ರಸ್ತೆ ಅಗಲೀಕರಣಕ್ಕೆ ಶೀಘ್ರವೇ ಕ್ರಮ;ತಿಪ್ಪಾರೆಡ್ಡಿ

0
4

ಚಿತ್ರದುರ್ಗ

      ನಗರದ ಪ್ರವಾಸಿ ಮಂದಿರದಿಂದ ನ್ಯಾಯಾಲಯದವರೆಗೆ, ಗುರುಭವನದಿಂದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದವರೆಗೆ ನಡೆಯುತ್ತಿರುವ ಸಿಮೆಂಟ್ ರಸ್ತೆ ಕಾಮಗಾರಿಯನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಶನಿವಾರ ವಿಕ್ಷಣೆ ಮಾಡಿದರು.

        ಪ್ರವಾಸಿಮಂದಿರದಿಂದ ನ್ಯಾಯಾಲಯದವರೆಗೆ ಹೋಗುವ ರಸ್ತೆಯನ್ನು ಮತ್ತಷ್ಟು ಅಗಲ ಮಾಡಿ ಈಗ ಮಾಡಿರುವ ಅಗಲ ಸಾಕಾಗುವುದಿಲ್ಲ, ಮುಂದೆ ಸಮಸ್ಯೆಯಾಗಬಹುದಾಗಿದೆ ಇದರಿಂದ ಈಗಲೇ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಅದ್ದರಿಂದ ಶಿಲ್ಪಭವನ ಮತ್ತು ಪಾರ್ಕನ ಕಾಂಪೊಂಡ್ ಗೋಡೆಯನ್ನು ಹಿಂದಕ್ಕೆ ಹಾಕುವುದರ ಮೂಲಕ ರಸ್ತೆಯನ್ನು ಆಗಲ ಮಾಡಿ ಎಂದು ಸೂಚನೆ ನೀಡಿದ ಶಾಸಕರು, ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಿಂದ ಗುರುಭವನದವರೆಗಿನ ರಸ್ತೆಯನ್ನು ಮತ್ತಷ್ಟು ಅಗಲ ಮಾಡಿ ಈಗಲೇ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಿ ಅಡ್ಡ ಇರುವ ಮರಗಳನ್ನು ತೆಗೆದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಂಡುವಂತೆ ಕಾಮಗಾರಿಯನ್ನು ನಡೆಸುತ್ತಿರುವ ಇಂಜಿನಿಯರ್, ಗುತ್ತಿಗೆದಾರರಿಗೆ ಸೂಚನೆ ನೀಡಿದರು.

       ಗುರುಭವನದ ಹತ್ತಿರವೂ ಸಹಾ ರಸ್ತೆಯನ್ನು ಸಾಧ್ಯವಾದಷ್ಟು ಅಗಲೀಕರಣ ಮಾಡಿ ಇದಕ್ಕೆ ಮರಗಳು ಅಡ್ಡ ಬಂದರೆ ತೆರವು ಮಾಡಿ ಎಂದಾಗ ಪೌರಾಯುಕ್ತ ಚಂದ್ರಪ್ಪ ಮರಗಳು ಅಡ್ಡ ಬರುವುದಿಲ್ಲ, ಬಂದರು ಸಹಾ ಅಷ್ಟಾಗಿ ತೊಂದರೆಯಾಗುವುದಿಲ್ಲ ಎಂದು ಮಾಹಿತಿ ನೀಡಿದಾಗ ತಾಂತ್ರಿಕವಾಗಿ ನೀವುಗಳು ಸಮಸ್ಯೆಯನ್ನು ಪರಿಹಾರ ಮಾಡಿಕೊಂಡು ಕಾಮಗಾರಿಯನ್ನು ಪೂರ್ಣ ಮಾಡಿ ಎಂದು ತಿಳಿಸಿ ಅಲ್ಲಿ ರಸ್ತೆಯ ಪಕ್ಕದಲ್ಲಿದ್ದ ಡಬ್ಬದಂಗಡಿಗಳನ್ನು ಈಗ ತೆರವು ಮಾಡಿ ಕಾಮಗಾರಿ ಆದ ಮೇಲೆ ನಿರ್ಮಾಣ ಮಾಡಿ ಎಂದು ತಿಳಿಸಿದರು.

         ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಚಳ್ಳಕರೆ ಗೇಟ್‍ನಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ಅಗಲೀಕರಣಕ್ಕೆ ಸರ್ಕಾರದಿಂದ 25 ಕೋಟಿ ಹಣ ಬಂದಿದ್ದು ಅದರಲ್ಲಿ ಆಗಲೀಕರಣಕ್ಕೆ 19 ಕೋಟಿ ಹಣವನ್ನು ಬಳಕೆ ಮಾಡಲಾಗಿದೆ ಉಳಿದ 6 ಕೋಟಿ ಹಣವನ್ನು ಈ ರಸ್ತೆಗಳ ಕಾಮಗಾರಿಗೆ ಬಳಕೆ ಮಾಡಲಾಗುತ್ತಿದೆ, ಮುಂದಿನ ದಿನಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ಉತ್ತಮ ಗುಣಮಟ್ಟದ ರಸ್ತೆಯ ನಿರ್ಮಾಣ ಕಾರ್ಯವನ್ನು ಮಾಡಲು ಸೂಚನೆ ನೀಡಲಾಗಿದೆ ಎಂದರು.

         ಚಳ್ಳಕರೆ ಟೋಲ್‍ಗೇಟಿನಿಂದ ಹಿಡಿದು ಡಿ.ಎಚ್.ಓ. ಹಳೇ ನಗರಸಭೆ, ಹೊಸ ನಗರಸಭೆಯಿಂದ ಪ್ರವಾಸಿ ಮಂದಿರದವರೆಗೆ ರಸ್ತೆಯ ಆಗಲೀಕರಣ ಮಾಡಲಾಗುತ್ತದೆ. ಇದಕ್ಕೆ ಅಡ್ಡಿಯಾಗುವ ಮರಗಳನ್ನು ಸಹಾ ಅನಿವಾರ್ಯವಾಗಿ ತೆಗೆಯಬೇಕಾಗುತ್ತದೆ ಜನ ಸಂಚಾರಕ್ಕೆ ಸುಗಮ ರಸ್ತೆಗಳು ಅನಿವಾರ್ಯವಾಗಿದೆ ಎಂದರು.

        ಈ ಸಂದರ್ಭದಲ್ಲಿ ತಹಶೀಲ್ದಾರ್ ಕಾಂತರಾಜ್, ನಗರಸಭೆ ಆಯುಕ್ತ ಚಂದ್ರಪ್ಪ, ಇಂಜಿನಿಯರ್ ಕೃಷ್ಣಮೂರ್ತಿ, ನಗರಾಭೀವೃದ್ದಿ ಪ್ರಾಧಿಕಾರರ ಆಯುಕ್ತರಾದ ಸೋಮಶೇಖರ್, ಪುಟ್ಟಸ್ವಾಮಿ, ಕೋಪರೇಟಿವ್ ಸೊಸೈಟಿಯ ಅಧ್ಯಕ್ಷ ನಿಶಾನಿ ಜಯ್ಯಣ್ಣ, ಗುತ್ತಿಗೆದಾರರಾದ ಬಲರಾಮ ರೆಡ್ಡಿ ಒಳ ಚರಂಡಿ ಮತ್ತು ನೀರು ಸಬರಾಜು —ಮಂಡಳಿಯ ಇಂಜಿನಿಯರ್ ಹನುಮಂತಪ್ಪ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here