡುತ್ತೇವೆ, ಚುನಾವಣೆ ಬಂದಾಗ ಬೇರೆ ಪಕ್ಷದವರು ಬರೋದು ಸಾಮಾನ್ಯ, ಅವರನ್ನೆಲ್ಲ ಸ್ವಾಗತಿಸಲಿದ್ದೇವೆ, ಮೈತ್ರಿಯ ಒಡಕನ್ನು ನಾವು ಬಳಸಿಕೊಂಡು ಬೆಳೆಯುವ ಪ್ರಯತ್ನ ಮಾಡಲಿದ್ದೇವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap