ಶೇ.95ರಷ್ಟು ವೋಟರ್ ಸ್ಲೀಪ್ ವಿತರಣೆ : ಡಿಸಿ ರಾಮ್‍ಪ್ರಸಾತ್ ಮನೋಹರ್

0
10

ಬಳ್ಳಾರಿ

????????????????????????????????????

      ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನ.3ರಂದು ಮತದಾನ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಇಂದು ಸಂಜೆಯವರೆಗೆ ಶೇ.95ರಷ್ಟು ವೋಟರ್ ಸ್ಲೀಪ್‍ಗಳನ್ನು ನಮ್ಮ ಬೂತ್ ಲೆವೆಲ್ ಅಧಿಕಾರಿಗಳು ವಿತರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್‍ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.

         ಬೂತ್ ಲೆವಲ್ ಅಧಿಕಾರಿಗಳು ಮನೆ ಮನೆಗೆ ತೆರಳಿ ವೋಟರ್ ಸ್ಲೀಪ್‍ಗಳನ್ನು ವಿತರಿಸುವ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ 1713354 ಮತದಾರರಿದ್ದು, ಅದರಲ್ಲಿ ಶೇ.95ರಷ್ಟು ಮತದಾರರಿಗೆ ವೋಟರ್ ಸ್ಲೀಪ್ ವಿತರಿಸಲಾಗಿದೆ. ಉಳಿದ ಶೇ.5ರಷ್ಟು ವೋಟರ್ ಸ್ಲೀಪ್‍ಗಳನ್ನು ಇಂದು ಸಂಜೆಯವರೆಗೆ ವಿತರಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ.

         ವೋಟರ್ ಸ್ಲೀಪ್ ಸಿಗದವರು ಬೂತ್ ಹತ್ತಿರ ಚುನಾವಣಾ ಆಯೋಗದಿಂದ ಸ್ಥಾಪಿಸಲಾಗಿರುವ ವೋಟರ್ ಸ್ಲೀಪ್ ವಿತರಣಾ ಕೇಂದ್ರದಲ್ಲಿ ಪಡೆದು ಮತದಾನ ಮಾಡಬಹುದಾಗಿದೆ. ವೋಟರ್ ಸ್ಲೀಪ್ ಇಲ್ಲವೆಂದು ಮನೆಯಲ್ಲಿ ಕುಳಿತುಕೊಳ್ಳದೇ ಮನೆಯಿಂದ ಹೊರಬಂದು ಮತದಾನ ಮಾಡಿ ಎಂದು ಮನವಿ ಮಾಡಿರುವ ಡಿಸಿ ರಾಮ್‍ಪ್ರಸಾತ್ ಅವರು, ಮುಕ್ತ, ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here