ಡಿಎಸ್- ಮ್ಯಾಕ್ಸ್ ಸಂಸ್ಥೆಯಿಂದ ಸಾಹಿತ್ಯ ಶ್ರೀ ಪ್ರಶಸ್ತಿಗಳನ್ನು ಪ್ರದಾನ

0
10

ಬೆಂಗಳೂರು

           ಮನೆಮನಗಳಲ್ಲಿ ನಿತ್ಯ ಕನ್ನಡ ಡಿಂಡಿಮ ಮೊಳಗಬೇಕು . ಪ್ರತಿಯೊಬ್ಬರೂ ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.ಪ್ರತಿಯೊಂದು ಮನೆಯಲ್ಲೂಗ್ರಂಥ ಭಂಡಾರ ನಿರ್ಮಿಸಬೇಕುಎಂದು ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಖ್ಯಾತ ಸಾಹಿತಿ ಮಲ್ಲೇಪುರ ಟಿ. ವೆಂಕಟೇಶ್ ಇಂದಿಲ್ಲಿ ಕರೆ ನೀಡಿದ್ದಾರೆ.

            ನಗರದಲ್ಲಿಂದು ಡಿಎಸ್- ಮ್ಯಾಕ್ಸ್‍ಕಟ್ಟಡ ನಿರ್ಮಾಣ ಸಂಸ್ಥೆ ಆಯೋಜಿಸಿದ್ದ ಕನ್ನಡರಾಜ್ಯೋತ್ಸವ ಹಾಗೂ ಸಾಹಿತ್ಯ ಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದಅವರು, ಕನ್ನಡ ಪುಸ್ತಕಗಳು ಚಿನ್ನ, ಬೆಳ್ಳಿ, ವಜ್ರ, ವೈಡೂರ್ಯಕ್ಕಿಂತ ಮೌಲ್ಯ ಹೊಂದಿದೆ.ಪ್ರತಿಯೊಬ್ಬರುಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.ಮುಂದಿನ ಪೀಳಿಗೆಗೂ ಕನ್ನಡದ ಪುಸ್ತಕಗಳ ಪರಿಚಯ ಮಾಡಬೇಕು.ಇದರಿಂದಕನ್ನಡ ಬೆಳೆಸುವ ಜತೆಗೆಎಲ್ಲೆಡೆಕನ್ನಡದ ವಾತಾವರಣವನ್ನು ನಿರ್ಮಾಣ ಮಾಡಬಹುದುಎಂದರು.

          ಎಲ್ಲರೂಚಿನ್ನ, ವಜ್ರ, ವೈಡೂರ್ಯಗಳನ್ನು ಕೊಳ್ಳುತ್ತಾರೆ.ನನ್ನ ಪ್ರಕಾರಕನ್ನಡ ಪುಸ್ತಕಗಳು ಇದಕ್ಕಿಂತ ಮಿಗಿಲು. ಹಾಗಾಗಿ ಎಲ್ಲರೂಕನ್ನಡ ಪುಸ್ತಕಗಳನ್ನು ಕೊಂಡುಓದಬೇಕು.ಪ್ರತಿಯೊಬ್ಬರುಯಾವುದಾದರೂಒಂದುಕನ್ನಡದ ಪತ್ರಿಕೆಗಳನ್ನು ಮನೆಗೆ ತರಿಸಿಕೊಳ್ಳಬೇಕು.ಇದುಕನ್ನಡದ ಓದಿನ ಅರಿವನ್ನು ವಿಸ್ತರಿಸುವಜತೆಗೆ ಮಕ್ಕಳಿಗೂ ಜ್ಞಾನಾರ್ಜನೆಗೆ ಅವಕಾಶ ನೀಡುತ್ತದೆಎಂದರು.

        ಶ್ಲಾಘನೆ: ಕನ್ನಡ ರಾಜ್ಯೋತ್ಸವ ಇಡೀ ನವೆಂಬರ್ ತಿಂಗಳು ನಡೆಯುವ ಕನ್ನಡದ ಹಬ್ಬ. ಈ ಹಬ್ಬದಲ್ಲಿ ಎಲೆಮರೆ ಕಾಯಿಯಂತೆ ಕನ್ನಡ ಸೇವೆ ಮಾಡುವ ಸಾಹಿತಿಗಳು, ಕಲಾವಿದರು, ಸಂಗೀತಗಾರರು, ಬರಹಗಾರರನ್ನು ಗುರುತಿಸಿ ಸನ್ಮಾನ ಮಾಡುವುದು ನಿಆಠ್ಪ್ರ್ಸಿ ದೊಡ್ಡ ಕಾರ್ಯ ಎಂದು ಅವರು ಹೇಳಿದರು.

       ನವೆಂಬರ್ ತಿಂಗಳಿನಲ್ಲಿ ರಾಜ್ಯದ ಎಲ್ಲೆಡೆ ರಾಜ್ಯ ಸರ್ಕಾರದಜತೆಗೆ ಹಲವು ಸಂಘ ಸಂಸ್ಥೆಗಳು ಸಾಹಿತಿಕಲಾವಿದರನ್ನು ಸನ್ಮಾನಿಸುವ ಒಳ್ಳೆಯ ಕೆಲಸ ಮಾಡುತ್ತಿವೆ. ಡಿಎಸ್ ಮ್ಯಾಕ್ಸ್ ಸಂಸ್ಥೆ ಸಹ ಎಲೆಮರೆಯಲ್ಲಿರುವ ಸಾಹಿತಿಗಳನ್ನು ಗುರುತಿಸಿ ಅವರನ್ನುಗೌರವಿಸುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದರು.

        ಈ ಸಮಾರಂಭದಲ್ಲಿ ದೊಡ್ಡ ದೊಡ್ಡ ವಿದ್ವಾಂಸರು, ಸಾಹಿತಿಗಳನ್ನು ಸನ್ಮಾನಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಲ್ಲೇಪುರಂ ಟಿ. ವೆಂಕಟೇಶ್‍ಅವರು, ಉತ್ತರಕರ್ನಾಟಕ, ಹೈದರಾಬಾದ್-ಕರ್ನಾಟಕ, ಮಧ್ಯಕರ್ನಾಟಕ, ದಕ್ಷಿಣಕರ್ನಾಟಕ ಹೀಗೆ ಎಲ್ಲ ಭಾಗದ ಸಾಹಿತಿಗಳನ್ನು ಕರೆದು ಗೌರವಿಸಿರುವ ಕೆಲಸ ಮಾಡಿರುವುದಕ್ಕೆ ಡಿಎಸ್ ಮ್ಯಾಕ್ಸ್ ಸಂಸ್ಥೆಯನ್ನು ಅಭಿನಂದಿಸಿದರು.

        ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ನಾಡಿನಖ್ಯಾತ ಸಾಹಿತಿಗಳಾದ . ಎಂ.ಜಿ. ನಾಗರಾಜ್, ಡಾ.ವೀರಣ್ಣ ರಾಜೂರಾ, ಡಾ.ಡಿ.ಎನ್. ಅಕ್ಕಿ, ಡಾ.ಜಗನ್ನಾಥ್ ಹೆಬ್ಬಾಳೆ, ಪ್ರೇಮಾಭಟ್ ಮತ್ತು ಹೆಚ್.ಟಿ.ಶೈಲಜಾ ಅವರಿಗೆ ಡಿಎಸ್ ಮ್ಯಾಕ್ಸ್ ಸಾಹಿತ್ಯ ಪ್ರಶಸ್ತಿ ನೀಡಿಗೌರವಿಸಲಾಯಿತು ಈ ಪ್ರಶಸ್ತಿಯು 15 ಸಾವಿರರೂ.ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.

        ಈ ಸಂದರ್ಭದಲ್ಲಿ ಡಿಎಸ್ ಮ್ಯಾಕ್ಸ್ ಸಂಸ್ಥೆಯಅಧ್ಯಕ್ಷಡಾ. ಕೆ.ವಿ. ಸತೀಶ್, ನಿರ್ದೇಶಕಎಸ್.ಪಿ.ದಯಾನಂದ್, ಬಸವರಾಜಗುರೂಜಿ, ಉಪನ್ಯಾಸಕ ಹಾಗೂ ಸಾಹಿತಿಡಾ. ವೀರಭದ್ರಪ್ಪಅಂಚಿನಮನೆ, ಬಿಬಿಎಂಪಿ ಸದಸ್ಯಆನಂದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here