ಹರಪನಹಳ್ಳಿ ಬಿಜೆಪಿ ಘಟಕದಿಂದ ಏಕತಾ ಓಟ

0
9

ಹರಪನಹಳ್ಳಿ:

        ದೇಶದ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ರಾಷ್ಟ್ರೀಯ ಏಕತಾ ದಿನ ಆಚರಿಸಲಾಯಿತು.

       ಈ ನಿಮಿತ್ತ ಹಿರೇಕೇರಿ ವೃತ್ತ, ಶಿರಿಸಪ್ಪ ಹಿಜಾರಿ ವೃತ್ತ, ಹಳೇ ಬಸ್ ನಿಲ್ದಾಣ, ಹೊಸಪೇಟೆ ರಸ್ತೆ ಮೂಲಕ ಐ.ಬಿ.ವೃತ್ತದವರಿಗೆ ಏಕತಾ ಓಟ ನಡೆಸಲಾಯಿತು.

        ತಾಲ್ಲೂಕು ಅಧ್ಯಕ್ಷ ಕೆ.ಲಕ್ಷ್ಮಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ನರ್ಮದಾ ನದಿ ತೀರದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ 182 ಮೀಟರ್ ಎತ್ತರದ ಬೃಹತ್ ಪ್ರತಿಮೆ ಸ್ಫಾಪಿಸಿ ಮಹಾನ್ ನಾಯಕನಿಗೆ ಗೌರವ ಸಮರ್ಪಸಿದ್ದಾರೆ ಎಂದು ಸ್ಮರಿಸಿದರು.

        ತಾಲ್ಲೂಕು ಉಪಾಧ್ಯಕ್ಷ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, `ಹರಿದು ಹಂಚಿ ಹೋಗಿದ್ದ ದೇಶವನ್ನು ಏಕೀಕರಣಗೊಳಿಸಿ ಅಖಂಡ ಭಾರತ ನಿರ್ಮಾಣದಲ್ಲಿ ಪಟೇಲರ ಶ್ರಮ ಅಪಾರ. ದೇಶದ ಭದ್ರತೆ ಹಾಗೂ ಶಾಂತಿ ಕದಡುವ ಬೆದರಿಕೆಗಳನ್ನು ಹಿಮ್ಮೆಟ್ಟಿಸಿ ದೇಶದ ಸುಭದ್ರೆ ಕಾಪಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇಂತಹ ಮಹಾನ್ ನಾಯಕನ ಜನ್ಮ ದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದರು.

        ಏಕತಾ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಈ ಸಂದರ್ಭಧಲ್ಲಿ ಮುಖಂಡರಾದ ನಿಟ್ಟೂರು ಸಣ್ಣಹಾಲಪ್ಪ, ಆರ್.ಲೋಕೇಶ್, ಬಿ.ವೈ. ವೆಂಕಟೇಶ್ನಾಯ್ಕ, ಬಾಗಳಿ ಮಂಜುನಾಥ, ಲಿಂಬ್ಯಾನಾಯ್ಕ, ಕೆಂಚಪ್ಪ, ಬಿ.ಜಗದೀಶ್, ಮಲ್ಲೇಶ್ ಹಾಗೂ ಕಾರ್ಯಕರ್ತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here