ಡಿ.30ಕ್ಕೆ ವೀರವನಿತೆ ಒನಕೆ ಓಬವ್ವ ಜಯಂತಿ

ಚಿತ್ರದುರ್ಗ;

           ಐತಿಹಾಸಿಕ ಚಿತ್ರದುರ್ಗದಲ್ಲಿ ಡಿಸೆಂಬರ್ 30ಕ್ಕೆ ರಾಜ್ಯ ಮಟ್ಟದ ವೀರವನಿತೆ ಒನಕೆ ಓಬವ್ವ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಭಾನುವಾರ ಇಲ್ಲಿ ಸಮಾವೇಶಗೊಂಡಿದ್ದ ಮುಖಂಡರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

           ನಗರಕ್ಕೆ ಸಮೀಪದ ಸೀಬಾರ ಬಳಿ ಇರುವ ಛಲವಾದಿ ಗುರುಪೀಠದಲ್ಲಿ ಶ್ರೀ ಬಸವನಾಗೀದೇವ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಜಯಂತಿ ಆಚರಿಸುವ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಛಲವಾದಿ ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೇಗಳ ಪ್ರತಿನಿಧಿಗಳು, ಚಿತ್ರದುರ್ಗದ ಇತಿಹಾಸದಲ್ಲಿ ಪ್ರಮುಖವಾಗಿ ದಾಖಲಾಗಿರುವ ಒನಕೆ ಓಬವ್ವನ ಚರಿತ್ರೆ ಇಡೀ ರಾಜ್ಯಕ್ಕೆ ಪ್ರಸರಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಜಯಂತಿಯನ್ನು ಅರ್ಥಪೂರ್ಣವಾಗಿ ರಾಜ್ಯಮಟ್ಟದಲ್ಲಿ ಆಯೋಜಿಸಬೇಕು ಎನ್ನುವ ಸಲಹೆ ವ್ಯಕ್ತವಾಯಿತು

          ಇಲ್ಲಿ ವ್ಯಕ್ತವಾದ ಸಲಹೆ, ಸಹಕಾರ ಕುರಿತು ಮಾತನಾಡಿದ ಶ್ರೀಬಸವನಾಗೀದೇವ ಸ್ವಾಮೀಜಿ ಅವರು, ಒನಕೆ ಓಬವ್ವ ಯಾವುದೇ ಶಸ್ತ್ರಬ್ಯಾಸ ವಿದ್ಯೆ ತರಬೇತಿ ಇಲ್ಲದೆ ಕೋಟೆಯೊಳಗಿನ ಕಳ್ಳಕಿಂಡಿಯಿಂದ ಒಳನಸುಳವ ಹೈದರಾಲಿ ಸೈನಿಕರನ್ನು ಸದೆ ಬಡಿದು ದುರ್ಗದ ಕೋಟೆಯನ್ನು ರಕ್ಷಿಸಿದ ವೀರವನಿತೆಗೆ ನಾವುಗಳೆಲ್ಲರೂ ಚಿರ ಋಣಿಗಳು. ಅಂತಹ ದಿಟ್ಟ ಮಹಿಳೆಗೆ ನಾಡಿನಾದ್ಯಂತ ಗೌರವ ಸಿಗಬೇಕು. ಜಯಂತೋತ್ಸವಕ್ಕೆ ರಾಜ್ಯದ ಹಾಲಿ ಮತ್ತು ಮಾಜಿ ಮಂತ್ರಿಗಳು, ಚುನಾಯಿತ ಪ್ರತಿನಿಧಿಗಳು, ವಿವಿಧ ಮಠಾಧೀಶರು, ಸಾಹಿತಿಗಳು ಮತ್ತು ಚಿಂತಕರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು

           ಡಿಸೆಂಬರ್ 30ರಂದು ಕೋಟೆನಗರಿ ಚಿತ್ರದುರ್ಗದಲ್ಲಿ ನಡೆಯುವ ಈ ಕಾರ್ಯಕ್ರಮ ಅತಂತ ಅರ್ಥಪೂರ್ಣ ಮತ್ತು ವಿಜೃಂಬನೆಯೂ ಆಗಿರಬೇಕು. ಸಮಾಜದ ಪ್ರತಿಯೊಬ್ಬರೂ ಇಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಬೇಕು. ಈ ವಿಚಾರದ ಕುರಿತು ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು

           ಛಲವಾದಿ ಗುರುಪೀಠದ ಉಪಾಧ್ಯಕ್ಷರೂ ಆಗಿರುವ ವೈಧ್ಯಾಧಿಕಾರಿ ಡಾ.ಪಿ.ವಿ.ಶ್ರೀಧರಮೂರ್ತಿ ಮಾತನಾಡಿ, ಚಿತ್ರದುರ್ಗದಲ್ಲಿ ಕೋಟೆ ರಕ್ಷಣೆ ಮಾಡಿದ ದಿಟ್ಟ ಮಹಿಳೆ ಒನಕೆ ಓಬವ್ವ ಜಯಂತಿ ಆಚರಣೆಯ ಮೂಲಕ ಇಡೀ ನಾಡಿಗೆ ಸಂದೇಶ ಸಾರಬೇಕಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಈ ಮೂಲಕವಾಗಿಯೂ ನಾವು ಸಂಘಟಿತರಾಗಬೇಕು ಎಂದು ಹೇಳಿದರು
ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‍ಕುಮಾರ್, ಶಾರದಾ ಬ್ರಾಸ್ ಬ್ಯಾಂಡ್‍ನ ಗುರುಮೂರ್ತಿ, ಕಾರ್ಯದರ್ಶಿ ಜಿ.ಹೆಚ್.ಮೋಹನ್, ಬಸವರಾಜಪ್ಪ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರವಿಕುಮಾರ್, ಎಸ್.ಎನ್.ಜಯರಾಮಪ್ಪ, ಪತ್ರಕರ್ತ ನವೀನ್, ಗೌರಣ್ಣ, ಶೇಷಣ್ಣ, ನಾಗರಾಜ್, ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap