ಹುಲಿ ಉಗುರು ಮಾರಾಟಗಾರರ ಬಂಧನ..!!

0
26

ಬೆಂಗಳೂರು  

      ರಾಜ್ಯದ ಗಡಿಭಾಗದ ಕಾಡುಗಳ ಬಳಿಯ ಹಳ್ಳಿಯಿಂದ ಹುಲಿ ಮತ್ತು ಚಿರತೆ ಉಗುರುಗಳನ್ನು ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಆರ್‍ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

        ನಾಗಮಂಗಲದ ಕವಿತ್ ಕುಮಾರ್ (23), ಗೋಪಿ (25) ಹಾಗೂ ಸಂಜಯ್‍ನನ್ನು ಬಂಧಿಸಿ 142 ಹುಲಿ ಹಾಗೂ ಚಿರತೆ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ ಆರೋಪಿಗಳು ಹುಣಸೂರಿನ ಪಕ್ಷಿರಾಜಪುರದ ವ್ಯಕ್ತಿಯೊಬ್ಬನಿಂದ ಹುಲಿ ಹಾಗೂ ಚಿರತೆ ಉಗುರುಗಳನ್ನು ಖರೀದಿಸಿಕೊಂಡು ಯಶವಂತಪುರದ ಹೂವಿನ ಮಾರುಕಟ್ಟೆಯ ಬಸ್ ನಿಲ್ದಾಣದ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಕಾರ್ಯಾಚರಣೆ ನಡೆಸಿದ ಪೆÇಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

        ಆರೋಪಿಗಳಿಗೆ ಮಾರಾಟ ಮಾಡಿದ್ದ ಪಕ್ಷಿರಾಜಪುರದ ವ್ಯಕ್ತಿಯ ಮಾಹಿತಿ ಪಡೆದಿದ್ದು ಆತನ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹುಲಿ ಹಾಗೂ ಚಿರತೆಗಳ ಉಗುರುಗಳನ್ನು ಉಂಗುರ ಹಾಗೂ ಸರಗಳಿಗೆ ಬಳಸುತ್ತಿದ್ದು, ಅವುಗಳನ್ನು ಧರಿಸಿದರೆ, ಅದೃಷ್ಟ ಬರುತ್ತದೆ ಎನ್ನುವ ನಂಬಿಕೆ ಇದೆ.

       ಇದರಿಂದಾಗಿ ಸಾರ್ವಜನಿಕರು ಹುಲಿ ಹಾಗೂ ಚಿರತೆಗಳ ಉಗುರುಗಳನ್ನು ಹೆಚ್ಚಿನ ಹಣಕೊಟ್ಟು ಖರೀದಿಸುತ್ತಿದ್ದು, ಅದನ್ನು ಬಂಡವಾಳವನ್ನಾಗಿ ಮಾಡಿಕೊಂಡ ಆರೋಪಿಗಳು ಈ ಕೃತ್ಯದಲ್ಲಿ ತೊಡಗಿರುವುದು ಕಂಡುಬಂದಿದೆ. ಆರೋಪಿಗಳನ್ನು ಆರ್‍ಎಂಸಿ ಯಾರ್ಡ್ ಇನ್ಸ್‍ಪೆಕ್ಟರ್ ಮಹಮದ್ ಮುಕ್ಕಾರಾಂ, ಮತ್ತವರ ಸಿಬ್ಬಂದಿ ಬಂಧಿಸಿದೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here