ಸಿರುಗುಪ್ಪ ವಿಶ್ವ ಮಾನಸಿಕ ಆರೋಗ್ಯ ದಿನ ಮಕ್ಕಳ ಆರೋಗ್ಯ ಕಾಪಾಡಿ – ಎ.ಅಬ್ದುಲ್ ನಬಿ

ಸಿರುಗುಪ್ಪ :-

     ವಿವಿಧ ಧರ್ಮ ಭಾಷೆ ಮತ್ತು ಪ್ರಾಂತ್ಯಗಳ ಜನರೊಂದಿಗೆ ಸೌಹಾರ್ದದಿಂದ ಇರುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನ ಬದ್ಧ ಮೂಲಭೂತ ಕರ್ತವ್ಯ ಎಂದು ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯರಾದ ಎ.ಅಬ್ದುಲ್ ನಬಿ ಹೇಳಿದರು.

       ನಗರದ ಇಬ್ರಾಹಿಂ ಮಂಜಿಲ್ ನಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನತೆ ಹಾಗೂ ಮಾನಸಿಕ ಆರೋಗ್ಯ ಪೊಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಜೀವನ ಕೌಶಲ್ಯವನ್ನು ಬೆಳೆಸುವುದರಿಂದ ಹಾಗೂ ಸವಾಲುಗಳನ್ನು ಎದುರಿಸಲು ಧೈರ್ಯ ತುಂಬುವುದರ ಮೂಲಕ ಮಕ್ಕಳಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಬಹುದಾಗಿದೆ.

      ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾನಸಿಕ ಆರೋಗ್ಯಕ್ಕೆ ಪ್ರಾರ್ಥನೆ, (ನಮಾಜ್) ಧ್ಯಾನ, ಕಲೆ, ಮುಂತಾದ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳ ಹವ್ಯಾಸಗಳಿಂದ ರೋಗಲಕ್ಷಣಗಳು ಶೀಘ್ರ ಪರಿಹಾರ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಎ ಮೊಹಮ್ಮದ್ ಇಬ್ರಾಹಿಂ, ಏ ಮೊಹಮ್ಮದ್ ರಫಿ, ಎ ಮೊಹಮ್ಮದ್ ನೌಷಾದ್ ಅಲಿ, ಎ ಮೊಹಮ್ಮದ್ ನಿಜಾಮುದ್ದೀನ್, ಎ ಮೊಹಮ್ಮದ್ ಹಾಜಿ, ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap