ಕಾರ್ಮಿಕರನ್ನು ಖಾಯಂಗೊಳಿಸಲು ಒತ್ತಾಯ

0
3

ಹಾನಗಲ್ಲ :

        ಹಾನಗಲ್ಲ ಪುರಸಭೆಯ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜು ಮುನ್ಸಿಪಲ್ ಕಾರ್ಮಿಕರ ಸಂಘದ ಹಾನಗಲ್ಲ ಗುತ್ತಿಗೆ ನೌಕರರ ಘಟಕ ಮುಖ್ಯಾಧಿಕಾರಿಗಳಿಗೆ ಮನವಿ ಅರ್ಪಿಸಿ ಒತ್ತಾಯಿಸಿತು.

      ಮಂಗಳವಾರ ಮುಖ್ಯಾಧಿಕಾರಿಗೆ ಅರ್ಪಿಸಿದ ಮನವಿಯಲ್ಲಿ ಹಾನಗಲ್ಲ ಪುರಸಭೆ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು , ನೀರು ಸರಬರಾಜು ಸಿಬ್ಬಂದಿ ಹಾಗೂ ಗಣಕ ಯಂತ್ರ ಸಿಬ್ಬಂದಿ ಸೇರಿದಂತೆ 50 ಕಾರ್ಮಿಕರನ್ನು ಖಾಯಂಗೊಳಿಸಿವಂತೆ ಒತ್ತಾಯಿಸಿದರು.

       ಡಿಶೆಂಬರ 13 ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನಾವು ನೀಡಿದ ಶರತ್ತುಗಳನ್ನು ಸರಕಾರ ಈಡೇರಿಸಬೇಕು. ಪೌರ ಕಾರ್ಮಿಕರ ಹೊಸ ನೇಮಕಾತಿಯನ್ನು ಕೈಬಿಟ್ಟು ಈಗ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರನ್ನೇ ಖಾಯಂಗೊಳಿಸಬೇಕು. ಖಾಯಮಾತಿಗೆ 45 ವರ್ಷದ ವಯೋಮಿತಿ ಮಾನದಂಡ ಇರಬಾರದು, ಪೌರಕಾರ್ಮಿಕರು, ಲೋಡರ್, ಡ್ರೈವರ, ವಾಟರ್‍ಮ್ಯಾನ್, ಕಂಪ್ಯೂಟರ ಆಪರೇಟರ್, ಕಸದ ಆಟೋ ಚಾಲಕ, ಕಛೇರಿ ಸಹಾಯಕ ಇವರನ್ನು ಗುತ್ತಿಗೆ ಪದ್ಧತಿಯಿಂದ ನಿಷೇಧಿಸಿ ನೇರವಾಗಿ ವೇತನ ನೀಡುವಂತಾಗಬೇಕು. ಕೆಲಸ ಮಾಡುತ್ತಿರುವ ಎಲ್ಲ ಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕು. ಐದಾರು ತಿಂಗಳಿನಿಂದ ವೇತನ ನೀಡುತ್ತಿಲ್ಲ. ಹಾಗೂ ವೇತನವನ್ನು ಪರಿಸ್ಕರಿಸುತ್ತಿಲ್ಲ. ಇಂಥ ಸಮಸ್ಯೆಗಳಿಗೆ ಪರಿಹಾರ ನೀಡಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

         ನಿಸಾರಅಹ್ನದ ಹಾನಗಲ್ಲ, ಬಸವರಾಜ ಚನಗೌಡರ, ಶಿಶಂಕರ ಹರಿಜನ, ನಾಗರಾಜ ತಿಳವಳ್ಳಿ, ಎಂ.ಎಂ.ಹಬೀಬ, ಫಕ್ಕೀರೇಶ ಹರಿಜನಪರಶುರಾಮ ಮೂಲಿಮನಿ, ರಾಘವೇಂದ್ರ ಚಿಕ್ಕೇರಿ, ಪ್ರದೀಪ ಕಟ್ಟಿಮನಿ ನಿಂಗಪ್ಪ ಹರಿಜನ, ಮಂಜುನಾಥ ಹರಿಜನ, ನಠಾಗರಾಜ ಹರಿಜನ, ಅಜ್ಜಪ್ಪ ಹರಿಜನ, ಪರಶುರಾಮ ಗೊರನವರ ಸೇರಿದಂತೆ 47 ಕ್ಕೂ ಅಧಿಕ ಕಾರ್ಮಿಕರು ಮನವಿ ಸಲ್ಲಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here